Day: November 5, 2021

ನ.6 : ಶ್ರೀ ಕ್ಷೇತ್ರ ಕೆಮ್ಮಲೆಯಲ್ಲಿ ವಿಶೇಷ ಪೂಜೆ | ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಆಗಮನ

ಕಡಬ : ಎಣ್ಮೂರು ಗ್ರಾಮದ ಹೇಮಳ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ, ಬ್ರಹ್ಮರ ಮೂಲಸ್ಥಾನ, ಉಳ್ಳಾಕುಲು ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ನ.6 ರ ಶನಿವಾರ ಬೆಳಿಗ್ಗೆ ಗಂಟೆ 8.00ಕ್ಕೆ ನಡೆಯುವ ವಿಶೇಷ ಪೂಜಾ ಕಾರ್ಯದಲ್ಲಿ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರಾಗಿ ಯಶಸ್ವೀ ಬ್ರಹ್ಮಕಲಶೋತ್ಸವ ನಡೆಸಿ,ಕೇಂದ್ರ ಸಚಿವರಾದ ಬಳಿಕ ಪ್ರಥಮ ಬಾರಿಗೆ ಶೋಭಾ ಕರಂದ್ಲಾಜೆ ,ಬ್ರಹ್ಮಕಲಶೋತ್ಸವದ ಕಾರ್ಯಾಧ್ಯಕ್ಷರಾಗಿದ್ದ ಬಂದರು ಮತ್ತು ಮೀನುಗಾರಿಕೆ ಸಚಿವರಾದ ಎಸ್. ಅಂಗಾರ ಅವರು ಪಾಲ್ಗೊಳ್ಳಲಿದ್ದಾರೆ.ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ …

ನ.6 : ಶ್ರೀ ಕ್ಷೇತ್ರ ಕೆಮ್ಮಲೆಯಲ್ಲಿ ವಿಶೇಷ ಪೂಜೆ | ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಆಗಮನ Read More »

ದೀಪಗಳ ಹಬ್ಬಕ್ಕೆ ಎಲ್ ಇಡಿ ಲೈಟ್ ಸೀರೆ ಧರಿಸಿದ ಮಹಿಳೆ !! | ಮಿರಿಮಿರಿ ಮಿಂಚುತ್ತಿರುವ ಆಕೆಯ ದೀಪಾವಳಿ ಉಡುಗೆಯ ವಿಡಿಯೋ ಫುಲ್ ವೈರಲ್

ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು. ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ, ದೀಪಾವಳಿ ಹಬ್ಬದಲ್ಲಿ ಹಣತೆ, ದೀಪ, ಬೆಳಕಿಗೆ ಬಹಳ ಪ್ರಾಮುಖ್ಯತೆ ಏಕೆ ಎಂದು ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸುವುದು. ನಂದಾದೀಪವನ್ನು ಹಚ್ಚಿ ಪೂಜೆ ಪ್ರಾರಂಭಿಸುತ್ತೇವೆ. ದೀಪಗಳನ್ನೇ ಇಟ್ಟು ದೀಪದಿಂದಲೇ ಬೆಳಗುತ್ತೇವೆ, ಇಲ್ಲಿ ಲಕ್ಷ್ಮಿ ದೇವಿಯನ್ನು ನಮ್ಮ ಜೀವನ ವೃದ್ಧಿಯ, ಬೆಳಕಿನ ಸಂಕೇತವಾಗಿ ಕಾಣುತ್ತೇವೆ. ದೀಪಾವಳಿ ಎಂದರೆ ಬೆಳಕಿನ …

ದೀಪಗಳ ಹಬ್ಬಕ್ಕೆ ಎಲ್ ಇಡಿ ಲೈಟ್ ಸೀರೆ ಧರಿಸಿದ ಮಹಿಳೆ !! | ಮಿರಿಮಿರಿ ಮಿಂಚುತ್ತಿರುವ ಆಕೆಯ ದೀಪಾವಳಿ ಉಡುಗೆಯ ವಿಡಿಯೋ ಫುಲ್ ವೈರಲ್ Read More »

ವೈಕುಂಠದಲ್ಲಿ ಅಣ್ಣಾವ್ರ ಜೊತೆ ‘ಅಪ್ಪು’ ಕಣ್ಣಾಮುಚ್ಚಾಲೆ | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ಫೋಟೋ

ದೊಡ್ಮನೆ ಮಗನಾಗಿ, ಸ್ವಚ್ಛ ಸಿನಿಮಾಗಳ ನಟನಾಗಿ, ದುರ್ಬಲರ ಜೀವನದ ಆಶಾಕಿರಣವಾಗಿ ಬಾಳಿ ಬದುಕಿ ಸಾಧಿಸಿ ಇದೀಗ ಎಳೆ ವಯಸ್ಸಿನಲ್ಲೇ ಕಣ್ಮರೆಯಾಗಿ ಹೋಗಿದ್ದಾರೆ ಪುನೀತ್‌ ರಾಜ್‌ಕುಮಾರ್. ನಟನ ಸಾವು ಇಡೀ ಚಿತ್ರರಂಗ, ಕುಟುಂಬ, ಅಭಿಮಾನಿಗಳನ್ನು ಕಂಗಾಲಾಗಿಸಿದೆ. ಇದನ್ನು ಅಪ್ಪು ಅಭಿಮಾನಿಗಳು ಇಂದಿಗೂ ನಂಬಲು ಸಿದ್ಧರಿಲ್ಲ. ಅವರ ಸ್ವಚ್ಛ ನಗು, ತಿಳಿಯುವ ತುಡಿತದ ಕಣ್ಣುಗಳು, ಪುಟ್ಟ ಮಗುವಿನ ಹಾಗೇ ನಾಚಿ ನೀರಾಗುವ ವಿನಯ,ಅಪ್ಪು ನೆನಪುಕ್ಕಿಸುವ ಇಂತಹ ಹಲವು ವಿಷಯಗಳು ಸದಾ ಕಣ್ಣುಮುಂದೆ ಇರುತ್ತದೆ. ನೆನೆದಷ್ಟು ನೂರ್ಮಡಿಯಾಗುತ್ತಿರುವ ಅಪ್ಪು ಈಗ ನೆನಪು …

ವೈಕುಂಠದಲ್ಲಿ ಅಣ್ಣಾವ್ರ ಜೊತೆ ‘ಅಪ್ಪು’ ಕಣ್ಣಾಮುಚ್ಚಾಲೆ | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ಫೋಟೋ Read More »

ಭ್ರಷ್ಟಾಚಾರ ಆರೋಪ ಹೊತ್ತಿರುವ ಸಚಿವೆ ಶಶಿಕಲಾ ಜೊಲ್ಲೆಯವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಪತ್ರ ಬರೆದ ಭೀಮಪ್ಪ ಗಡಾದ

ಬೆಳಗಾವಿ: ಭ್ರಷ್ಟಾಚಾರ ಆರೋಪ ಹೊತ್ತಿರುವಂತ ಸಚಿವ ಶಶಿಕಲಾ ಜೊಲ್ಲೆಯವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ, ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಸಚಿವ ಶಶಿಕಲಾ ಜೊಲ್ಲೆಯವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು,ಅವರ ವಿರುದ್ಧ ತನಿಖೆ ನಡೆಸಿ, ಬೊಮ್ಮಾಯಿ ಸಂಪುಟದಿಂದ ಕೈಬಿಡುವಂತೆ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಪತ್ರ ಬರೆದಿದ್ದಾರೆ. ಈ ಪತ್ರವನ್ನು, ರಾಜ್ಯಪಾಲರ ಕಚೇರಿಯಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ವರ್ಗಾವಣೆ ಮಾಡಿದ್ದಾರೆ. ಈ ಪತ್ರವನ್ನು …

ಭ್ರಷ್ಟಾಚಾರ ಆರೋಪ ಹೊತ್ತಿರುವ ಸಚಿವೆ ಶಶಿಕಲಾ ಜೊಲ್ಲೆಯವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಪತ್ರ ಬರೆದ ಭೀಮಪ್ಪ ಗಡಾದ Read More »

ಬಿಜೆಪಿ ಸೋಲಿನಿಂದ ಪಕ್ಷದ ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದಾರೆ ಎಂದ ಡಿ.ಕೆ. ಶಿವಕುಮಾರ್ ಗೆ ಬೊಮ್ಮಾಯಿ ತಿರುಗೇಟು

ಹುಬ್ಬಳ್ಳಿ: ಹಾನಗಲ್ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ಪರಿಣಾಮ ವಿರೋಧ ಪಕ್ಷದಿಂದ ಅದೆಷ್ಟೋ ಟೀಕೆಯ ಮಾತುಗಳು ಕೇಳಿಬರುತ್ತಿದೆ. ಇದೇ ವಿಚಾರವಾಗಿ ಡಿ.ಕೆ.ಶಿವಕುಮಾರ್ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿ ಬೆಂಗಳೂರಿಗೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ್ದು,ಈ ಸಂದರ್ಭದಲ್ಲಿ ಹಾನಗಲ್ ಸೋಲಿನ ನಂತರ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಸಿಂದಗಿಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. …

ಬಿಜೆಪಿ ಸೋಲಿನಿಂದ ಪಕ್ಷದ ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದಾರೆ ಎಂದ ಡಿ.ಕೆ. ಶಿವಕುಮಾರ್ ಗೆ ಬೊಮ್ಮಾಯಿ ತಿರುಗೇಟು Read More »

ಸುಳ್ಯ : ಹಳೆ ಕಟ್ಟಡದ ಗೋಡೆ ಬಿದ್ದು ವ್ಯಾಪಾರಿ ಸಾವು

ಸುಳ್ಯ: ನ 5 : ಹಳೇ ಕಟ್ಟಡದ ಗೋಡೆ ಮಗುಚಿ ಬಿದ್ದ ವ್ಯಾಪಾರಿಯೊಬ್ಬರು ಮೃತಪಟ್ಟ ಧಾರುಣ ಘಟನೆ ಅ .5 ರಂದು ಬೆಳಿಗ್ಗೆ ಸುಳ್ಯದ ಗಾಂಧಿನಗರದಲ್ಲಿ ನಡೆದಿದೆ. ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡದ ಗೋಡೆ ಕುಸಿದು ಬಿದ್ದು ಈ ದುರಂತ ಸಂಭವಿಸಿದೆ. ಅಬ್ದುಲ್ ಖಾದರ್ (ಅಂದುಕಾರ್)ರವರು ಮೃತಪಟ್ಟ ವ್ಯಾಪಾರಿ. ಇವರು ಕಳೆದ ಹಲವಾರು ವರ್ಷಗಳಿಂದ ಸುಳ್ಯದ ಎಪಿಎಂಸಿ ಬಳಿ ಗುಜಿರಿ ವ್ಯಾಪಾರ ನಡೆಸುತ್ತಿದ್ದರು.ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ. ಅಬ್ದುಲ್ ಖಾದರ್ ರವರು ಹಳೆ …

ಸುಳ್ಯ : ಹಳೆ ಕಟ್ಟಡದ ಗೋಡೆ ಬಿದ್ದು ವ್ಯಾಪಾರಿ ಸಾವು Read More »

ಮಂಚಿ -ಮೋಂತಿಮಾರು ಕ್ಷೇತ್ರದಲ್ಲಿ “ಸ್ವರ ಸಿಂಚನ” ಕಲಾತಂಡದಿಂದ ಭಜನಾ ಗಾನ ವೈಭವ .

ಪೆರ್ನಾಜೆ:- ಮಂಚಿ-ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಹಾಗೂ 9 ದಿವಸಗಳ ಅಖಂಡ ಭಜನಾ ಮಹೋತ್ಸವ 2021 ಪ್ರಯುಕ್ತ ಅ.14ರಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದಾಗ ಆಗಮಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ವಿಟ್ಲ ಸರ ಸಿಂಚನ ಕಲಾ ತಂಡದ ಜೊತೆ ಕುಳಿತು ಹಾಡುಗಳನ್ನು ಹಾಡಿಸುತ್ತಾ ಆಸ್ವಾದಿಸಿದರು ಹಾಡಿನ ಸ್ವರ ಪ್ರಸ್ತಾರ ಶೈಲಿ ಉತ್ತಮ ಹಾಡುಗಳ ಬಗ್ಗೆ ಮೆಚ್ಚುಗೆ ನುಡಿದರು ಕಲಾತಂಡದ ಶಿಕ್ಷಕಿ ಸವಿತಾ ಕೋಡಂದೂರು ಮತ್ತು ತಂಡದಿಂದ ಕಾರ್ಯಕ್ರಮ ನಡೆಯಿತು.

ಸೂಟ್ಕೇಸ್ ನಂತಿರುವ ಬುಕ್ ಧರ್ಮಯಾನ

ಇದೇನು ಸೂಟ್ಕೇಸ್ ಹಿಡಿದುಕೊಂಡು ನಮ್ಮ ಬಜೆಟ್ನಲ್ಲಿ ಓದಲು ವಿಧಾನಸೌಧಕ್ಕೆ ಗೃಹಮಂತ್ರಿಗಳು ಬರುವಂತಿದೆ ಅಲ್ಲ ಏನು ವಿಶೇಷ ಅನ್ನುತ್ತೀರಿ ಇಲ್ಲೇ ಇರುವುದು ಕುತೂಹಲ ಇಂದು ಮುದ್ರಣ ಮಾಧ್ಯಮ ಹೊಸ ಹೊಸ ರೂಪದಲ್ಲಿ ಕಂಗೊಳಿಸುತ್ತಿದೆ. ಅದು ಒಂದು ಕಲೆಯೇ ಒಂದೆಡೆ ಪುಸ್ತಕ ಓದುವವರೇ ಇಲ್ಲ ಮೊಬೈಲ್ ಟಿವಿ ಬಂದು ಎನ್ನುತ್ತಾರೆ ಅದಕ್ಕಾಗಿಯೇ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಸಂಪುಟ ಧರ್ಮಯಾನ ಕಾಲಕ್ಕೆ ಸರಿಯಾದ ಪರಿವರ್ತನೆ ಗಳೊಂದಿಗೆ 4/1 ಕ್ರೌನ್ 752 ಪುಟಗಳ ಸುಂದರ …

ಸೂಟ್ಕೇಸ್ ನಂತಿರುವ ಬುಕ್ ಧರ್ಮಯಾನ Read More »

ಪಟಾಕಿ ಚೀಲದ ಮೇಲೆ ಮಗನನ್ನು ಕೂರಿಸಿ ಹೊರಟ ಅಪ್ಪ | ಪಟಾಕಿ ಸ್ಫೋಟಗೊಂಡು ಬೆಳಕಿನ ಹಬ್ಬದಂದೆ ಬಲಿಯಾಯಿತು ಇರಡು ಜೀವ

ದೀಪಾವಳಿಯನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಪೂಜೆ-ಪುನಸ್ಕಾರ, ದೀಪ ಹಚ್ಚಿ ಪಟಾಕಿ ಸಿಡಿಸುತ್ತಾ ಸಂಭ್ರಮದಲ್ಲಿ ಮುಳುಗಿಹೋಗಿದ್ದಾರೆ ದೇಶದ ಜನತೆ. ಅದಲ್ಲದೆ ಕೊನೆಯ ದಿನವಾದ ಇಂದು ಪಟಾಕಿ ಹೊಡೆಯುವವರ ಸಂಖ್ಯೆ ಅತ್ಯಧಿಕವಾಗಿರುತ್ತದೆ. ಅದಕ್ಕಾಗಿ ನಿನ್ನೆಯಿಂದಲೇ ಪಟಾಕಿ ಖರೀದಿ ಜೋರಾಗಿದ್ದು, ಹಾಗೆ ಖರೀದಿಸಿದ ಪಟಾಕಿಯನ್ನು ಸಾಗಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇಲ್ಲೊಂದು ಕಡೆ ಅಂಥ ಪಟಾಕಿ ಮೂಟೆ ಅಪ್ಪ-ಮಗ ಇಬ್ಬರನ್ನೂ ಬಲಿ ಪಡೆದಿದೆ. ಪುದುಚೇರಿಯ ಅರಿಯನ್‌ಕುಪ್ಪಮ್ ನಗರದ ನಿವಾಸಿ ಕಲೈನೇಶನ್ (32) ಮತ್ತು ಅತನ ಪುತ್ರ ಪ್ರದೀಶ್ (7) ಪಟಾಕಿ …

ಪಟಾಕಿ ಚೀಲದ ಮೇಲೆ ಮಗನನ್ನು ಕೂರಿಸಿ ಹೊರಟ ಅಪ್ಪ | ಪಟಾಕಿ ಸ್ಫೋಟಗೊಂಡು ಬೆಳಕಿನ ಹಬ್ಬದಂದೆ ಬಲಿಯಾಯಿತು ಇರಡು ಜೀವ Read More »

ಬಣ್ಣ ಬಣ್ಣದ ಉಡುಗೆ ತೊಟ್ಟು ಬೆಟ್ಟದ ತುತ್ತ ತುದಿಯಲ್ಲಿ ಫೋಟೋ ಗೆ ಪೋಸ್ ಕೊಟ್ಟಾಕೆ 05 ಸೆಕುಂಡುಗಳಲ್ಲಿ ಮಾಯ!! ಪ್ರವಾಸಿ ದಂಪತಿಗಳ ಬಾಳಿನಲ್ಲಿ ಬಡಿದೇ ಬಿಟ್ಟಿತು ಬರಸಿಡಿಲು

ಅವರಿಬ್ಬರೂ ಪ್ರವಾಸಿ ದಂಪತಿ, ತಮ್ಮ ಬಿಡುವಿನ ವೇಳೆಯನ್ನು ಊರು ಸುತ್ತಲು , ಪ್ರೇಕ್ಷಣಿಯ ಸ್ಥಳಗಳ ಭೇಟಿಗೆ ಮೀಸಲಿಡುತ್ತ, ಅಲ್ಲಿಗೆ ತೆರಳಿ ಅಂದಚಂದದ ಫೋಟೋ ಕ್ಲಿಕ್ಕಿಸಿಕೊಂಡು, ಅದನ್ನು ತಮ್ಮ ಫೇಸ್ಬುಕ್,ಇನ್ಸ್ಟಾಗ್ರಾಮ್ ಗಳಲ್ಲಿ ಹಂಚಿಕೊಳ್ಳುವುದರಲ್ಲಿ ಅವರಿಗಿದ್ದ ಖುಷಿಗೆ ಪಾರವೇ ಇರಲಿಲ್ಲ. ಆದರೆ ಆ ದಂಪತಿಯ ಬಾಳಿನಲ್ಲೀಗ ಬರಸಿಡಿಲು ಬಡಿದಿದೆ, ಬೆಳಕು ಮಾಯವಾಗಿ ಕತ್ತಲು ಆವರಿಸಿದೆ, ಕೇವಲ 05 ಸೆಕುಂಡುಗಳ ಅಂತರದಲ್ಲಿ ತನ್ನವಳೇ ಮಾಯವಾಗಿ ಹೋಗಿದ್ದಾಳೆ. ಝೋ ಸ್ನೊಕ್ಸೆ ಮತ್ತು ಜಾನ್ಸೆನ್ ದಂಪತಿಗಳು ಲಕ್ಷಂಬರ್ಗ್ (Luxembourg) ಪ್ರಾಂತ್ಯದ ನದ್ರಿನ್ (Nadrin) ಪ್ರದೇಶಕ್ಕೆ …

ಬಣ್ಣ ಬಣ್ಣದ ಉಡುಗೆ ತೊಟ್ಟು ಬೆಟ್ಟದ ತುತ್ತ ತುದಿಯಲ್ಲಿ ಫೋಟೋ ಗೆ ಪೋಸ್ ಕೊಟ್ಟಾಕೆ 05 ಸೆಕುಂಡುಗಳಲ್ಲಿ ಮಾಯ!! ಪ್ರವಾಸಿ ದಂಪತಿಗಳ ಬಾಳಿನಲ್ಲಿ ಬಡಿದೇ ಬಿಟ್ಟಿತು ಬರಸಿಡಿಲು Read More »

error: Content is protected !!
Scroll to Top