Day: November 2, 2021

ಹಾನಗಲ್ ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ | ಬೆಳ್ತಂಗಡಿ ಕಾಂಗ್ರೆಸ್ ನಿಂದ ವಿಜಯೋತ್ಸವ-ಸಂಭ್ರಮಾಚರಣೆ

ಬಲು ಪ್ರತಿಷ್ಠೆಯ ಕಣವಾಗಿದ್ದ ಹಾನಗಲ್ ಉಪಚುನಾವಣೆಯಲ್ಲಿ ವಿಜಯಪತಾಕೆ ಹಾರಿಸಿದ ಕಾಂಗ್ರೆಸ್ಸಿನ ಸಂಭ್ರಮಕ್ಕೆ ಬೆಳ್ತಂಗಡಿ ಕಾಂಗ್ರೆಸ್ ಸಾಕ್ಷ್ಯವಾಯಿತು. ಬೆಳ್ತಂಗಡಿಯ ಪೇಟೆಯ ಹೃದಯಭಾಗದಲ್ಲಿ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ,ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಕೆ ಹರೀಶ್ ಕುಮಾರ್,ಬೆಳ್ತಂಗಡಿಯ ಮಾಜಿ ಶಾಸಕರಾದ ಶ್ರೀ ಕೆ ವಸಂತ ಬಂಗೇರರು,ಗ್ರಾಮೀಣ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀ ರಂಜನ್ ಜಿ ಗೌಡರವರು,ನಗರ ಬ್ಲಾಕಿನ ಅಧ್ಯಕ್ಷರಾದ ಶ್ರೀ ಶೈಲೇಶ್ ಕುಮಾರ್ ರವರು ವಿಜೇತ ಅಭ್ಯರ್ಥಿಗೆ ಶುಭ ಹಾರೈಸುವುದರ ಜೊತೆಗೆ ಪಟಾಕಿ ಸಿಡಿಸಿ …

ಹಾನಗಲ್ ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ | ಬೆಳ್ತಂಗಡಿ ಕಾಂಗ್ರೆಸ್ ನಿಂದ ವಿಜಯೋತ್ಸವ-ಸಂಭ್ರಮಾಚರಣೆ Read More »

ಕೊಂಬಾರು: ಹಿಂದೂ ಮನೆಯಲ್ಲಿ ಅನ್ಯಮತೀಯ ಮಂತ್ರವಾದಿ ಪತ್ತೆ
ವಿ.ಹಿಂ.ಪ, ಬಜರಂಗದಳದಿಂದ ಪೊಲೀಸರಿಗೆ ಮಾಹಿತಿ-ಮಂತ್ರವಾದಿ ಪೋಲಿಸ್ ವಶಕ್ಕೆ

ಕಡಬ: ಅನಾರೋಗ್ಯದಿಂದ ಬಳಲುತ್ತಿದ್ದ ಹಿಂದೂ ಮಹಿಳೆಯೊಬ್ಬರ ಕಾಯಿಲೆಯನ್ನು ಮಂತ್ರವಾದದಿAದ ಗುಣಪಡಿಸಲೆಂದು ಬಂದ ಅನ್ಯಮತಿಯ ವ್ಯಕ್ತಿಯೋರ್ವರು ಆ ಮನೆಯಲ್ಲಿರುವುದನ್ನು ಗಮನಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೋಲಿಸರು ಮಂತ್ರವಾದಿಯನ್ನು ವಶಕ್ಕೆ ಪಡೆದುಕೊಂಡು ಬಳಿಕ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟರಿರುವುದು ಮಂಗಳವಾರ ಸಾಯಂಕಾಲ ಕೊಂಬಾರಿನಲ್ಲಿ ನಡೆದಿದೆ. ಘಟನೆಗೆ ಸಂಬಂದಪಟ್ಟಂತೆ ಮೂಲತಃ ಬಂಟ್ವಾಳ ತಾಲೂಕು ವಗ್ಗ ನಿವಾಸಿ, ಪ್ರಸ್ತುತ ಬೆಂಗಳೂರಿನ ಚಿಂತಾಮಣಿ ಭಾಗದಲ್ಲಿ ದರ್ಗಾವೊಂದರಲ್ಲಿಕಾರ್ಯನಿರ್ವಹಿಸುವ ಆಬೀದ್ ಎಂಬಾತ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಲಿಂಬೆ ಹುಳಿಯಲ್ಲಿ ಏನೋ …

ಕೊಂಬಾರು: ಹಿಂದೂ ಮನೆಯಲ್ಲಿ ಅನ್ಯಮತೀಯ ಮಂತ್ರವಾದಿ ಪತ್ತೆ
ವಿ.ಹಿಂ.ಪ, ಬಜರಂಗದಳದಿಂದ ಪೊಲೀಸರಿಗೆ ಮಾಹಿತಿ-ಮಂತ್ರವಾದಿ ಪೋಲಿಸ್ ವಶಕ್ಕೆ
Read More »

ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಐತಿಹಾಸಿಕ ಗೆಲುವಿನೊಂದಿಗೆ ಅರಳಿದ ಕಮಲ!!
ತೀರ್ವ ಪೈಪೋಟಿ ನೀಡಿದ್ದ ಜೆಡಿಎಸ್ ಗೆ ಭಾರೀ ಹಿನ್ನಡೆ

ವಿಜಯಪುರ: ಸಿಂದಗಿ ಅಸೆಂಬ್ಲಿ ಉಪಚುನಾವಣೆಯಲ್ಲಿಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31088 ಮತಗಳ ಭಾರೀ ಅಂತರದಿಂದ ಐತಿಹಾಸಿಕ ವಿಜಯ ಸಾಧಿಸಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.36 ವರ್ಷದ ರಮೇಶ್ ಭೂಸನೂರ ಅವರ ಪರ ಕಾರ್ಯಕರ್ತರು ಘೋಷಣೆ ಕೂಗಿ, ಜಯಕಾರ ಹಾಕುತ್ತಿದ್ದಾರೆ. ತೀವ್ರ ಪೈಪೋಟಿ ನೀಡಿದ್ದ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿಯನ್ನೂ ವಾಪಸ್ ಗಳಿಸದೆ, ಸೋಲನ್ನೊಪ್ಪಿದ್ದಾರೆ. ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಫಲಿತಾಂಶದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ್ ಭೂಸನೂರ ಸಮಾಧಾನಕರ ಅಂತರದಲ್ಲಿ ಗೆದ್ದಿದ್ದಾರೆ. ಕರ್ನಾಟಕ ರಾಜ್ಯದ ಎರಡು ವಿಧಾನಸಭಾ …

ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಐತಿಹಾಸಿಕ ಗೆಲುವಿನೊಂದಿಗೆ ಅರಳಿದ ಕಮಲ!!
ತೀರ್ವ ಪೈಪೋಟಿ ನೀಡಿದ್ದ ಜೆಡಿಎಸ್ ಗೆ ಭಾರೀ ಹಿನ್ನಡೆ
Read More »

2021-22ರ ಕಂಬಳ ವೇಳಾಪಟ್ಟಿ ಬಿಡುಗಡೆ ಮಾಡಿದ ಕಂಬಳ ಸಮಿತಿ

2021-22ರ ಸಾಲಿನ ಕಂಬಳಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಕಂಬಳ ಸಮಿತಿಯು ಅಧಿಕೃತವಾಗಿ ಈ ವೇಳಾಪಟ್ಟಿ ಬಿಡುಗಡೆ ಮಾಡಿದೆ. 2021 ನವೆಂಬರ್ 27ರಿಂದ 2022 ಮಾರ್ಚ್ 26ರವರೆಗೆ ಒಟ್ಟು 19 ಕಂಬಳಗಳು ಜಿಲ್ಲಾ ಕಂಬಳ ಸಮಿತಿ ಅಡಿಯಲ್ಲಿ ನಡೆಯಲಿದೆ. ಮೊದಲ ಕಂಬಳ ಮೂಡಬಿದಿರೆಯಲ್ಲಿ ನಡೆದರೆ, ಬಂಗಾಡಿ ಕಂಬಳದೊಂದಿಗೆ ಋತು ಮುಕ್ತಾಯವಾಗಲಿದೆ. ಹೀಗಿದೆ ವೇಳಾಪಟ್ಟಿ 2021-22ನವೆಂಬರ್ 27 ಶನಿವಾರ ಮೂಡಬಿದಿರೆ,ಡಿಸೆಂಬರ್ 5 ಆದಿತ್ಯವಾರ ಹೊಕ್ಕಾಡಿಗೋಳಿ,ಡಿಸೆಂಬರ್ 11 ಶನಿವಾರ ಸುರತ್ಕಲ್, ಡಿಸೆಂಬರ್ 18 ಶನಿವಾರ ಮಿಯ್ಯಾರು, ಡಿಸೆಂಬರ್ 19 ಆದಿತ್ಯವಾರ …

2021-22ರ ಕಂಬಳ ವೇಳಾಪಟ್ಟಿ ಬಿಡುಗಡೆ ಮಾಡಿದ ಕಂಬಳ ಸಮಿತಿ Read More »

ಮಂಗಳೂರು: 24 ಪ್ರಕರಣಗಳಲ್ಲಿ ಬೇಕಾಗಿದ್ದ 7 ಮಂದಿ ದರೋಡೆಕೋರರ ಬಂಧನ

ಮಂಗಳೂರು : ಸರ ಕಳ್ಳತನ,ದರೋಡೆ, ದ್ವಿಚಕ್ರ ವಾಹನ ಕಳವು ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸೇರಿದಂತೆ 24 ಪ್ರಕರಣಗಳಲ್ಲಿ ಭಾಗಿಯಾದ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು, ಚೊಕ್ಕಬೆಟ್ಟುವಿನ ಅರ್ಷದ್ (42) ಪಂಜಿಮೊಗರು ನಿವಾಸಿ ಸಫ್ವಾನ್ (29), ಕಾವೂರಿನ ಮಹಮ್ಮದ್ ತೌಸಿಫ್ (30), ಶಾಂತಿನಗರದ ಅಬ್ದುಲ್ ಖಾದರ್ ಸಿನಾನ್ (30), ಕುಂದಾಪುರದ ಕುಂಬಾಶಿಯ ಮೊಹಮ್ಮದ್ ರೆಹಮಾನ್ (23) ಕಾವೂರು ನಿವಾಸಿ ಅಬ್ದುಲ್ ಇಶಾಮ್ (26) ಮಲ್ಲೂರಿನ ಮಹಮ್ಮದ್ ಫಜಲ್ (32) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ …

ಮಂಗಳೂರು: 24 ಪ್ರಕರಣಗಳಲ್ಲಿ ಬೇಕಾಗಿದ್ದ 7 ಮಂದಿ ದರೋಡೆಕೋರರ ಬಂಧನ Read More »

ಹೃದಯದ ಬಗ್ಗೆ ಆತಂಕ, ಭಯ ಬೇಡ- ಎಚ್ಚರಿಕೆ ಇರಲಿ

ಎಜೆ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಸಲಹೆ ಮಂಗಳೂರು: ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಹೃದ್ರೋಗ ತಜ್ಞರ ಬಳಿ ಬರುವವರ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಕುರಿತು ಕೇಳಿ ಬರುತ್ತಿರುವ ಕೆಲವೊಂದು ಹೇಳಿಕೆ, ಸಲಹೆಗಳು ಜನಸಾಮಾನ್ಯರಲ್ಲಿ ಆತಂಕ, ಭಯಕ್ಕೆ ಕಾರಣವಾಗುತ್ತಿದೆ. ಹೃದಯಕ್ಕೆ ಸಂಬಂಧಿಸಿದ ರೋಗಗಳಿಗೆ ಬೇಕಿರುವುದು ಆತಂಕವಲ್ಲ. ಬದಲಿಗೆ ಆರೋಗ್ಯದ ಕುರಿತಂತೆ ಎಚ್ಚರಿಕೆಯ ಹೆಜ್ಜೆ.ಇದು ಮಂಗಳೂರು ಎಜೆ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಅವರ ಸಲಹೆ. ದ.ಕ. …

ಹೃದಯದ ಬಗ್ಗೆ ಆತಂಕ, ಭಯ ಬೇಡ- ಎಚ್ಚರಿಕೆ ಇರಲಿ Read More »

ಬೆಳ್ತಂಗಡಿ: ಹಾಡುಹಗಲೇ ಮನೆಗೆ ನುಗ್ಗಿದ ಕಳ್ಳರು, 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಗಲು ಹೊತ್ತಿನಲ್ಲೇ ಕಳ್ಳರ ತಂಡವೊಂದು ಇಂದಬೆಟ್ಟು ಗ್ರಾಮದ ಬಂಗಾಡಿ ದೇರಾಜೆ ಮನೆಯ ಲಾಕರ್ ಒಡೆದು ನಗದು ಹಾಗೂ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಕೃಷಿ ಜೊತೆ ಅಡಿಕೆ ವ್ಯಾಪಾರ ಮಾಡಿಕೊಂಡಿದ್ದ ದೇರಾಜೆ ಮನೆಯ ನಿವಾಸಿ ಮಹಮ್ಮದ್ (43) ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಮಹಮ್ಮದ್ ಅವರು ಭಾನುವಾರ ಅವರ ಪತ್ನಿ ಮತ್ತು ಮೂವರು ಮಕ್ಕಳು ಸಹಿತ ನಿಶ್ಚಿತಾರ್ಥ ಕಾರ್ಯಕ್ರಮವೊಂದಕ್ಕೆ ಬಂಟ್ವಾಳ ತಾಲ್ಲೂಕಿನ ಉಳಿ ಗ್ರಾಮಕ್ಕೆ ಹೋಗಿದ್ದರು. …

ಬೆಳ್ತಂಗಡಿ: ಹಾಡುಹಗಲೇ ಮನೆಗೆ ನುಗ್ಗಿದ ಕಳ್ಳರು, 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು Read More »

ಸುಳ್ಯದಲ್ಲಿ ಬೆಳಕು ಪಡೆಯುವ ನೈಸರ್ಗಿಕ ಎಲೆ ಪತ್ತೆ | ಬತ್ತಿಯಂತೆಯೇ ಉರಿಯುತ್ತದೆಯಂತೆ ಈ ಎಲೆಯ ಚಿಗುರು

ಇಂದಿನ ಜಗತ್ತು ಅದೆಷ್ಟೇ ಮುಂದುವರಿದರೂ ನಮ್ಮ ಹಳೆಯ ಸಂಸ್ಕೃತಿ ಮಾತ್ರ ಮಾಸುವಂತಹುದು ಅಲ್ಲ.ಆಚಾರ-ವಿಚಾರದಿಂದ ಹಿಡಿದು ಪ್ರತಿಯೊಂದು ಕಾರ್ಯವು ಹಿಂದಿನ ಪೀಳಿಗೆಯಂತೆಯೇ ಇದೆ.ಮನೆ ಬೆಳಗೋ ದೀಪಕ್ಕೂ ಕೂಡ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಿದೆ.ಆದರೂ ಪುರಾತನ ಕಾಲದ ನೆನಪು ಮಾತ್ರ ಅಳಿಯುವುದಿಲ್ಲ . ಹೌದು. ಇದೀಗ ನಾವು ಹೇಳಲು ಹೊರಟಿರುವುದು ಇಂತಹುದೇ ಒಂದು ವಿಷಯ.ಇಂದು ನಾವೆಲ್ಲ ನೆಲೆ ಊರಲು ಮನೆಯನ್ನು ನಿರ್ಮಿಸಿದ್ದೇವೆ. ಆದರೆಹಿಂದಿನ ಕಾಲದಲ್ಲಿ ಕಾಡುಗಳಲ್ಲೇ ಜೀವನ ಸಾಗಿಸುತಿದ್ದರು.ಆಹಾರ ತಯಾರಿಕೆಗೆ,ಚಳಿಯಿಂದ ರಕ್ಷಿಸಲು ಕಲ್ಲಿನಿಂದ ಉಜ್ಜಿ ಬೆಂಕಿ ತಯಾರಿಸುತ್ತಿದ್ದರು ಎನ್ನುವುದು ಇತಿಹಾಸವಾಗಿದ್ದು. …

ಸುಳ್ಯದಲ್ಲಿ ಬೆಳಕು ಪಡೆಯುವ ನೈಸರ್ಗಿಕ ಎಲೆ ಪತ್ತೆ | ಬತ್ತಿಯಂತೆಯೇ ಉರಿಯುತ್ತದೆಯಂತೆ ಈ ಎಲೆಯ ಚಿಗುರು Read More »

ಜಿಲ್ಲೆಯ ಗಂಡುಕಲೆ ಯಕ್ಷಗಾನಕ್ಕೆ ಅವಮಾನ, ಕರಾವಳಿಯಲ್ಲಿ ಭಾರೀ ಆಕ್ರೋಶ!ಮಣಿಪಾಲದ ಪಬ್ ಒಂದರಲ್ಲಿ ಮಹಿಷಾಸುರನ ವೇಷ ಹಾಕಿ ಡಿಜೆ ಆಪರೇಟ್ ಯುವಕನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮಣಿಪಾಲದ ಪಬ್ ಒಂದರಲ್ಲಿ ಯಕ್ಷಗಾನದ ಮಹಿಷಾಸುರನ ವೇಷ ಧರಿಸಿದ ಯುವಕನೊಬ್ಬ ಡಿಜೆ ಓಪರೇಟ್ ಮಾಡಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕರಾವಳಿಯ ಯಕ್ಷ ಕಲಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ದೇವಿ ಮಹಾತ್ಮೆ ಪ್ರಸಂಗದಲ್ಲಿ ಬರುವ ಮಹಿಷಾಸುರನ ವೇಷ ಧರಿಸಿ ಡಿಜೆ ಆಪರೇಟ್ ಸಹಿತ ಪಬ್ ನಲ್ಲಿ ಯಕ್ಷಗಾನ ವೇಷ ಹಾಕಿದ ವಿಚಾರ ಸದ್ಯ ಉಡುಪಿ-ಮಂಗಳೂರು ಭಾಗದಲ್ಲಿ ಚರ್ಚೆಗೆ ಕಾರಣವಾಗಿದ್ದು ಘಟನೆಗೆ ಕಾರಣಕರ್ತನಾದ ಯುವಕ ಕ್ಷಮೆ ಕೇಳಬೇಕು ಹಾಗೂ ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಆಗ್ರಹ …

ಜಿಲ್ಲೆಯ ಗಂಡುಕಲೆ ಯಕ್ಷಗಾನಕ್ಕೆ ಅವಮಾನ, ಕರಾವಳಿಯಲ್ಲಿ ಭಾರೀ ಆಕ್ರೋಶ!ಮಣಿಪಾಲದ ಪಬ್ ಒಂದರಲ್ಲಿ ಮಹಿಷಾಸುರನ ವೇಷ ಹಾಕಿ ಡಿಜೆ ಆಪರೇಟ್ ಯುವಕನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read More »

ಒಂದೇ ಮನೆಯ ಇಬ್ಬರ ದುರಂತ ಸಾವು!!ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ನದಿಗಿಳಿದ ತಾಯಿಯೂ ನೀರುಪಾಲು!!ಘಟನೆಯಿಂದ ಇಡೀ ಗ್ರಾಮಕ್ಕೇ ಅವರಿಸಿದ ಸೂತಕದ ಛಾಯೆ

ಮಗು ನೀರು ಪಾಲಾಗುತ್ತಿರುವುದನ್ನು ಕಂಡು ಬಚಾವ್ ಮಾಡಲು ತೆರಳಿದ ತಾಯಿಯೂ ನೀರುಪಾಲಾದ ಹೃದಯ ವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ಮಹಿಳೆ ದನವನ್ನು ಮೇಯಿಸಲು ಹೋಗಿದ್ದಾಗ ಆಕೆಯ ಮಗ ನೀರುಪಾಲಾಗುತ್ತಿರುವುದನ್ನು ಕಂಡು ರಕ್ಷಿಸಲು ಹೋಗಿ ತಾಯಿಯೂ ಆತನೊಂದಿಗೆ ನೀರುಪಾಲಾಗಿದ್ದಾಳೆ. ಇಬ್ಬರ ಮೃತದೇಹವೂ ಪತ್ತೆಯಾಗಿದ್ದು, ಮೃತರನ್ನು ತಾಯಿ ರೇವತಿ ಹಾಗೂ ಆಕೆಯ ಪುತ್ರ ಕಾರ್ಯಪ್ಪ (12) ಎಂದು ಗುರುತಿಸಲಾಗಿದೆ. ಟಿ.ಶೆಟ್ಟಿಗೇರಿ ಗ್ರಾಮದ ಲಕ್ಷ್ಮಣತೀರ್ಥ ನದಿಯಲ್ಲಿ ಈ ದುರಂತ ಸಂಭವಿಸಿದ್ದು, ಸ್ಥಳೀಯರು ನಿನ್ನೆ ರಕ್ಷಣಾ ಕಾರ್ಯಾಚರಣೆಗೆ ಮುಂದಾದರೂ …

ಒಂದೇ ಮನೆಯ ಇಬ್ಬರ ದುರಂತ ಸಾವು!!ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ನದಿಗಿಳಿದ ತಾಯಿಯೂ ನೀರುಪಾಲು!!ಘಟನೆಯಿಂದ ಇಡೀ ಗ್ರಾಮಕ್ಕೇ ಅವರಿಸಿದ ಸೂತಕದ ಛಾಯೆ Read More »

error: Content is protected !!
Scroll to Top