ಮದ್ಯ ಬಂದ್ ಸಂದರ್ಭ ಒಂದು ಬಿಯರಿನ ಆಸೆಗೆ ಪುನೀತ್ ಗೆ ಕೀಳು ಮಟ್ಟದಲ್ಲಿ ಅವಮಾನ ಮಾಡಿದ ನಾರ್ಥಿಂಡಿಯನ್ | ರಾನೆಗೆ ದರ ದರ ಎಳೆದು ತಂದು ಬಂಧಿಸಿದ ಪೊಲೀಸರು

ಬೆಂಗಳೂರು: ಅಪ್ಪು ನಮ್ಮನ್ನೆಲ್ಲ ಅಗಲಿ ನಾಲ್ಕು ದಿನ ಸಂದರೂ, ಅವರ ನೆನಪು ಮಾತ್ರ ಚಿರವಾಗಿದೆ.ಸಾವಿನ ಬಗ್ಗೆ ತಿಳಿದು ಅದೆಷ್ಟೋ ಅಭಿಮಾನಿ ಬಳಗ ಇಂದಿಗೂ ಕಣ್ಣೀರಾ ಧಾರೆ ಹರಿಸುತ್ತಿದೆ. ಆದರೆ ಇಲ್ಲೊಬ್ಬ ಮದ್ಯದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ನಟ ಪುನೀತ್​ ರಾಜ್​ಕುಮಾರ್​ ಸಾವಿನ ಬಗ್ಗೆ ಅವಹೇಳನಕಾರಿ ಪೊಸ್ಟ್​ ಮಾಡಿದ್ದು,ಇದೀಗ ಕಿಡಿಗೇಡಿಯನ್ನು ಬೆಂಗಳೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಪುನೀತ್‌ ನಿಧನರಾದ ದಿನದಿಂದ ಅಂತ್ಯ ಸಂಸ್ಕಾರದ ದಿನದವರೆಗೂ,ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಡಾ. ರಾಜಕುಮಾರ್ ಸಾವನ್ನಪ್ಪಿದ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳು ಮತ್ತೆ ನಡೆಯಬಾರದು, ಅಭಿಮಾನಿಗಳು ಮದ್ಯ ಸೇವಿಸಿ, ಅಚಾತುರ್ಯಗಳನ್ನು ಮಾಡಬಹುದು ಎಂಬ ಮುನ್ನೆಚ್ಚರಿಕೆಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು.

ಇದನ್ನು ವಿರೋಧಿಸಿದ್ದ ಉತ್ತರ ಪ್ರದೇಶದ ರಿತ್ವಿಕ್ ಎಂಬಾತ, ಹೇಗೋ ಮದ್ಯ ಪಡೆದುಕೊಂಡಿದ್ದು, ಕಾರಿನಲ್ಲಿ ಕುಳಿತು ಮದ್ಯದ ಬಾಟಲ್​ ಕೈಯಲ್ಲಿ ಹಿಡಿದಿರುವ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದ.’ರಾಜ್​ಕುಮಾರ್​​ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೆನಪಿಟ್ಟುಕೊಳ್ಳಿ. ಮರೆಯಬೇಡಿ. ಯಾಕೆಂದರೆ, ಇದನ್ನು ಕುಡಿದ ಬಳಿಕ ಅವನ ಸಮಾಧಿ ಮೇಲೆ ನಾವು ಮೂ** ಮಾಡುತ್ತೇವೆ’ ಎಂದು ಬರೆದು ಅವಮಾನ ಮಾಡಿದ್ದ.ಅಷ್ಟೇ ಅಲ್ಲದೆ ಫೋಟೋ ಜತೆಗೆ ಪುನಿತ್​ ರಾಜ್​ಕುಮಾರ್​ ಬಗ್ಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದು, ಅದರ ಪರಿಣಾಮ ಇದೀಗ ಕಂಬಿ ಹಿಂದೆ ಬಿದ್ದಿದ್ದಾನೆ.

ಕಿಡಿಗೇಡಿಯ ಈ ಫೋಟೋವನ್ನು ಸುದೀಪ್​ ಪುತ್ರಿ ಸಾನ್ವಿ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಅಪ್​ಲೋಡ್​ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ‘ಜನರಿಗೆ ಮನುಷ್ಯತ್ವ ಇಲ್ಲವೇ? ಮದ್ಯಕ್ಕಾಗಿ ಪುನೀತ್​ ಬಗ್ಗೆ ಇಂಥ ಮನಸ್ಥಿತಿಯೇ?’ ಎಂದು ಪ್ರಶ್ನಿಸಿರುವ ಸಾನ್ವಿ, ‘ಕರ್ನಾಟಕ ಸರ್ಕಾರ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿತ್ತು. ಬೆಂಗಳೂರಲ್ಲಿ ವಾಸವಿರುವ ಉತ್ತರ ಭಾರತದವರು ಸ್ವಲ್ಪವಾದರೂ ಪ್ರಜ್ಞಾವಂತಿಕೆ ತೋರಿ’ ಎಂದು ಛಾಟಿ ಬೀಸಿದ್ದರು.

ಕಿಡಿಗೇಡಿಯ ಪೋಸ್ಟ್​ ವೈರಲ್​ ಆಗುತ್ತಿದ್ದಂತೆ ಅವರನ್ನು ಪತ್ತೆ ಹಚ್ಚಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದರು. ಈ ವಿಚಾರ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ ತನಿಖೆಗೆ ಇಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನು ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್​ ಖಚಿತಪಡಿಸಿದ್ದಾರೆ.

Leave A Reply

Your email address will not be published.