ಮನೆಯಲ್ಲಿಯೇ ಕುಳಿತು ಕೈತುಂಬಾ ಸಂಪಾದನೆ ಮಾಡಬೇಕೆಂದು ಆಲೋಚಿಸುತ್ತಿದ್ದೀರಾ?? | ಹಾಗಾದರೆ ಇಲ್ಲಿದೆ ನಿಮಗೊಂದು ಕಡಿಮೆ ಹೂಡಿಕೆಯ ಅತಿ ಸುಲಭವಾದ ವ್ಯವಹಾರದ ಮಾಹಿತಿ

ಮನೆಯಲ್ಲೇ ಕುಳಿತು ಆರಾಮಾಗಿ ಕೈತುಂಬಾ ಸಂಪಾದನೆ ಮಾಡಬೇಕೆಂದು ಅಂದುಕೊಂಡಿದ್ದರೆ ನಿಮಗೊಂದು ದಾರಿ ಇಲ್ಲಿದೆ. ನಿಮಗೊಂದು ಸುಲಭ ವ್ಯವಹಾರದ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ. ಈ ವ್ಯವಹಾರ ಪ್ರಾರಂಭಿಸುವ ಮೂಲಕ ನೀವು ಕೈತುಂಬಾ ಹಣ ಗಳಿಸಲು ಸಾಧ್ಯವಾಗುತ್ತದೆ. ಈ ದಿನಗಳಲ್ಲಿ ಈ ವ್ಯವಹಾರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಸ್ವಲ್ಪ ಹಣ ಹೂಡಿಕೆ ಮಾಡುವ ಮೂಲಕ ನೀವು ಈ ಬ್ಯುಸಿನೆಸ್ ಪ್ರಾರಂಭಿಸಬಹುದು. ಈ ವ್ಯವಹಾರದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇದು ಬೋನ್ಸಾಯ್ ಗಿಡಗಳ ಬ್ಯುಸಿನೆಸ್. ಇತ್ತೀಚಿನ ದಿನಗಳಲ್ಲಿ ಈ ಔಷಧೀಯ ಸಸ್ಯಗಳಿಗೆ ಬೇಡಿಕೆ ಬಹಳಷ್ಟು ಹೆಚ್ಚಾಗಿದೆ. ಅನೇಕ ಜನರು ಈ ವ್ಯವಹಾರದಿಂದ ಸಾಕಷ್ಟು ಹಣವನ್ನು ಗಳಿಸುತ್ತಿದ್ದಾರೆ. ನೀವೂ ಬೋನ್ಸಾಯ್ ಗಿಡವನ್ನು ಬೆಳೆಸಿ ಮಾರಾಟ ಮಾಡಲು ಆರಂಭಿಸಬಹುದು.

ಬೋನ್ಸಾಯ್ ಸಸ್ಯವನ್ನು ಅಲಂಕಾರದ ಹೊರತಾಗಿ ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರಕ್ಕೂ ಬಳಸಬಹುದು. ಈ ಉದ್ಯಮ ಆರಂಭಿಸಲು ಕೇಂದ್ರ ಸರ್ಕಾರವೂ ಆರ್ಥಿಕ ನೆರವು ನೀಡುತ್ತದೆ. ನೀವು 5 ರಿಂದ 20 ಸಾವಿರ ರೂ.ಗಳಲ್ಲಿ ಚಿಕ್ಕದಾಗಿಯೇ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಆರಂಭದಲ್ಲಿ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಸಣ್ಣ ಅಥವಾ ದೊಡ್ಡ ಮಟ್ಟದಲ್ಲಿ ಪ್ರಾರಂಭಿಸಬಹುದು. ಲಾಭ ಮತ್ತು ಮಾರಾಟ ಹೆಚ್ಚಾದಾಗ ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸಬಹುದು.

ನೀವು ಈ ವ್ಯವಹಾರವನ್ನು ಎರಡು ರೀತಿಯಲ್ಲಿ ಮಾಡಬಹುದು. ಮೊದಲು ನೀವು ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ನಿಮ್ಮ ಮನೆಯಲ್ಲಿ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಆದರೆ ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ಬೋನ್ಸಾಯ್ ಗಿಡ ಸಿದ್ಧವಾಗಲು ಕನಿಷ್ಠ ಎರಡರಿಂದ ಐದು ವರ್ಷ ಬೇಕು. ಇದಲ್ಲದೇ ನರ್ಸರಿಯಿಂದ ಸಿದ್ಧವಾದ ಗಿಡಗಳನ್ನು ತಂದು ಶೇ.30ರಿಂದ 50ರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು.

ಅನೇಕ ಜನರು ಇದನ್ನು ಅದೃಷ್ಟದ ಸಸ್ಯವೆಂದು ಪರಿಗಣಿಸುತ್ತಾರೆ. ಅದಕ್ಕಾಗಿಯೇ ಇದನ್ನು ಮನೆ ಮತ್ತು ಕಚೇರಿಯಲ್ಲಿ ಅಲಂಕಾರಕ್ಕಾಗಿ ಇಡಲಾಗುತ್ತದೆ. ಹಾಗಾಗಿ ಈ ಗಿಡಕ್ಕೆ ಸಾಕಷ್ಟು ಬೇಡಿಕೆ ಹೆಚ್ಚಿದೆ. ಈ ಗಿಡಗಳನ್ನು ಮಾರುಕಟ್ಟೆಯಲ್ಲಿ 200 ರೂ.ನಿಂದ ಸುಮಾರು 2,500 ರೂ.ವರೆಗೆ ಮಾರಾಟ ಮಾಡಬಹುದು. ಇದಲ್ಲದೇ ಬೋನ್ಸಾಯ್ ಗಿಡದ ಬಗ್ಗೆ ಅಭಿಮಾನ ಹೊಂದಿರುವ ಜನರು ಹೆಚ್ಚಿನ ಮೊತ್ತಕ್ಕೆ ಖರೀದಿಸುತ್ತಾರೆ.

ಈ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಶುದ್ಧ ನೀರು, ಮರಳು ಮಣ್ಣು ಅಥವಾ ಮರಳು, ಮಡಕೆ ಮತ್ತು ಗಾಜಿನ ಮಡಕೆ, 100 ರಿಂದ 150 ಚದರ ಅಡಿ ನೆಲ ಅಥವಾ ಛಾವಣಿ, ಕ್ಲೀನ್ ಬೆಣಚುಕಲ್ಲುಗಳು ಅಥವಾ ಗಾಜಿನ ಪಾತ್ರೆಗಳು, ತೆಳುವಾದ ತಂತಿ, ಸಸ್ಯಗಳಿಗೆ ನೀರನ್ನು ಸಿಂಪಡಿಸಲು ಸ್ಪ್ರೇ ಬಾಟಲ್ ಅಗತ್ಯವಿದೆ. ಈ ವ್ಯವಹಾರವನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಲು ಸುಮಾರು 5 ಸಾವಿರ ರೂ. ಬೇಕಾಗುತ್ತವೆ. ಮತ್ತೊಂದೆಡೆ ನೀವು ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಲು ಬಯಸಿದರೆ 20 ಸಾವಿರ ರೂ.ವರೆಗೆ ವೆಚ್ಚವಾಗುತ್ತದೆ.

ಅವಶ್ಯಕತೆ ಮತ್ತು ಸಸ್ಯಗಳ ಜಾತಿಗೆ ಅನುಗುಣವಾಗಿ ನೀವು ಒಂದು ಹೆಕ್ಟೇರ್‌ನಲ್ಲಿ 1,500 ರಿಂದ 2,500 ಸಸಿಗಳನ್ನು ನೆಡಬಹುದು. ನೀವು 3×2.5 ಮೀಟರ್‌ನಲ್ಲಿ ಸಸಿ ನೆಟ್ಟರೆ ಒಂದು ಹೆಕ್ಟೇರ್‌ನಲ್ಲಿ ಸುಮಾರು 1,500 ಗಿಡಗಳನ್ನು ನೆಡಲಾಗುತ್ತದೆ. 2 ಗಿಡಗಳ ನಡುವೆ ಉಳಿದಿರುವ ಜಾಗದಲ್ಲಿ ಒಟ್ಟಿಗೆ ಇನ್ನೊಂದು ಬೆಳೆ ಬೆಳೆಯಬಹುದು. 4 ವರ್ಷಗಳ ನಂತರ 3 ರಿಂದ 3.5 ಲಕ್ಷ ರೂ. ಗಳಿಸಲು ಸಾಧ್ಯವಾಗುತ್ತದೆ. ಪ್ರತಿ ವರ್ಷ ಬೋನ್ಸಾಯ್ ಗಿಡಗಳನ್ನು ಕಸಿ ಮಾಡುವ ಅಗತ್ಯವಿಲ್ಲ. ಏಕೆಂದರೆ ಈ ಬಿದಿರಿನ ಸಸ್ಯವು ಸುಮಾರು 40 ವರ್ಷಗಳವರೆಗೆ ಇರುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೆರವು

3 ವರ್ಷಗಳಲ್ಲಿ ಪ್ರತಿ ಗಿಡಕ್ಕೆ ಸರಾಸರಿ 240 ರೂ. ವೆಚ್ಚ ಬರಲಿದ್ದು, ಇದರಲ್ಲಿ ಪ್ರತಿ ಗಿಡಕ್ಕೆ 120 ರೂ.ಗೆ ಸರ್ಕಾರದ ನೆರವು ದೊರೆಯಲಿದೆ. ಈ ಬ್ಯುಸಿನೆಸ್ ಪ್ರಾರಂಭಿಸಲು ಸರ್ಕಾರದಿಂದ ನಿಮಗೆ ಶೇ.50ರಷ್ಟು ಹಣದ ನೆರವು ಸಿಗುತ್ತದೆ. ಇನ್ನುಳಿದ ಶೇ.50ರಷ್ಟು ಹಣವನ್ನು ನೀವು ಹೂಡಬೇಕಾಗುತ್ತದೆ. ಜಿಲ್ಲೆಯ ನೋಡಲ್ ಅಧಿಕಾರಿಗಳು ನಿಮಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತಾರೆ.

Leave A Reply

Your email address will not be published.