ಸ್ಯಾಂಡಲ್ ವುಡ್ ಗೆ ಶಾಪದಂತೆ ಕಾಡಿದ ಕಿಲ್ಲರ್ ’17’ |  ಕಿಲ್ಲರ್ ಡೇ ಗೆ ಪುನೀತ್ ಸೇರಿದಂತೆ ಕನ್ನಡದ ಮೂರು ಯುವ ನಟರ ಬಲಿ !!

ದಿನಾಂಕ 17 ಕನ್ನಡದ ಮೂರು ಪ್ರತಿಭಾವಂತ ಯುವ ನಟರನ್ನು ಕನ್ನಡ ಚಿತ್ರರಂಗದಿಂದ ಕಿತ್ತುಕೊಂಡಿದೆ. ದಿನಾಂಕ 17 ಕ್ಕೂ ಈ ಮೂವರ ಸಾವಿಗೂ ಏನು ಸಂಬಂಧ ಎಂದು ನೀವು ಯೋಚಿಸುತ್ತಿರಬಹುದು. ಆದರೆ ಅದಕ್ಕೆ ಮುಖ್ಯ ಕಾರಣವೊಂದಿದೆ.

ಕರುನಾಡಿನ ಪ್ರೀತಿಯ ‘ಅಪ್ಪು’, ಅಭಿಮಾನಿಗಳ ಪಾಲಿನ ‘ಪವರ್ ಸ್ಟಾರ್, ‘ಕನ್ನಡದ ಕಲಾರತ್ನ’ ನಟ ಪುನೀತ್ ರಾಜ್ ಕುಮಾರ್ ವಿಧಿವಶರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ. ಸಹಸ್ರಾರು ಅಭಿಮಾನಿಗಳು ಅಗಲಿದ ಪುನೀತ್ ರಾಜ್ ಕುಮಾರ್ ಅವರ ದರ್ಶನ ಮಾಡುತ್ತಿದ್ದಾರೆ. ನಾನಾ ಊರುಗಳಿಂದ ಬಂದು ಪ್ರೀತಿಯ ನಟ ಅಪ್ಪು ಅಗಲಿಕೆಯನ್ನು ನೋಡಿ ಕಣ್ಣೀರು ಸುರಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ತಾರೆಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪುನೀತ್ ಅಗಲಿಕೆ ಬಗ್ಗೆ ನೋವನ್ನು ಹೊರಹಾಕುತ್ತಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ಹುಟ್ಟಿದ್ದು, 17 ಮಾರ್ಚ್ 1975. 46 ನೇ ವಯಸ್ಸಿಗೆ ಧಿಡೀರನೇ ಅಪ್ಪು ಸಾವು ಅಭಿಮಾನಿಗಳ ಮನಸ್ಸಿನಲ್ಲಿ ಜೀರ್ಣಿಸಿಕೊಳ್ಳಲಾಗದಂತಹ ತುತ್ತಾಗಿದೆ. 17 ನೇ ದಿನಾಂಕ ಸ್ಯಾಂಡಲ್​ವುಡ್​ಗೆ ಅಶುಭದಿಂದ ಕೂಡಿದ್ದು,  17 ನೇ ತಾರೀಖಿನಂದು ಹುಟ್ಟಿದ ಖ್ಯಾತ ನಟರುಗಳು ಬೇಗನೆ ಇಹಲೋಕ ತ್ಯಜಿಸಿರುವುದು ಅಚ್ಚರಿಯಾದ ಸಂಗತಿ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಚಿರಂಜೀವಿ ಸರ್ಜಾ

ಚಿರಂಜೀವಿ ಸರ್ಜಾ ಕೂಡ ಅಕ್ಟೋಬರ್ 17 ರಂದು ಜನಿಸಿದವರು. ಇವರು ಕೂಡ ಹೃದಯಾಘಾತದಿಂದಾಗಿ ಆಸ್ಪತ್ರೆ ಸೇರಿ ಕೊನೆಗೆ ಅಭಿಮಾನಿಗಳಿ ಶಾಕಿಂಗ್ ಸುದ್ದಿ ನೀಡುವ ಮೂಲಕ ಜೂನ್ 7 ರಂದು ಇಹಲೋಕ ತ್ಯಜಿಸಿದರು. ಸಾಕಷ್ಟು ಸಿನಿಮಾ ಮೂಲಕ ಜನಮನಗೆದ್ದ ಚಿರುಗೆ ಫ್ಯಾಮಿಲಿ, ಸ್ನೇಹಿತರು ಮತ್ತು ತಮ್ಮ ಧ್ರುವ ಸರ್ಜಾ ಎಂದರೆ ಬಹಳ ಪ್ರೀತಿ. ಜನರಿಗೆ ಬಹಳ ಹತ್ತಿರವಾಗಿದ್ದ ಚಿರು ಹುಟ್ಟಿದ್ದು ಕೂಡ 17ನೇ ತಾರೀಖು ಎಂಬುದು ನೆನಪಿಸಿಕೊಳ್ಳಬೇಕಾದ ಸಂಗತಿ.

ಸಂಚಾರಿ ವಿಜಯ್

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಕೂಡ ಜುಲೈ 17 ರಂದು ಜನಿಸಿದರು. ಆದರೆ ಅಪಘಾತದಿಂದ ಆ ಸ್ಪತ್ರೆ ಸೇರಿದ ಅವರು ಜೂನ್ 15 ರಂದು ಉಸಿರು ಚೆಲ್ಲಿದರು. ಜೀವಂತವಾಗಿರುವಾಗಲೇ ಅನೇಕ ಜನಸೇವೆ ಮಾಡಿದ ಅವರು ಸತ್ತ ನಂತರವು ಅಂಗಾಂಗ ದಾನ ಮಾಡುವ ಮಹಾ ಕಾರ್ಯ ಮಾಡಿದ್ದಾರೆ.

ಇದೀಗ ರಾಜ್ ಕುಟುಂಬದ ಯುವರತ್ನ ಕೂಡ 29 ನೇ ತಾರೀಖು ಸಾವನ್ನಪ್ಪಿದ್ದಾರೆ. ದೊಡ್ಡನೆ ಮಗನ ಸಾವು ಅಭಿಮಾನಿಗಳಿಗೆ ಬಹಳ ಬೇಸರ ತರಿಸಿದೆ. ಅ. 17 ರಂದು ಜನಿಸಿ ಕುಟುಂಬದವರ ಪ್ರೀತಿಯ ಲೋಹಿತ್ ಅಭಿಮಾನಿಗಳ ಅಭಿಮಾನಕ್ಕೆ ಅಪ್ಪು ಎಂದು ಕರೆಸಿಕೊಂಡರು. ಹಲವು ಸಿನಿಮಾ ನೀಡಿ ಪುನೀತರಾಗಿ ಕೊನೆಗೆ ವಿಧಿಯ ಕ್ರೂರ ಲೀಲಿಗೆ ಓಗೊಟ್ಟಿದ್ದಾರೆ.

17ನೇ ತಾರೀಖು ನಿಜವಾಗಿಯೂ ಅಶುಭವೇ?

ದೇಶವೊಂದು 17ನೇ ತಾರೀಖನ್ನು ಅಶುಭ ಎಂದು ಆಚರಿಸುತ್ತಾ ಬಂದಿದೆ. ಮಾತ್ರವಲ್ಲದೆ, ಪ್ರತಿ ತಿಂಗಳ 17ನೇ ತಾರೀಖಿನಂದು ಯಾರು ಕೂಡ ಆ ದೇಶದಲ್ಲಿ ಮಳಿಗೆ ತೆರೆಯುವುದಿಲ್ಲವಂತೆ. ಅಂತಹದೊಂದು ದೇಶದ ಕುರಿತಾಗಿ ನೀವು ತಿಳಿದುಕೊಳ್ಳಲೇಬೇಕು.

ಹೌದು, ಇಟಲಿಯ ಜನರಿಗೆ 17ನೇ ತಾರೀಖು ಎಂದರೆ ಅಶುಭ ಎಂದು ನಂಬುತ್ತಾರೆ. ಪ್ರತಿ ತಿಂಗಳಿನಲ್ಲಿ 17ನೇ ತಾರೀಖು ಬಂತೆಂದರೆ ಅಂಗಡಿ, ಮಳಿಗೆ ಮುಚ್ಚುತ್ತಾರೆ. ಯಾವ ದುಷ್ಟ ಶಕ್ತಿ ಅಂಗಡಿ ಹೊಕ್ಕ ಬಾರದು ಎಂಬ ನಂಬಿಕೆ ಅವರಲ್ಲಿದೆ. ಮಾಹಿತಿಯಂತೆ ರೋಮನ್ ಸಂಖ್ಯೆ XVII ಅನ್ನು ಮರು-ಜೋಡಿಸಿದಾಗ ‘VIXI’ ಎಂಬ ಪದವೂ ರೂಪುಗೊಂಡಿದೆ. ಅಂದರೆ ಲ್ಯಾಟಿನ್ ಭಾಷೆಯಲ್ಲಿ ‘ನನ್ನ ಜೀವನ ಈಗ ಪೂರ್ಣಗೊಂಡಿದೆ’ ಎಂಬ ಅರ್ಥ ನೀಡುತ್ತದೆ.

ಇಟಲಿಯ ಜನರು 17 ಅಂದರೆ ಪ್ರತಿ ತಿಂಗಳ 17 ನೇ ತಾರೀಖನ್ನು ಇಷ್ಟಪಡದಿರಲು ಇದು ಕಾರಣವಾಗಿದೆ. ಅವರು ಆ ದಿನ ತಮ್ಮ ಅಂಗಡಿಗಳನ್ನು ಮುಚ್ಚುತ್ತಾರೆ ಮತ್ತು ಯಾವುದೇ ದುಷ್ಟ ಶಕ್ತಿಗಳು ಬಾರದಂತೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ದಿನಾಂಕ 13, 14 ಹಾಗೂ 15 ಬಹಳ ಅಶುಭ ದಿನಗಳು. ಈ ದಿನಾಂಕದಲ್ಲಿ ಜನಿಸಿದವರು ಜೀವನಪೂರ್ತಿ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಆದರೆ ಜ್ಯೋತಿಷ್ಯಾಸ್ತ್ರದಲ್ಲಿ 17 ನೇ ತಾರೀಖಿಗೆ ಆ ರೀತಿಯ ಯಾವುದೇ ಸಂಬಂಧವಿಲ್ಲ. ಆದರೂ ಕನ್ನಡದ ಈ ಮೂರು ಯುವ ನಟರು ಒಂದೇ ತಾರೀಖಿಗೆ ಜನಿಸಿ ಬಹುಬೇಗನೇ ವಿಧಿಯ ಕರೆಗೆ ಓಗೊಟ್ಟು ನಮ್ಮನ್ನಗಲಿದ್ದು ವಿಪರ್ಯಾಸವೇ ಸರಿ.

Leave a Reply

error: Content is protected !!
Scroll to Top
%d bloggers like this: