ಸವಣೂರು : ಭಾಗವತರಾದ ದಿ.ರಾಮಚಂದ್ರ ಅರ್ಬಿತ್ತಾಯ ಹಾಗೂ ದಿ.ಪದ್ಯಾಣ ಗಣಪತಿ ಭಟ್ ಅವರಿಗೆ ಯಕ್ಷ ನಮನ

ಸವಣೂರು : ಇತ್ತಿಚೆಗೆ ಅಕಾಲಿಕವಾಗಿ ನಿಧನರಾದ ಭಾಗವತ ರತ್ನ ದಿ.ರಾಮಚಂದ್ರ ಅರ್ಬಿತ್ತಾಯ ಹಾಗೂ ಹಿರಿಯ ಭಾಗವತ ದಿ.ಪದ್ಯಾಣ ಗಣಪತಿ ಭಟ್ ಇವರ ಶ್ರದ್ದಾಂಜಲಿ ಕಾರ್ಯಕ್ರಮ ಸವಣೂರು ಯುವಕಮಂಡಲದಲ್ಲಿ ನ.1 ರಂದು ನಡೆಯಿತು.

ಶ್ರವಣ ರಂಗ ಪ್ರತಿಷ್ಟಾನದ ಆಯೋಜನೆಯಲ್ಲಿ ನಡೆದ ಯಕ್ಷನಮನ ಕಾರ್ಯಕ್ರಮದಲ್ಲಿ ಅರ್ಬಿತ್ತಾಯರ ಶಿಷ್ಯರಾದ ನೇಸರ ಟಿ.ಎಸ್ ಶ್ರೇಯ ಶ್ರಾವ್ಯ, ಮಾನ್ವಿ ಜಿ ಎಸ್ ಭವಹರಿ ಯಕ್ಷಗಾನದ ಹಾಡುಗಳನ್ನು ಹಾಡಿ ನಮನ ಸಲ್ಲಿಸಿದರು. ಶ್ರದ್ಧಾಂಜಲಿ ಸಭೆಯಲ್ಲಿ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರಿ ಗಣರಾಜ ಕುಂಬ್ಲೆ ನುಡಿನಮನ ಸಲ್ಲಿಸಿ ಭಾಗವತಧ್ವಯರ ಕಲಾಸೇವೆಯನ್ನು ಸ್ಮರಿಸಿದರು.

ಬಳಿಕ ಆಂಜನೇಯ ಕಲಾಸಂಘ ಪುತ್ತೂರು, ಯಕ್ಷ ನಂದನ ಕಲಾಸಂಘ ಗೋಕುಲನಗರ ಕೊಯಿಲ, ದುರ್ಗಾಂಬಾ ಯಕ್ಷಕಲಾ ಸಂಗಮ ಶರವೂರು, ಶ್ರವಣರಂಗ ಪ್ರತಿಷ್ಠಾನ ಸವಣೂರು ಇವರ ಕೂಡುವಿಕೆಯಲ್ಲಿ ಶ್ರೀರಾಮ ನಿರ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಜಯಪ್ರಕಾಶ್ ನಾಕೂರು, ಡಿ.ಕೆ ಆಚಾರ್ಯ ಶರವೂರು, ಆನಂದ ಸವಣೂರು ,ಚೆಂಡೆ ಮದ್ದಳೆಯಲ್ಲಿ ಶ್ರೀ ಕುಮಾರ ಸುಬ್ರಹ್ಮಣ್ಯ ವಳಕುಂಜ, ಶ್ರೀ ಮೋಹನ್ ಶರವೂರು,ಶ್ರೀ ಬಾಲಕೃಷ್ಣ ಬೊಮ್ಮಾರು, ಮಾ. ಸುಬ್ರಹ್ಮಣ್ಯ, ಮಾ. ಅಚ್ಯುತ ಭಕ್ತಕೋಡಿ,ಸಹಕರಿಸಿದರು.ಮುಮ್ಮೇಳದಲ್ಲಿ ಶ್ರೀ ರಾಮನಾಗಿ ಶ್ರೀ ಗಣರಾಜ ಕುಂಬ್ಳೆ, ಕಾಲಪುರುಷನಾಗಿ ಶ್ರೀ ನಾ.ಕಾರಂತ ಪೆರಾಜೆ, ಲಕ್ಷ್ಮಣನಾಗಿ ಚಂದ್ರಶೇಖರ ಶರವೂರು ಹಾಗೂ ಶ್ರೀ ಗುಡ್ಡಪ್ಪ ಬಲ್ಯ, ದೂರ್ವಾಸನಾಗಿ ಶ್ರೀ ತಾರಾನಾಥ ಸವಣೂರು ಪಾತ್ರ ನಿರ್ವಹಿಸಿ ಕಲಾಸೇವೆ ಮಾಡಿದರು. ಕಲಾವಿದರೆಲ್ಲ ಸೇವಾರೂಪದಲ್ಲಿ ಅರ್ಬಿತ್ತಾಯ ಭಾವಂಜಲಿ ಅರ್ಪಿಸಿ, ಗೌರವಧನವನ್ಮು ಅರ್ಬಿತ್ತಾಯರ ಮನೆಯವರಿಗೆ ನೀಡುವ ನಿಧಿಸಂಗ್ರಹಕ್ಕೆ ನೀಡಿದರು. ಅರ್ಬಿತ್ತಾಯರ ಅಭಿಮಾನಿ ಪ್ರೇಕ್ಷಕರು ನಿಧಿಗೆ ಸುಮಾರು ರೂ 25,000 ದಷ್ಟು ಹಣವನ್ನುಅರ್ಪಿಸಿದರು. ತಾಳಮದ್ದಳೆಯ ಉಳಿದ ಖರ್ಚನ್ನು ಅರ್ಬಿತ್ತಾಯರ ಶಿಷ್ಯ ಬಳಗ ನೀಡಿದರು.
ಪ್ರತಿವರ್ಷವೂ ಅರ್ಬಿತ್ತಾಯರ ಸ್ಮರಣಾರ್ಥ ಕಾರ್ಯಕ್ರಮ ಹಮ್ಮಿಕೊಂಡು ಸಾಧನೆ ಮಾಡಿದ ಹವ್ಯಾಸಿ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡುವ ಬಗ್ಗೆ ಶ್ರವಣ ರಂಗ ನಿರ್ಣಯವನ್ನು ಪ್ರಕಟಿಸಲಾಯಿತು.

ಶ್ರವಣರಂಗ ಪ್ರತಿಷ್ಟಾನದ ಸಂಚಾಲಕ ತಾರಾನಾಥ ಸವಣೂರು, ಸದಸ್ಯರಾದ ಗಿರಿಶಂಕರ ಸುಲಾಯ, ಮೋಹನ್ ರೈ ಕೆರೆಕೋಡಿ,ಗಣೇಶ ಪೆರುವಾಜೆ ,ಆನಂದ ಸವಣೂರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸವಣೂರು ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಮಾಲೆತ್ತಾರು , ಸುರೇಶ್ ರೈ ಸೂಡಿಮುಳ್ಳು, ದಿವಾಕರ ಬಸ್ತಿ ,ಸುಧಾಕರ್ ಚಂದ್ರಭವನ ಹಾಗೂ ಯುವಕ ಮಂಡಲದ ಸರ್ವ ಸದಸ್ಯರು ಸಹಕರಿಸಿದರು.

Leave A Reply

Your email address will not be published.