ಸಾವಿನಲ್ಲೂ ಸಾರ್ಥಕತೆ ಮೆರೆದ ದ್ರುವತಾರೆ ಪುನೀತ್ ರಾಜ್ ಕುಮಾರ್.ನಾಲ್ವರು ಅಂಧರ ಬಾಳಿಗೆ ಬೆಳಕಾದ ಪುಣ್ಯವಂತ.
ನೇತ್ರ ಧಾನ ಮಹಾದಾನ ಎನ್ನಲಾಗುತ್ತದೆ. ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಹೃದಯ ಸ್ತಂಭನದಿಂದ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಜೀವಂತ ಇರುವಾಗ ಹಲವಾರು ರೀತಿಯ ದಾನವನ್ನು ಮಾಡಿದ್ದಾರೆ.ಆದರೆ ಸತ್ತ ಮೇಲೂ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದೀಗ ಪುನೀತ್ ಅವರ ಕಣ್ಣು ನಾಲ್ವರ ಅಂಧಕಾರವನ್ನು ದೂರ ಮಾಡಿದೆ. ಪುನೀತ್ ರಾಜ್ ಕುಮಾರ್ ಅವರ ಕಣ್ಣನ್ನು ನಾಲ್ವರಿಗೆ ಅಳವಡಿಸಿದ್ದೇವೆ ಎಂದು ನಾರಾಯಣ ನೇತ್ರಾಲಯ ಡಾ. ಭುಜಂಗಶೆಟ್ಟಿ ಅವರು ಹೇಳಿದ್ದಾರೆ. ಈ ಕುರಿತಂತೆ ಸುದ್ದಿಗೋಷ್ಠಿ …