ಮಂಗಳೂರು : ಕ್ರೆಡಿಟ್ ಲಿಮಿಟ್ ಹೆಚ್ಚಿಸುವುದಾಗಿ ಕರೆ ಮಾಡಿ ನಂಬಿಸಿ ಬರೋಬ್ಬರಿ 6,94,918 ಲಕ್ಷ ರೂ. ವಂಚನೆ , ದೂರು ದಾಖಲು

ಕ್ರೆಡಿಟ್ ಕಾರ್ಡ್‌ನ ಕ್ಯಾಶ್ ಹಾಗೂ ಕ್ರೆಡಿಟ್ ಲಿಮಿಟ್ ಹೆಚ್ಚಿಸುವುದಾಗಿ ಕರೆಮಾಡಿ ನಂಬಿಸಿ ಓಟಿಪಿ ಪಡೆದು ಬರೋಬ್ಬರಿ 6,94,918 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು ಎಸ್‌ಬಿಐ ಕ್ರೆಡಿಟ್ ಕಾರ್ಡನ್ನು ಹೊಂದಿದ್ದು, ಅ.29ರಂದು ಅವರ ಮೊಬೈಲ್‌ಗೆ ಮಹಿಳೆಯೋರ್ವರು ಕರೆ ಮಾಡಿ ತಾನು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ನಂಬಿಸಿದ್ದಾರೆ.

ತಾನು ಕ್ರೆಡಿಟ್ ಕಾರ್ಡ್ ಪರಿಶೀಲನೆಯ ಕುರಿತು ಕರೆ ಮಾಡಿದ್ದು, ನಿಮ್ಮ ಕ್ಯಾಶ್ ಹಾಗೂ ಕ್ರೆಡಿಟ್ ಲಿಮಿಟ್ ಹೆಚ್ಚಿಸುವುದಾಗಿ ಹೇಳಿದ್ದಾರೆ. ನಂತರ ಒಟಿಪಿ ಶೇರ್ ಮಾಡಲು ಹೇಳಿದ್ದಾರೆ. ಒಟಿಪಿ ನಂಬರ್ ನೀಡಿದ ತಕ್ಷಣವೇ ದೂರುದಾರರ ಖಾತೆಯಿಂದ 99,274 ರೂ. ವರ್ಗಾವಣೆಯಾಗಿದೆ.

ಕೆಲ ಹೊತ್ತು ಮಾತನಾಡಿ, ಕ್ರೆಡಿಟ್ ಕಾರ್ಡ್‌ನಿಂದ ಹಂತಹಂತವಾಗಿ ಸುಮಾರು 6,94,918 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ.

ಈ ಪ್ರಕರಣದ ಕುರಿತು ಸೈಬರ್ ಕ್ರೈಂ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.