ಉಡುಪಿ: ರಸ್ತೆ ದಾಟುತ್ತಿದ್ದ ಮುಳ್ಳುಹಂದಿಗೆ ಕಾರು ಡಿಕ್ಕಿ | ಚಾಲಕನಿಗೆ ಗಾಯ, ಮುಳ್ಳುಹಂದಿ ಸ್ಥಳದಲ್ಲೇ ಸಾವು

ರಸ್ತೆ ದಾಟುತ್ತಿದ್ದ ಮುಳ್ಳು ಹಂದಿಯೊಂದಕ್ಕೆ ಕಾರೊಂದು ಡಿಕ್ಕಿಯಾಗಿ ಪೊದೆಯೊಂದಕ್ಕೆ ಪಲ್ಟಿಯಾದ ಘಟನೆ ಉಡುಪಿಯ ಎರ್ಮಾಳು ತೆಂಕ ರಾ.ಹೆ 66ರಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರು ತೆಂಕ ಎರ್ಮಾಳು ಗರೋಡಿ ಬಳಿ ಸಾಗುತ್ತಿದಂತೆಯೇ ಮುಳ್ಳು ಹಂದಿಯೊಂದು ರಸ್ತೆಗಡ್ಡವಾಗಿ ಬಂದಿತ್ತು. ಈ ಸಂದರ್ಭ ಕಾರು ನಿಯಂತ್ರಣ ಕಳೆದುಕೊಂಡು ಸುಮಾರು ನೂರು ಮೀಟರ್ ಸಾಗಿ ಪೊದೆಗೆ ಉರುಳಿ ಬಿದ್ದಿದೆ. ಕಾರಿನಲ್ಲಿ ಚಾಲಕನೊರ್ವನೇ ಪ್ರಯಾಣಿಸುತ್ತಿದ್ದು ಪಲ್ಟಿಯಾದ ಪರಿಣಾಮ ತಲೆಗೆ ಪೆಟ್ಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನ ಹೊಡೆತಕ್ಕೆ ಮುಳ್ಳು ಹಂದಿ ಸ್ಥಳದಲ್ಲೇ ಮೃತಪಟ್ಟಿದ್ದು ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.