ಪುರಾತನ ಇತಿಹಾಸ ಪ್ರಸಿದ್ಧ ಕಾರಿಂಜೇಶ್ವರನ ಒಡಲಿಗೆ ಬಿತ್ತು ಚಪ್ಪಲಿ!! ‘ಮುಟ್ಟು’ ಹಾಕಿ ದೇವಾಲಯ ಪ್ರವೇಶಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಜಿಹಾದಿ ಯುವಕರ ತಂಡ

ಅದೊಂದು ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಭಾಯಿ-ಭಾಯಿ.ಆದರೆ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರು ಕೋಮು ಸಾಮರಸ್ಯ ಕೆದಡುವಂತಹ ನೀಚ ಕೆಲಸಕ್ಕೆ ಕೈ ಹಾಕಿದ್ದು ಇದರ ಮುಂದುವರಿದ ಭಾಗವಾಗಿ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಅದೊಂದು ಪ್ರಕರಣವಾಗಿದೆ.

ಹೌದು, ಜಿಲ್ಲೆಯ ಹೆಸರಾಂತ, ಹಲವಾರು ವರ್ಷಗಳ ಇತಿಹಾಸವಿರುವ ಹಿಂದೂಗಳ ಪವಿತ್ರವಾದ ಕ್ಷೇತ್ರ ಕಾರಿಂಜೇಶ್ವರ ದೇವಾಲಯದೊಳಗೆ ಮುಸ್ಲಿಂ ಯುವಕರ ತಂಡವೊಂದು ಚಪ್ಪಲಿ ಹಾಕಿಕೊಂಡು ಒಳಪ್ರವೇಶಿಸಿ, ಅಲ್ಲಿ ಕೆಲ ಅಸಹ್ಯ ರೀತಿಯಲ್ಲಿ ವರ್ತಿಸಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ನೀಚ ಕೃತ್ಯ ಮೆರೆದಿದ್ದು, ಅದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿಯ ವೀಡಿಯೋ ಕೂಡಾ ಹಾಕಲಾಗಿದೆ.

ಇಲ್ಲಿ ಕಾಡುವಂತಹ ಮೊದಲನೇ ಪ್ರಶ್ನೆ ಏನೆಂದರೆ ಮುಸ್ಲಿಂ ಯುವಕರು ಚಪ್ಪಲಿ ಹಾಕಿಕೊಂಡು ಒಳಪ್ರವೇಶಿಸುವಾಗ ಹಿಂದೂಗಳು ಯಾರೂ ಅಲ್ಲಿ ಇರಲಿಲ್ಲವೇ? ಅಥವಾ ಗಮನಕ್ಕೆ ಬಂದಿದ್ದರೂ ಅತ್ತಕಡೆ ಗಮನಹರಿಸಲಿಲ್ಲವೇ? ಎಂಬುವುದಾಗಿದೆ. ಯಾಕೆ ಜಿಲ್ಲೆಯಲ್ಲಿ ಇಂತಹ ಘಟನೆಗಳು ಪುನಃ ಪುನಃ ನಡೆಯುತ್ತಿದೆ ಎಂದು ಹುಡುಕಹೊರಟಾಗ ನಮ್ಮ ಸರ್ಕಾರವೇ ಇಂತಹ ಘಟನೆಗಳಿಗೆ ಮೂಲಕಾರಣವಾಗುತ್ತಿದೆ ಎಂದನಿಸುವುದು ಸಾಮಾನ್ಯ.ಯಾಕೆಂದರೆ, ಈ ಮೊದಲಿನಿಂದಲೂ ಕ್ಷೇತ್ರಕ್ಕೆ ಎಲ್ಲಾ ವರ್ಗದ ಜನರು ಬರುತ್ತಿದ್ದಾರೆ, ಕಾಣಿಕೆ ಹಾಕುತ್ತಿದ್ದಾರೆ. ಆದರೆ ಅದೇ ಕಾಣಿಕೆ ಹಣ ನುಂಗುವ ಸರ್ಕಾರ ಇಲ್ಲಿ ವರೆಗೂ ಒಬ್ಬನೇ ಒಬ್ಬ ಸೆಕ್ಯೂರಿಟಿ ಗಾರ್ಡ್ ನ್ನು ಆ ದೇವಾಲಯದ ರಕ್ಷಣೆಗೆ, ಜನಸಂದಣಿಯ ನಿಯಂತ್ರಣಕ್ಕೆ ನೇಮಿಸಲಿಲ್ಲ ಇದು ನಮ್ಮ ಮತಿಗೆಟ್ಟ ಸರ್ಕಾರದ, ಜನಪ್ರತಿನಿಧಿಗಳ ಉದಾಸೀನ ಗುಣಗಳನ್ನು ಎತ್ತಿತೋರಿಸುತ್ತಿದೆ.

ಈ ಬಗ್ಗೆ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಆಕ್ರೋಶ ವ್ಯಕ್ತಪಡಿಸಿದ್ದು, ಮೊದಲಿನಿಂದಲೂ ಮುಸ್ಲಿಮರ ಪ್ರವೇಶಕ್ಕೆ ತಡೆಹಿಡಿಯಬೇಕೆಂದು ಆಗ್ರಹಿಸಿದ್ದರೂ ಆಡಳಿತ ಮಂಡಳಿಯಾಗಲಿ, ಸರ್ಕಾರವಾಗಲಿ ಕೇರ್ ಅನ್ನಲಿಲ್ಲ. ಇದೆಲ್ಲದರ ಪರಿಣಾಮ ಇಂದು ಚಪ್ಪಲಿ ಹಾಕಿಕೊಂಡು ಒಳಪ್ರವೇಶಿಸುವ ಮಟ್ಟಿಗೆ ಅನ್ಯಮತೀಯರು ಅಹಂಕಾರ ಮೆರೆದಿದ್ದು, ಇವರಿಗೆಲ್ಲ ಅಲ್ಲಿಯ ದೇವರೇ ಬುದ್ಧಿ ಕೊಡಲಿ ಹಾಗೂ ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸುವ ಜವಾಬ್ದಾರಿ ಆಡಳಿತ ಮಂಡಳಿ ಹಾಗೂ ಮುಂದಾಗುವ ಕೋಮು ಘರ್ಷನೆಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಜಾಗರಣ ಕಾರ್ಯಕರ್ತರು ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ ಕಾರ್ಣಿಕ ದೇವಾಲಯದ ಸಾವಿರ ಸಂಖ್ಯೆಯ ಭಕ್ತರ ನೋವಿಗೆ ಕಾರಣವಾದ ಅದೊಂದು ಘಟನೆಯ ರೂವಾರಿಗಳಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿ ಹಾಗೂ ಇಂತಹ ಘಟನೆಗಳಿಂದಾಗಿ ಜಿಲ್ಲೆಯಲ್ಲಿ ಕೋಮುಘರ್ಷಣೆ ಹೆಚ್ಚಾಗುವ ಸಾಧ್ಯತೆ ಇದ್ದು, ಸರ್ಕಾರ ಈ ಬಗ್ಗೆ ಗಮನಹರಿಸಿ ಅತೀ ಸೂಕ್ಷ್ಮ ಪ್ರದೇಶಗಳಲ್ಲಿರುವ ದೇವಾಲಯಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಸೂಕ್ತ ಭದ್ರತೆ ಒದಗಿಸದಿದ್ದಲ್ಲಿ ಇಂತಹ ಘಟನೆಗಳು ಮರುಕಳಿಸುವುದರಲ್ಲಿ ಅನುಮಾನವಿಲ್ಲ.

Leave A Reply

Your email address will not be published.