ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಕರೆನೀಡಿದ ಹಿಂದೂ ಜನಜಾಗೃತಿ ಸಮಿತಿ | ಸೆಕ್ಯುಲರ್’ ಭಾರತದಲ್ಲಿ ಧರ್ಮಾಧಾರಿತ ‘ಹಲಾಲ್ ಆರ್ಥಿಕತೆ’ ಯಾತಕ್ಕಾಗಿ ?!

? ಶ್ರೀ ರಮೇಶ್ ಶಿಂಧೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

‘ಹಲಾಲ್’ ಇದು ಮೂಲತಃ ಅರೇಬಿಕ್ ಪದವಾಗಿದ್ದು ಇಸ್ಲಾಮ್‌ಗನುಸಾರ ನ್ಯಾಯಸಮ್ಮತ ಎಂಬುದು ಇದರ ಅರ್ಥವಾಗಿದೆ. ಮೂಲತಃ ಮಾಂಸದ ಸಂದರ್ಭದಲ್ಲಿ
ಮಾತ್ರವಿದ್ದ, ‘ಹಲಾಲ್’ಅನ್ನು ಈಗ ಸಸ್ಯಾಹಾರಿ ಆಹಾರಗಳ ಸಹಿತ, ಸೌಂದರ್ಯವರ್ಧಕಗಳು, ಔಷಧಗಳು, ಆಸ್ಪತ್ರೆಗಳು, ಮನೆಗಳು ಸೇರಿದಂತೆ ಹಲವು ವಿಷಯಗಳಲ್ಲಿಯೂ ಈಗ ಬೇಡಿಕೆ ಮಾಡಲಾಗುತ್ತಿದೆ. ಇದಕ್ಕಾಗಿ ಹಲಾಲ್ ಇಂಡಿಯಾ, ಜಮೀಯತ್ ಉಲೇಮಾ-ಎ-ಹಿಂದ್ ನಂತಹ ಇಸ್ಲಾಮಿಕ್ ಸಂಸ್ಥೆಗಳಿಗೆ ಶುಲ್ಕ ಪಾವತಿಸಿ ಅವರಿಂದ ‘ಹಲಾಲ್ ಪ್ರಮಾಣಪತ್ರ’ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಜಾತ್ಯತೀತ ಭಾರತದಲ್ಲಿ ಸರಕಾರದ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ದಿಂದ ಅಂದರೆ (FSSAI)ನಿಂದ ಪ್ರಮಾಣಪತ್ರವನ್ನು ಪಡೆದ ನಂತರ ಈ ಖಾಸಗಿ ಇಸ್ಲಾಮಿಕ್ ಪ್ರಮಾಣಪತ್ರವನ್ನು ಪಡೆಯಯಲು ಬಲವಂತವೇಕೆ ?

ಭಾರತದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರು ಎಂದು ಕರೆಯಲ್ಪಡುವವರು ಕೇವಲ ಶೇ. 15 ರಿಂದ 17 ರಷ್ಟು ಇರುವಾಗ ಉಳಿದ ಬಹುಸಂಖ್ಯಾತ ಹಿಂದೂಗಳು ಹಾಗೂ ಇತರ ಧರ್ಮದವರ ಮೇಲೆ ‘ಹಲಾಲ್’ ಅನ್ನು ಏಕೆ ಹೇರಲಾಗುತ್ತದೆ ? ಅದರಲ್ಲೂ ಮೆಕ್‌ಡೊನಾಲ್ಡ್ ಮತ್ತು ಡೊಮಿನೊಸ್‌ನಂತಹ ವಿದೇಶಿ ಕಂಪನಿಗಳು ಭಾರತದ ಎಲ್ಲಾ ಗ್ರಾಹಕರಿಗೆ ‘ಹಲಾಲ್’ ಆಹಾರವನ್ನು ನೀಡುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ‘ಹಲಾಲ್ ಪ್ರಮಾಣೀಕರಣ’ದ ಮೂಲಕ ಗಳಿಸಿದ ಕೋಟ್ಯಂತರ ರೂಪಾಯಿಗಳು ಸರಕಾರಕ್ಕೆ ಸಿಗುವುದಿಲ್ಲ; ಅದು ಕೆಲವು ಇಸ್ಲಾಮಿಕ್ ಸಂಘಟನೆಗಳಿಗೆ ಸಿಗುತ್ತಿವೆ. ಈ ಪ್ರಮಾಣಪತ್ರಗಳನ್ನು ನೀಡಿರುವ ಕೆಲವು ಸಂಘಟನೆಗಳ ಪೈಕಿ ಕೆಲವು ಸಂಘಟನೆಗಳು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಮತಾಂಧರನ್ನು ಬಿಡುಗಡೆಗೊಳಿಸಲು ನ್ಯಾಯಾಂಗ ಸಹಾಯವನ್ನು ಮಾಡುತ್ತಿವೆ. ಜಾತ್ಯತೀತ ಭಾರತದಲ್ಲಿ ಇಂತಹ ‘ಧರ್ಮಾಧಾರಿತ ಸಮನಾಂತರ ಆರ್ಥಿಕತೆ’ಯನ್ನು ರಚಿಸುವುದು, ಇದು ದೇಶದ ಭದ್ರತೆಗೆ ತುಂಬಾ ಅಪಾಯಕಾರಿಯಾಗಿದ್ದು ಸರಕಾರ ‘ಹಲಾಲ್ ಪ್ರಮಾಣೀಕರಣ’ ಪದ್ದತಿಯನ್ನು ಕೂಡಲೇ ನಿಲ್ಲಿಸಬೇಕು, ಈ ಬೇಡಿಕೆಯೊಂದಿಗೆ ಹಿಂದೂಗಳು ಈ ದೀಪಾವಳಿಯ ಸಮಯದಲ್ಲಿ ‘ಹಲಾಲ್‌ಮುಕ್ತ ದೀಪಾವಳಿ’ ಅಭಿಯಾನದಲ್ಲಿ ಕೈಜೋಡಿಸಬೇಕು ಮತ್ತು ‘ಹಲಾಲ್-ಪ್ರಮಾಣೀಕೃತ’ ಉತ್ಪನ್ನಗಳನ್ನು ಬಹಿಷ್ಕರಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಕರೆ ನೀಡಿದ್ದಾರೆ. ಅವರು ಪಣಜಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸತ್ಯವಿಜಯ ನಾಯಿಕ ಇವರೂ ಉಪಸ್ಥಿತರಿದ್ದರು.

ಎಲ್ಲಕ್ಕಿಂತ ಆಘಾತಕರ ಸಂಗತಿಯೆಂದರೆ ಇಂದಿಗೂ ಜಾತ್ಯತೀತ ಭಾರತದಲ್ಲಿ ‘ಭಾರತೀಯ ರೈಲ್ವೆ’, ಮತ್ತು ‘ಪ್ರವಾಸೋದ್ಯಮ ನಿಗಮ’ದಂತಹ ಸರಕಾರಿ ಸಂಸ್ಥೆಗಳಲ್ಲಿ ಸಹ ‘ಹಲಾಲ್ ಪ್ರಮಾಣೀಕೃತ’ ಆಹಾರಗಳನ್ನೇ ನೀಡಲಾಗುತ್ತಿದೆ. ಶುದ್ಧ ಸಸ್ಯಾಹಾರಿ ತಿಂಡಿಗಳಿಂದ ಹಿಡಿದು ಒಣಗಿಸಿದ ಹಣ್ಣುಗಳು, ಸಿಹಿತಿಂಡಿಗಳು, ಚಾಕೊಲೇಟ್‌ಗಳು, ಧಾನ್ಯಗಳು, ಎಣ್ಣೆಗಳು, ಸೋಪುಗಳು, ಶಾಂಪೂಗಳು, ಟೂತ್‌ಪೇಸ್ಟ್‌ಗಳು, ಕಾಡಿಗೆ, ಲಿಪ್‌ಸ್ಟಿಕ್‌ಗಳು ಇನ್ನಿತರ ಸೌಂದರ್ಯವರ್ಧಕಗಳು ‘ಹಲಾಲ್ ಪ್ರಮಾಣೀಕೃತ’ ಆಗುತ್ತಿವೆ. ಇಂಗ್ಲೆಂಡಿನಲ್ಲಿ ನಿಕೋಲಸ್ ತಾಲೇಬ್ ಎಂಬ ವಿದ್ವಾಂಸರು ಇದನ್ನು ‘ಮೈನರಟಿ ಡಿಕ್ಟೆಟರಶಿಪ್’ (ಅಲ್ಪಸಂಖ್ಯಾತರ ಸರ್ವಾಧಿಕಾರ) ಎಂದು ಹೇಳಿದ್ದಾರೆ. ಇದು ಹೀಗೆಯೇ ಮುಂದುವರಿದರೆ, ಭಾರತ ‘ಇಸ್ಲಾಮೀಕರಣ’ದತ್ತ ಸಾಗುತ್ತಿದೆ ಎಂದೇ ಹೇಳುವುದರಲ್ಲಿ ತಪ್ಪಿಲ್ಲ.
ಭಾರತ ಸರಕಾರದ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ವು ( FSSAI  ) ಇರುವಾಗ ಭಾರತದಲ್ಲಿ ‘ಹಲಾಲ್ ಪ್ರಮಾಣಪತ್ರ’ ನೀಡುವ ಇಸ್ಲಾಮಿಕ್ ಸಂಸ್ಥೆಗಳ ಅವಶ್ಯಕತೆ ಏನಿದೆ ? ಈ ಹಲಾಲ್ ಪ್ರಮಾಣಪತ್ರಕ್ಕೆ ಮೊದಲು 21,500 ರೂಪಾಯಿ ಮತ್ತು ಪ್ರತಿವರ್ಷ ನವೀಕರಣಕ್ಕೆ 15,000 ರೂಪಾಯಿ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ. ಇದರಿಂದ ನಿರ್ಮಾಣವಾಗುತ್ತ್ತಿರುವ ಹಲಾಲ್‌ನ ಸಮಾನಾಂತರ ಆರ್ಥಿಕತೆಯನ್ನು ತಡೆಗಟ್ಟುವುದು ಅನಿವಾರ್ಯವಾಗಿದೆ, ಅದಕ್ಕಾಗಿಯೇ ಈ ವರ್ಷದ ದೀಪಾವಳಿಗೆ ವಸ್ತುಗಳನ್ನು ಖರೀದಿಸುವಾಗ ಗ್ರಾಹಕರ ಹಕ್ಕು ಎಂದು ‘ಹಲಾಲ್ ಪ್ರಮಾಣೀಕೃತ’ ಉತ್ಪನ್ನಗಳು, ಮೆಕ್‌ಡೊನಾಲ್ಡ್ ಮತ್ತು ಡೊಮಿನೋಸ್ ಆಹಾರವನ್ನು ಬಹಿಷ್ಕರಿಸಬೇಕು ಮತ್ತು ‘ಹಲಾಲ್ ಮುಕ್ತ ದೀಪಾವಳಿ’ ಅಭಿಯಾನದಲ್ಲಿ ಭಾಗವಹಿಸಬೇಕು, ಎಂದು ಸಮಿತಿಯು ಮನವಿ ಮಾಡಿದೆ. ಸಮಿತಿಯು ಆಂದೋಲನಗಳು, ಮನವಿಗಳು, ಸಾಮಾಜಿಕ ಮಾಧ್ಯಮ ಇತ್ಯಾದಿಗಳ ಮೂಲಕ ಜಾಗೃತಿ ಮೂಡಿಸುತ್ತಿದೆ.

Leave A Reply

Your email address will not be published.