ತನ್ನ 24 ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝಾಯಿ

ನವದೆಹಲಿ:2012 ರಲ್ಲಿ ತಾಲಿಬಾನ್ ಬಂದೂಕುಧಾರಿಯಿಂದ ಗುಂಡೇಟಿನಿಂದ ಗಾಯಗೊಂಡು ಬದುಕುಳಿದ ಬಾಲಕಿಯರ ಶಿಕ್ಷಣದ ಪ್ರಚಾರಕಿ ಮತ್ತು ತಮ್ಮ 17ನೇ ವಯಸ್ಸಿನಲ್ಲಿ ನೋಬೆಲ್ ಪ್ರಶಸ್ತಿಯನ್ನು ಬಾಚಿಕೊಂಡ ಮಲಾಲ ಯೂಸುಫ್ ಝಾಯಿ ಅವರು 24ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಲಾಲ ಅವರು ತಮ್ಮ ಟ್ವಿಟ್ಟರ್ ಖಾತೆ ಮೂಲಕ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದು,ಮದುವೆಯಾದ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.’ಇಂದು ನನ್ನ ಜೀವನದಲ್ಲಿ ಅತ್ಯಂತ ಅಮೂಲ್ಯವಾದ ದಿನ. ಅಸ್ಸರ್ ಮತ್ತು ನಾನು ವೈವಾಹಿಕ ಜೀವನಕ್ಕೆ ಕಾಲಿಟ್ಟೆದ್ದೇವೆ. ನಾವು ನಮ್ಮ ಕುಟುಂಬಗಳೊಂದಿಗೆ ಬರ್ಮಿಂಗ್ ಹ್ಯಾಮ್‍ನಲ್ಲಿರುವ ಮನೆಯಲ್ಲಿ ಸಣ್ಣಮಟ್ಟಕ್ಕೆ ನಿಖಾ ಸಮಾರಂಭವನ್ನು ಆಚರಿಸಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆಗಳನ್ನು ನಮಗೆ ಕಳುಹಿಸಿ. ಮುಂದಿನ ಪ್ರಯಾಣದಲ್ಲಿ ನಾವು ಒಟ್ಟಿಗೆ ನಡೆಯಲು ಬಯಸಿದ್ದೇವೆ’ ಎಂದು ಬರೆದುಕೊಂಡಿದ್ದಾರೆ

ಫೋಟೋಗಳಲ್ಲಿ ತಮ್ಮ ಪತಿ ಅಸ್ಸರ್ ಮತ್ತು ಅವರ ಪೋಷಕರು ಜಿಯಾವುದ್ದೀನ್ ಯೂಸುಫ್ ಝಾಯಿ ಮತ್ತು ತೂರ್ ಪೆಕೈ ಯೂಸುಫ್ ಝಾಯಿ ಅವರೊಂದಿಗೆ ಪೋಸ್ ನೀಡುವುದನ್ನು ಕಾಣಬಹುದಾಗಿದೆ. ಫೋಟೋಗಳನ್ನು ಮಲಾಲ ಸ್ನೇಹಿತ, ಛಾಯಾಗ್ರಾಹಕ ಮತ್ತು ದೃಶ್ಯ ಪತ್ರಕರ್ತರಾದ ಮಲಿನ್ ಫೆಜೆಹೈ ಅವರು ಸೆರೆಹಿಡಿದಿದ್ದಾರೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ತಮ್ಮ ಬಾಳಸಂಗಾತಿಯ ಹೆಸರನ್ನು ಬಿಟ್ಟರೆ ಅವರ ಬಗ್ಗೆ ಬೇರೆ ಯಾವುದೇ ಮಾಹಿತಿಯನ್ನು ಮಲಾಲ ಬಿಟ್ಟುಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ನೆಟ್ಟಿಗರು ತಿಳಿದುಕೊಳ್ಳಲು ಯತ್ನಿಸಿದಾಗ ಅವರು ಲಾಹೋರ್ ಮೂಲದ ಅಸ್ಸರ್ ಮಲಿಕ್, ಪಾಕಿಸ್ತಾನದ ಬೋರ್ಡ್ ಹೈ ಪರ್ಫೋಮೆನ್ಸ್ ಸೆಂಟರ್ ನ ಜೆನೆರಲ್ ಮ್ಯಾನೇಜರ್ ಎಂದು ತಿಳಿದುಬಂದಿದೆ.

ಮಲಾಲಾ ತನ್ನ ವೈಯಕ್ತಿಕ ಧೈರ್ಯ ಮತ್ತು ಹೆಣ್ಣುಮಕ್ಕಳ ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಪ್ರತಿಪಾದಿಸುವ ವಾಕ್ಚಾತುರ್ಯಕ್ಕಾಗಿ ಪ್ರಪಂಚದ ಅನೇಕ ಭಾಗಗಳಲ್ಲಿ, ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಗೌರವಿಸಲ್ಪಟ್ಟಿದ್ದಾಳೆ.ಹೆಣ್ಣು ಮಕ್ಕಳ ಶಿಕ್ಷಣದ ಕಾರ್ಯಕರ್ತೆ, 24 ವರ್ಷದ ಮಲಾಲ ಯೂಸುಫ್ ಝಾಯಿ ಅವರು ಇತಿಹಾಸದಲ್ಲಿ ಅತ್ಯಂತ ಕಿರಿಯ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾಗಿದ್ದಾರೆ. ಮಹಿಳೆಯರಿಗೆ ಶಿಕ್ಷಣವನ್ನು ವಿರೋಧಿಸಿದಾಗ ತಾಲಿಬಾನ್ ಉಗ್ರರ ವಿರುದ್ಧ ಧ್ವನಿ ಎತ್ತಿದ್ದು, 2012ರಲ್ಲಿ ತನ್ನ ತಲೆಗೆ ಗುಂಡು ಹೊಕ್ಕಿದರೂ ಬದುಕಿ ಬಂದ ಛಲಗಾರ್ತಿ ಮಲಾಲ.

ಪಾಕಿಸ್ತಾನದಲ್ಲಿ, ಆಕೆಯ ಚಟುವಟಿಕೆಯು ಸಾರ್ವಜನಿಕರಲ್ಲಿ ಅಭಿಪ್ರಾಯ ಭೇದವಿದೆ.ಈ ವರ್ಷ ಜುಲೈನಲ್ಲಿ, ಮಲಾಲಾ ಬ್ರಿಟಿಷ್ ವೋಗ್ ಮ್ಯಾಗಜೀನ್‌ಗೆ ತಾನು ಎಂದಾದರೂ ಮದುವೆಯಾಗುತ್ತೇನೆಯೇ ಎಂದು ಖಚಿತವಾಗಿಲ್ಲ ಎಂದು ಹೇಳಿದ್ದರು. ‘ಜನರು ಯಾಕೆ ಮದುವೆಯಾಗಬೇಕು ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ನಿಮ್ಮ ಜೀವನದಲ್ಲಿ ಒಬ್ಬ ವ್ಯಕ್ತಿಯನ್ನು ಹೊಂದಲು ನೀವು ಬಯಸಿದರೆ, ನೀವು ಮದುವೆಯ ಪತ್ರಗಳಿಗೆ ಏಕೆ ಸಹಿ ಹಾಕಬೇಕು, ಅದು ಪಾಲುದಾರಿಕೆ ಏಕೆ ಆಗಬಾರದು?’ ಅವರು ಹೇಳಿದ್ದರು.ಈ ಮಾತಿಗೆ ಪಾಕಿಸ್ತಾನದ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಟೀಕೆಗೆ ಗುರಿಯಾಯಿತು.

Leave a Reply

error: Content is protected !!
Scroll to Top
%d bloggers like this: