Day: November 6, 2021

ಬೆಳ್ತಂಗಡಿ:ಕುದ್ರಾಯ ಸೇತುವೆ ಸಮೀಪ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ!!ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಬೆಳ್ತಂಗಡಿ ತಾಲೂಕಿನ ನಿಡ್ಲೆ ಸಮೀಪದ ಕುದ್ರಾಯ ಸೇತುವೆ ಸಮೀಪ ಇಂದು ಸಂಜೆ ಕಾರೊಂದರಲ್ಲಿ ಇದ್ದಕ್ಕಿದಂತೆ ಬೆಂಕಿ ಹೊತ್ತಿಕೊಂಡು ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಅಪಾಯ ಅರಿತ ಕೂಡಲೇ ಸ್ಥಳೀಯ ಪ್ರತ್ಯಕ್ಷದರ್ಶಿಗಳು ಬೆಂಕಿಯನ್ನು ನಂದಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ನೆಟ್ಟಾರು : ಮೊಗಪ್ಪೆ ಕೆರೆಯಲ್ಲಿ ಸ್ನೇಹಿತರ ಜತೆ ಮೀನು ಹಿಡಿಯಲು ಹೋದಾತ ನೀರಲ್ಲಿ ಮುಳುಗಿ ಸಾವು

ಪುತ್ತೂರು: ಮೀನು ಹಿಡಿಯಲೆಂದು ಸ್ನೇಹಿತರ ಜೊತೆ ಹೋದ ಸಂಪ್ಯದ ಮೂಲೆ ನಿವಾಸಿ ಸುಂದರ ಅವರ ಪುತ್ರ ಅವಿನಾಶ್ (23ವ) ರವರು ಬೆಳ್ಳಾರೆಯ ಮೊಗಪ್ಪೆ ಕೆರೆಯಲ್ಲಿ ಕಣ್ಮರೆಯಾಗಿದ್ದು ಬಳಿಕ ಪುತ್ತೂರು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಅವಿನಾಶ್ ಅವರ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ.

ಸುಬ್ರಹ್ಮಣ್ಯ : ನದಿಯಲ್ಲಿ ಮೀನು ಹಿಡಿಯಲು ಹೋದ ಯುವಕನಿಗೆ ವಿದ್ಯುತ್ ಶಾಕ್ ಹೊಡೆದು ಸಾವು

ಸುಬ್ರಹ್ಮಣ್ಯ : ದೇವಚಳ್ಳ ಗ್ರಾಮದ ಕರಂಗಲ್ಲಿನ 37 ರ ವಯೋಮಾನದ ಯುವಕನೋರ್ವ ನದಿಗೆ ಮೀನು ಹಿಡಿಯಲು ಹೋಗಿ ಕರೆಂಟ್ ಶಾಕ್ ಹೊಡೆದು ಮೃತಪಟ್ಟ ಘಟನೆ ವರದಿಯಾಗಿದೆ. ನ.5 ರ ರಾತ್ರಿ ಕರಂಗಲ್ಲಿನ ದಿ. ಕೇಶವ ಗೌಡ ಅವರ ಪುತ್ರ ಕರಂಗಲ್ಲಿನ ಪ್ರಕಾಶ್ ಎಂಬವರು ಮಾಡಬಾಕಿಲು ಭಾಗದ ನದಿಗೆ ಗೆಳೆಯನೊಂದಿಗೆ ಹೋಗಿ ಬ್ಯಾಟರಿ ಬಳಸಿ ಮೀನು ಹಿಡಿಯಲು ತೆರಳಿದ್ದಾರೆ. ಮೀನು ಹಿಡಿಯುತ್ತಿರುವ ಸಂದರ್ಭ ಇನ್ವರ್ಟರ್ ಬ್ಯಾಟರಿ ವಿದ್ಯುತ್ ಪ್ರವಹಿಸಿ ಪ್ರಕಾಶ್ ಮೃತರಾಗಿರುವುದಾಗಿ ತಿಳಿದು ಬಂದಿದೆ. ಸುಬ್ರಹ್ಮಣ್ಯ ಎಸ್ ಐ …

ಸುಬ್ರಹ್ಮಣ್ಯ : ನದಿಯಲ್ಲಿ ಮೀನು ಹಿಡಿಯಲು ಹೋದ ಯುವಕನಿಗೆ ವಿದ್ಯುತ್ ಶಾಕ್ ಹೊಡೆದು ಸಾವು Read More »

ಚೆನ್ನಾವರ : ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಮಾಸಿಕ ಮಜ್ಲಿಸ್ , ಮಸೀದಿ ನವೀಕರಣಕ್ಕೆ ಸಹಕಾರ ನೀಡಿದವರಿಗೆ ಗೌರವಾರ್ಪಣೆ

ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯದ್ದೀನ್ ಜುಮಾ ಮಸೀದಿ , ಕಿದ್ಮತುಲ್ ಇಸ್ಲಾಂ ಜಮಾತ್ ಕಮಿಟಿ ಇದರ ವತಿಯಿಂದ ಪ್ರತೀ ತಿಂಗಳು ನಡೆಸಿಕೊಂಡು ಬರುವ ಮಾಸಿಕ ಮಲ್ಹರತುಲ್ ಬದ್ರಿಯಾ ದುವಾ ಮಜ್ಲಿಸ್ ನ.5 ರಂದು ಮಗ್ರಿಬ್ ನಮಾಜಿನ ಬಳಿಕ ಸಯ್ಯದ್ ಕುಂಞ ಕೊಯ ತಂಙಳ್ ಸುಳ್ಯ ಆವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಚೆನ್ನಾವರ ಮಸೀದಿಯ ಮುದರ್ರಿಸ್ ಹಾಫೀಝ್ ನಝೀರ್ ಅಹ್ಮದ್ ಸಖಾಫಿ ಅವರು ನೇರವೇರಿಸಿದರು. ಅಧ್ಯಕ್ಷತೆಯನ್ನು ಶಾಫಿ ಚೆನ್ನಾವರ ಅವರ ವಹಿಸಿದ್ದರು. ಮಸೀದಿಯ ನವೀಕರಣದ …

ಚೆನ್ನಾವರ : ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಮಾಸಿಕ ಮಜ್ಲಿಸ್ , ಮಸೀದಿ ನವೀಕರಣಕ್ಕೆ ಸಹಕಾರ ನೀಡಿದವರಿಗೆ ಗೌರವಾರ್ಪಣೆ Read More »

ಮೀನುಗಾರಿಕೆಯ ಬೋಟ್ ನಲ್ಲಿ ಬೆಂಕಿ | ಮೀನುಗಾರರ ರಕ್ಷಣೆ

ಭಟ್ಕಳ :ಮೀನುಗಾರಿಕೆ ಮಾಡುತ್ತಿದ್ದ ಬೋಟ್ ನಲ್ಲಿ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಉಂಟಾಗಿ ಹೊತ್ತಿ ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಬ್ಬಿ ಸಮುದ್ರದಲ್ಲಿ ನಡೆದಿದೆ. ಬೋಟ್‌ನಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ‘ವರದಾ’ ಹೆಸರಿನ ಮೀನುಗಾರಿಕೆ ಬೋಟ್ ನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿದ್ದು,ಏಳು ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ಕರಾವಳಿ ಕಾವಲು ಪಡೆಯವರು ತಿಳಿಸಿದ್ದಾರೆ.

ಬಲೀಂದ್ರ ಪೂಜೆ ಮಾಡಲು ಗದ್ದೆಗೆ ಹೋಗಿದ್ದ ಯುವಕ ವಿಷ ಜಂತು ಕಡಿದು ಮೃತ್ಯು

ಉಡುಪಿ : ಬಲೀದ್ರ ಪೂಜೆ ಮಾಡುವ ಸಲುವಾಗಿ ಗದ್ದೆಗೆ ಹೋಗಿದ್ದ ಯುವಕನಿಗೆ ವಿಷ ಜಂತು ಕಡಿದ ಪರಿಣಾಮ ಆತ ಮೃತಪಟ್ಟ ಘಟನೆ ಕಾಪುವಿನಲ್ಲಿ ಶುಕ್ರವಾರ ನಡೆದಿದೆ.ಕಾಪು ಕಲ್ಯ ನಿವಾಸಿ ರೋಹಿತ್ ಕುಮಾರ್ (26) ಮೃತ ಯುವಕ. ದೀಪಾವಳಿಯ ಬಲೀಂದ್ರ ಪೂಜೆಯ ಅಂಗವಾಗಿ ಗುರುವಾರ ರಾತ್ರಿ ರೋಹಿತ್ ಕುಮಾರ್ ಮತ್ತು ಸಹೋದರರು ಗದ್ದೆಗೆ ತೆರಳಿದ್ದು, ಈ ಸಂದರ್ಭ ರೋಹಿತ್ ಅವರಿಗೆ ವಿಷ ಜಂತು ಕಡಿದಿತ್ತು. ಮನೆಯವರು ತತ್ ಕ್ಷಣ ಅವರನ್ನು ನಾಟಿ ವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. …

ಬಲೀಂದ್ರ ಪೂಜೆ ಮಾಡಲು ಗದ್ದೆಗೆ ಹೋಗಿದ್ದ ಯುವಕ ವಿಷ ಜಂತು ಕಡಿದು ಮೃತ್ಯು Read More »

ಪುನೀತ್‌ ರಾಜ್‌ಕುಮಾರ್‌ ಅವರಿಗೆ 2021ನೇ ಸಾಲಿನ ‘ಬಸವಶ್ರೀ ಪ್ರಶಸ್ತಿ’

ಇತ್ತೀಚೆಗೆ ಅಗಲಿದ ಕನ್ನಡದ ಖ್ಯಾತ ನಟ ಪುನೀತ್ ರಾಜ್‌ಕುಮಾರ್‌ರವರಿಗೆ ಮರಣೋತ್ತರವಾಗಿ 2021ನೇ ಸಾಲಿನ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲು ಮುರುಘಾ ಮಠ ನಿರ್ಧರಿಸಿದೆ. ಮುಂದಿನ ವರ್ಷ ಬಸವ ಜಯಂತಿಯಂದು ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೆ ಪ್ರಶಸ್ತಿ ಪ್ರದಾನ ಮಾಡುಲಾಗುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ. ಈ ಕುರಿತು ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪುನೀತ್ ರಾಜ್‌ಕುಮಾರ್‌ರವರು ಸರ್ಕಾರದ ಹಲವು ಸೇವೆಗಳಿಗೆ ಸಂಭಾವನೆ ಪಡೆಯದೆ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಾಲನಟನಾಗಿ, ನಾಯಕನಟನಾಗಿ, ನಿರ್ಮಾಪಕನಾಗಿ, ಹಾಡುಗಾರನಾಗಿ ಕನ್ನಡ ಚಿತ್ರರಂಗಕ್ಕೆ ಅತ್ಯಮೂಲ್ಯ …

ಪುನೀತ್‌ ರಾಜ್‌ಕುಮಾರ್‌ ಅವರಿಗೆ 2021ನೇ ಸಾಲಿನ ‘ಬಸವಶ್ರೀ ಪ್ರಶಸ್ತಿ’ Read More »

100 ಮಹಿಳೆಯರನ್ನು ಕೊಂದು ಶವಗಳನ್ನೇ ರೇಪ್ ಮಾಡಿದ ವಿಕೃತ ಕಾಮಿ!!

ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾನೂನನ್ನು ಎಷ್ಟೇ ಕಠಿಣವಾಗಿಸಿದರು ಅತ್ಯಾಚಾರಿಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ ಮತ್ತು ಈ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ಅದರಂತೆ ಇಲ್ಲೊಬ್ಬ ವ್ಯಕ್ತಿ ಅಂದರೆ ಅತ್ಯಾಚಾರಿ ಶವಗಳನ್ನು ಬಿಡದೆ ಅತ್ಯಾಚಾರ ಮಾಡುತ್ತಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ ಇಂದೊಂದು ವಿಚಿತ್ರ ಪ್ರಕರಣ. ವ್ಯಕ್ತಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಕೊನೆಗೆ ಅವರನ್ನು ಕೊಲ್ಲುತ್ತಿದ್ದ. ಕೊಂದ ಬಳಿಕ ಶವದ ಜೊತೆಗೆ ಮಲಗುತ್ತಿದ್ದ. ಹೀಗೆ ಸುಮಾರು 100 ಮಹಿಳೆಯರ ಶವದ ಜೊತೆಗೆ ಸೆಕ್ಸ್ ಮಾಡಿದ್ದಾನೆ ಎಂದು ಬೆಳಕಿಗೆ ಬಂದಿದೆ. …

100 ಮಹಿಳೆಯರನ್ನು ಕೊಂದು ಶವಗಳನ್ನೇ ರೇಪ್ ಮಾಡಿದ ವಿಕೃತ ಕಾಮಿ!! Read More »

ಐಡಿಯಲ್ ಐಸ್ಟ್ರೀಮ್ ಮಾಲಕ ಪ್ರಭಾಕರ್ ಕಾಮತ್ ಇನ್ನಿಲ್ಲ

ಮಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪ್ರಸಿದ್ಧ ಐಡಿಯಲ್ ಐಸ್ ಕ್ರೀಂ ನ ಸಂಸ್ಥಾಪಕ ಪ್ರಭಾಕರ್ ಕಾಮತ್ (79) ಅವರು ನ.6ರಂದು ನಿಧನ ಹೊಂದಿದರು. ಅ.28ರಂದು ಮಂಗಳೂರಿನ ಭಾರತ್ ಮಾಲ್ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಪ್ರಭಾಕರ್ ಕಾಮತ್ ಅವರು ಪಬ್ಬಮಾಮ್ ಎಂದೇ ಗುರುತಿಸಿಕೊಂಡು ಆಪ್ತ ವಲಯದಲ್ಲಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು. ಮಂಗಳೂರಿನ …

ಐಡಿಯಲ್ ಐಸ್ಟ್ರೀಮ್ ಮಾಲಕ ಪ್ರಭಾಕರ್ ಕಾಮತ್ ಇನ್ನಿಲ್ಲ Read More »

ಯುವತಿ ನಾಪತ್ತೆ | ಪೊಲೀಸ್ ಠಾಣೆಗೆ ದೂರು

ಕಾಸರಗೋಡು ಜಿಲ್ಲೆಯ ಕಾಸರಗೋಡು ಕೂಡ್ಲು ಪೆರ್ನಡ್ಕದ ಶ್ರೀಮತಿ (28)ಎಂಬವರು ನ.3ರಿಂದ ನಾಪತ್ತೆಯಾಗಿದ್ದಾರೆ. ಪತ್ನಿ ನಾಪತ್ತೆ ಕುರಿತಾಗಿ ಆಕೆಯ ಪತಿ ಕಾಸರಗೋಡು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಮಾಹಿತಿ ಲಭಿಸಿದವರು ಕಾಸರಗೋಡು ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ವಿನಂತಿಸಿದ್ದಾರೆ

error: Content is protected !!
Scroll to Top