ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಆನ್ ಲೈನ್ ಮೂಲಕ ಕನ್ನಡ ರಾಜ್ಯೋತ್ಸವ ದಿನಾಚರಣೆ: ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಮಂಗಳೂರು: ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಆನ್ ಲೈನ್ ಮೂಲಕ ಸೋಮವಾರ (1/11/2021) ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.
ಜೆಸಿಐ ಭಾರತ ವಲಯ 15 ರ ವಲಯಾಧ್ಯಕ್ಷೆ , ಖ್ಯಾತ ನಿರೂಪಕಿ, ನಟಿ ಸೌಜನ್ಯ ಹೆಗ್ಡೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಎಲ್ಲರೂ ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ವಹಿಸಿದ್ದರು. ಶೈಕ್ಷಣಿಕ,ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ಉದ್ಯೋಗ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕದವರು , ಕನ್ನಡಿಗರು ಅಪೂರ್ವ ಕೊಡುಗೆ ನೀಡಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಸಾಣೂರು ಪ್ರಕೃತಿ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರಾದ ವಿನ್ಸೆಂಟ್ ಡಿಕೋಸ್ತ ಹಾಗೂ ಮಿಸ್ ಟೀನ್ ಮಂಗಳೂರು-2021 ಸೆಕೆಂಡ್ ರನ್ನರ್-ಅಪ್ ಪ್ರಶಸ್ತಿ ವಿಜೇತೆ ಅನನ್ಯ ಸಾಲ್ಯಾನ್ ಹಳೆಯಂಗಡಿ ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆದ್ಯ ಕಾನುಬೈಲು ಡಿ. ಬೆಂಗಳೂರು, ಅನುಷ್ಕಾ ಆರ್.ಟಿ ಧಾರವಾಡ, ಶ್ರೀರಕ್ಷಾ ಉಪಾಧ್ಯಾಯ ಹಾಸನ, ಸ್ನೇಹಶ್ರೀ ಹೆಗ್ಗಡೆ ಸಿರಸಿ,ದಿಶಾನ್ ಸಿ. ಜೈನ್ ಬೇಲೂರು, ಶ್ರೇಯಾ ಎಂ.ಜಿ ಸುಳ್ಯ, ತನುಸ್ವಿ ಮಂಗಳೂರು,ಮನುಸ್ವಿ ಮಂಗಳೂರು, ಸಂಸ್ಕೃತಿ ಸುಜಯ ಹಿರೇಮಠ ಹುಬ್ಬಳ್ಳಿ, ನಿರಂಜನ್ ಜೈನ್ ಕುದ್ಯಾಡಿ, ನೇಹಾ ಡಿ.ಹೊರನಾಡು , ನಿತ್ಯ ಡಿ. ಹೊರನಾಡು, ಸುಶ್ಮಿತಾ ಡಿ. ಹೊರನಾಡು,ನಿಶ್ಚಿತಾ ಡಿ. ಹೊರನಾಡು, ಚಿಂತನಾ ಡಿ ಹೊರನಾಡು, ಸ್ವಸ್ತಿಶ್ರೀ ಕದ್ರಿ ಮಂಗಳೂರು , ಈಶ ಲಾಸ್ಯ ನೃತ್ಯ ತಂಡ ಚಿತ್ರಪಾಡಿ ಸಾಲಿಗ್ರಾಮ . ಭಾಗವಹಿಸಿದ್ದರು.

ಸುದೇಶ್ ಜೈನ್ ಮಕ್ಕಿಮನೆ, ಎನ್. ಪ್ರಸನ್ನಕುಮಾರ್ ಮೈಸೂರು, ಸ್ಪೂರ್ತಿ ಜೈನ್ ಕುಣಿಗಲ್,ವಜ್ರ ಕುಮಾರ್ ಬೆಂಗಳೂರು ಮೊದಲಾದವರು ಉಪಸ್ಥಿತರಿದ್ದರು .
ಪ್ರಿಯದರ್ಶಿನಿ ಮಂಗಳೂರು ನಿರೂಪಿಸಿದರು.

Leave A Reply

Your email address will not be published.