ಫೇಸ್ಬುಕ್, ಇನ್ಸ್ಟಾಗ್ರಾಮ್ ತ್ಯಜಿಸಿ ಬರೋಬ್ಬರಿ 31ಕೆ.ಜಿ ತೂಕ ಇಳಿಸಿಕೊಂಡ ಮಹಿಳೆ!! | ಅದೇಗೆ ಅಂತೀರಾ?? ಇಲ್ಲಿದೆ ಕಂಪ್ಲೀಟ್ ಸ್ಟೋರಿ

ಪ್ರತಿಯೊಬ್ಬ ವ್ಯಕ್ತಿಯೂ ಇಂದು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಿಗೆ ಅಡಿಕ್ಟ್ ಆಗಿ ಹೋಗಿದ್ದಾರೆ. ಒಂದು ಹೊತ್ತು ಅದನ್ನು ಪಕ್ಕಕಿಟ್ಟರೂ ಮತ್ತೆ ಅದೇ ಚಾಳಿ.ಸದ್ಯ ಇದು ಎಲ್ಲರ ಅಚ್ಚುಮೆಚ್ಚಿನ ಜಾಗವೆಂದೇ ಹೇಳಬಹುದು.ಬೆಳಿಗ್ಗೆ ಹಾಸಿಗೆಯಲ್ಲಿರುವಾಗಿನಿಂದ ಶುರುವಾಗಿ ರಾತ್ರಿ ನಿದ್ರೆಗೆ ಜಾರುವವರೆಗೂ ಸೋಶಿಯಲ್ ಮಿಡಿಯಾದೇ ಹವ.

ಅದೆಷ್ಟೋ ಮಂದಿ ಒಂದೇ ಕಡೆ ಕುಳಿತು, ಇಡೀ ದಿನ ಸಾಮಾಜಿಕ ಜಾಲತಾಣ ವೀಕ್ಷಣೆ ಮಾಡುವವರಿದ್ದಾರೆ.ಇದು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ಇಷ್ಟೆಲ್ಲಾ ಸಾಮಾಜಿಕ ಜಾಲತಾಣದ ಬಗ್ಗೆ ಯಾಕೆ ವಿವರಿಸುತ್ತಿದ್ದೇನೆ ಎಂಬ ಚಿಂತೆಯೇ.!?.ಹೌದು. ಅಂಟು ರೋಗದಂತಿರುವ ಈ ಜಾಲತಾಣ ತೊರೆದ್ರೆ ಜೀವನದಲ್ಲಿ ಸಾಧನೆ ಮಾಡಲು ಸುಲಭ ಎಂಬುದನ್ನು ಮಹಿಳೆಯೊಬ್ಬಳು ಸಾಕ್ಷಿ ಎಂಬಂತೆ ತೋರಿಸಿಕೊಟ್ಟಿದ್ದಾಳೆ.

ಈಕೆ ಉತ್ತರ ಲಂಡನ್ ನಿವಾಸಿ ಬ್ರೆಂಡಾ.ಸಾಮಾಜಿಕ ಜಾಲತಾಣದಿಂದ ದೂರವಿದ್ದು, ಆ ಸಮಯವನ್ನು ತೂಕ ಇಳಿಸಿಕೊಳ್ಳಲು ಬಳಸಿಕೊಂಡು ಒಂದು ವರ್ಷದಲ್ಲಿ ಆಕೆ 31 ಕೆ.ಜಿ. ತೂಕ ಇಳಿಸಿಕೊಳ್ಳುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾಳೆ.

ಚಿಕ್ಕ ವಯಸ್ಸಿನಲ್ಲಿಯೇ ಬ್ರೆಂಡಾ ದಪ್ಪಗಿದ್ದಳಂತೆ. ಆದ್ರೆ 2019ರಲ್ಲಿ ಆಕೆ ತೂಕ ಮತ್ತಷ್ಟು ಹೆಚ್ಚಾಗಿತ್ತಂತೆ.ಲಾಕ್ ಡೌನ್ ವೇಳೆ ಮತ್ತಷ್ಟು ತೂಕ ಏರಿದ್ದು,ಇದಕ್ಕೆ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಕಾರಣ ಎಂದು ಹೇಳುತ್ತಾರೆ.ಬ್ರೇಂಡಾ ಸೋಶಿಯಲ್ ಮೀಡಿಯಾದಲ್ಲಿ ತೂಕ ಇಳಿಸಿಕೊಳ್ಳುವ ಮಾರ್ಗಗಳನ್ನು ವೀಕ್ಷಣೆ ಮಾಡುತ್ತಿದ್ದು,ಅದು ಖಿನ್ನತೆಗೆ ಕಾರಣವಾಗಿತ್ತು. ಇದ್ರಿಂದ ಕೋಪಗೊಂಡು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಡಿಲಿಟ್ ಮಾಡಿದ್ದಾಳೆ.

‘ಇದಾದ ಕೆಲವೇ ದಿನಗಳಲ್ಲಿ ನನ್ನ ತೂಕ ಇಳಿಯಲು ಶುರುವಾಯ್ತು ‘ಎಂದು ಬೆಂಡಾ ಹೇಳಿದ್ದಾಳೆ. ಬೆಂಡಾ, ಸಾಮಾಜಿಕ ಜಾಲತಾಣ ನೋಡುವ ಸಮಯದಲ್ಲಿ ವಾಕಿಂಗ್, ಆರೋಗ್ಯಕರ ಅಡುಗೆ ಮಾಡುತ್ತಾಳಂತೆ. ಉತ್ತಮ ಡಯಟ್ ತನ್ನ ತೂಕ ಇಳಿಯಲು ಕಾರಣವಾಗಿದೆ ಎಂದು ಆಕೆ ಹೇಳಿದ್ದಾಳೆ.

Leave A Reply

Your email address will not be published.