ಇಳಂತಿಲ : ಮನೆಗೆ ಹೋಗುವ ದಾರಿಯಲ್ಲಿ ಗ್ರೆನೈಡ್ ಪತ್ತೆ ಮಾಜಿ ಸೇನಾಧಿಕಾರಿಯಿಂದ ದೂರು

ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಇಳಂತಿಲ ಜಯಕುಮಾರ್ ಪೂಜಾರಿ ಎಂಬವರ ಮನೆ ಸಮೀಪದ ದಾರಿಯಲ್ಲಿ ಯಾರೋ ಅಪರಿಚಿತರು ಗ್ರೇನೆಡ್ ಇಟ್ಟು ಹೋಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಜಯಕುಮಾರ್ ಅವರು ನ.6ರಂದು ಸಂಜೆ ಉಪ್ಪಿನಂಗಡಿಯಿಂದ ಮನೆಯ ಕಡೆಗೆ ನಡೆದುಕೊಂಡು ಬರುವಾಗ ಮನೆಯ ದಾರಿಯ ಇಳಿಜಾರಿನ ತಂತಿ ಬೇಲಿಯ ಎಡ ಭಾಗದಲ್ಲಿ ಹರಡಿದ ಹಾಗೆ ಗ್ರೆನೇಡ್ ರೀತಿಯ ಐದು ವಸ್ತುಗಳು ಕಂಡು ಬಂದಿದ್ದು ಅದರಲ್ಲಿ ಒಂದು ಗ್ರೈನೇಡ್ ಹಳದಿ ಬಣ್ಣದ ಪ್ಲಾಸ್ಟಿಕ್ ಕವರಿನ ಒಳಗಡೆ ಇದ್ದು ಉಳಿದ ನಾಲ್ಕು ಗ್ರೇನೇಡ್ ಗಳು ಅಲ್ಲಿಯೇ ಹರಡಿಕೊಂಡಿರುವ ಹಾಗೆ ಬಿದ್ದುಕೊಂಡಿದ್ದು, ಜಯಕುಮಾರ್ ಅವರು ಭೂಸೇನಾ ರೆಜಿಮೆಂಟಿನಲ್ಲಿ ಎಸ್ ಸಿ ಒ ಆಗಿ ನಿವೃತ್ತಿ ಹೊಂದಿರುವುದರಿಂದ ಈ ವಸ್ತುಗಳು ಗ್ರೈನೇಡ್ ಎಂಬುದಾಗಿ ಅವರಿಗೆ ತಿಳಿದುಬಂದಿರುತ್ತದೆ. ಈ ಗ್ರೇನೈಡ್ ಗಳನ್ನು ಕಾಡು ಪ್ರಾಣಿಗಳು ಅಥವಾ ಇತರ ಪ್ರಾಣಿಗಳು ಬೇರೆಡೆಗೆ ಕಚ್ಚಿಕೊಂಡು ಹೋಗಿ ಸಾರ್ವಜನಿಕರಿಗೆ ಅಪಾಯವಾಗಬಹುದೆಂಬುದನ್ನು ಅರಿತು ಮನೆಯ ಅಂಗಳದ ಮೂಲೆಯಲ್ಲಿಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಗ್ರಾನೈಡ್ ವಸ್ತುಗಳನ್ನು ಯಾರೋ ಅಪರಿಚಿತ ದುಷ್ಕರ್ಮಿಗಳು ಬರುವ ದಾರಿಯಲ್ಲಿ ಹಾಕಿದ್ದು, ಸದ್ರಿ ಕೃತ್ಯ ಮಾಡಿದವರ ವಿರುದ್ದ ಸೂಕ್ತ ಕಾನುನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: