ರಸ್ತೆ ಮಧ್ಯೆ ಬಂದು ಬಟ್ಟೆ ಬಿಚ್ಚಿದ 50 ಜನ ಮಿರುಗುವ ದೇಹದ ಗಗನಸಖಿಯರು | ಬೆರಗು ಕಣ್ಣಿನಿಂದ ನೋಡುತ್ತಾ ನಿಂತ ಜನ !!

ಗಗನಸಖಿಯರು ಅಂದ್ರೆ ಬೆಳ್ಳನೆಯ ದೇಹಿಗಳು, ತೆಳ್ಳನೆಯ ಬಳ್ಳಿಯಾಕಾರದ ಜೀವಿಗಳು. ಥೇಟು ಮಾಡೆಲ್ ರೀತಿಯಲ್ಲಿ ಗೋಚರಿಸುವ ಈ ಚೆಲುವೆಯರದು ಐಷಾರಾಮಿ ಜೀವನಶೈಲಿ, ಅವರು ಸದಾ ವಿಮಾನದಲ್ಲಿ ಹಾರಾಡುತ್ತಾರೆ. ಹೀಗೆ ಹತ್ತಾರು ಕಲ್ಪನೆಗಳು ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ ಅವುಗಳನ್ನು ಬದಿಗೊತ್ತಿ ನೋಡಿದರೆ ಅವರ ಜೀವನದಲ್ಲಿ ಕೂಡ ಅದೆಷ್ಟೋ ಸಮಸ್ಯೆಗಳಿರುತ್ತವೆ. ಅವುಗಳಿಗೆಲ್ಲ ಪುಷ್ಠಿ ನೀಡುತ್ತಿದೆ ಈ ಘಟನೆ.

ಇತ್ತೀಚೆಗೆ ಇಟಲಿ ದೇಶದ ರಾಜಧಾನಿ ರೋಮ್ ನಗರಿಯಲ್ಲಿ ಸಾರ್ವಜನಿಕರಿಗೆ ಶಾಕ್ ಒಂದು ಕಾದಿತ್ತು. 50 ಮಂದಿ ಯುವತಿಯರು ಸದ್ದುಗದ್ದಲ ಇಲ್ಲದೆ ರಸ್ತೆಯಲ್ಲಿ ನಡೆದು ಬಂದು ಟೌನ್ ಹಾಲ್ ಬಳಿ ನಿಂತವರೇ ಇದ್ದಕ್ಕಿದ್ದಂತೆ ಬಟ್ಟೆ ಕಳಚಲು ಆರಂಭಿಸಿದ್ದರು!!

ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಈ ದೃಶ್ಯ ಕಂಡು ಅಚ್ಚರಿ ಆಗಿತ್ತು. ಸಾರ್ವಜನಿಕವಾಗಿ ವಿವಸ್ತ್ರಗೊಂಡ ಆಕರ್ಷಕ ಮೈಕಟ್ಟಿನ ಈ ಲಲನೆಯರ ಅಂಗ ಸೌಂದರ್ಯ ಕಂಡು ದಾರಿಹೋಕರು ಬೆರಗಿನಿಂದ ಕಣ್ಣರಳಿಸಿ ಇನ್ನಿಲ್ಲದ ಕುತೂಹಲದಿಂದ ನೋಡಿದ್ದರು. ವಿಮಾನದಲ್ಲಿ ಆಕರ್ಷಕ ಯೂನಿಫಾರ್ಮ್ ತೊಟ್ಟು ಪ್ರಯಾಣಿಕರ ಪರಿಚಾರಿಕೆಯ ಕೆಲಸ ಮಾಡುವ ಈ ಏರ್ ಹೋಸ್ಟೆಸ್​ಗಳು ಸುಮ್ಮಸುಮ್ನೆ ಬಂದು ಸಾರ್ವಜನಿಕವಾಗಿ ಬಟ್ಟೆ ಬಿಚ್ಚುವುದು ಅಂದರೆ ಏನು? ಏನಾದರೂ ಬಲವಾದ ಕಾರಣ ಇರಲೇಬೇಕು. ಇವರು, ಇಟಲಿಯಲ್ಲಿ ಹೊಸ ಐಟಿಎ ಏರ್​ಲೈನ್ ಸ್ಥಾಪನೆ ಹಾಗೂ ಉದ್ಯೋಗ ಸ್ಥಳದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ವಿರೋಧಿಸಿ ಇಂಥ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಅಂದಹಾಗೆ, ಇವರು ಬಟ್ಟೆ ಕಳಚಿದರು ಎಂದರೆ ಸಂಪೂರ್ಣ ಬೆತ್ತಲಾದರು ಎಂದಲ್ಲ. ತಮ್ಮ ಏರ್​ಹೋಸ್ಟೆಸ್​ನ ಯೂನಿಫಾರ್ಮ್ ಅನ್ನು ಮಾತ್ರ ಕಳಚಿದರು. ಒಳ ಉಡುಪಿನಲ್ಲಿ ನಿಂತ ಇವರು ಕೆಲ ಹೊತ್ತು ಮೌನವಾಗಿ ನಿಂತರು. ಬಳಿಕ ತಾವು ಕಳಚಿದ ಉಡುಪು ಹಾಗು ಶೂಗಳನ್ನ ಎತ್ತಿಕೊಳ್ಳುತ್ತಾ ಇವರು “ನಾವು ಆಲಿಟಾಲಿಯಾ” ಎಂದು ಘೋಷಣೆ ಕೂಗತೊಡಗಿದರು.

ಆಲಿಟಾಲಿಯಾ ಅಂದರೇನು ?

ಆಲಿಟಾಲಿಯಾ ಇಟಲಿಯಲ್ಲಿ ದಶಕಗಳಿಂದ ಸೇವೆಯಲ್ಲಿದ್ದ ವಿಮಾನಯಾನ ಸಂಸ್ಥೆ. ಅಕ್ಟೋಬರ್ 14ರಂದು ಇದರ ಸೇವೆ ನಿಂತಿತು. ಕಾರಣ, ಐಟಿಎ ಏರ್​ವೇಸ್ ಸಂಸ್ಥೆ ಇದನ್ನು ಖರೀದಿಸಿತ್ತು. ಬಹಳ ನಷ್ಟದಲ್ಲಿ ನಡೆಯುತ್ತಿದ್ದ ಆಲಿಟಾಲಿಯಾ ಏರ್​ಲೈನ್ ಸಂಸ್ಥೆ ಈ ಹಿಂದೆ ತನ್ನ ಸಂಕಷ್ಟದಿಂದ ಹೊರಬರಲು ಹಲವು ರೀತಿಯಲ್ಲಿ ಪ್ರಯತ್ನ ನಡೆಸಿತ್ತು. ಆದರೆ, ಸಾಧ್ಯವಾಗಿರಲಿಲ್ಲ. ಕೊನೆಗೆ ಐಟಿಎ ಏರ್​ವೇಸ್ ಸಂಸ್ಥೆಗೆ ಮಾರಾಟವಾಗದೇ ಬೇರೆ ವಿಧಿ ಇರಲಿಲ್ಲ.

ಇಷ್ಟೇ ಆಗಿದ್ದರೆ ಆಲಿಟಾಲಿಯಾ ಸಂಸ್ಥೆಯ ನೌಕರರು ತಮ್ಮ ಕೆಲಸ ಉಳಿಯಿತೆಂದು ನೆಮ್ಮದಿಯಾಗಿಯೇ ಇರಬಹುದಿತ್ತು. ಆದರೆ, ಖರೀದಿ ಬಳಿಕ ಆದ ಬೆಳವಣಿಗೆಯೇ ಬೇರೆ. ಹಿಂದಿನ ಅಲಿಟಾಲಿಯಾ ಸಂಸ್ಥೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಬಹುತೇಕ ಮಂದಿ ಕೆಲಸ ಕಳೆದುಕೊಂಡರು. ಐಟಿಎ ಏರ್​ವೇಸ್​ನಲ್ಲಿ ಕೆಲಸ ಪಡೆದ ಕೆಲ ಉದ್ಯೋಗಿಗಳಿಗೆ ವಿಪರೀತ ತಾರತಮ್ಯ ಮಾಡಲಾಗುತ್ತಿದೆ. ಅವರ ಸಂಬಳ ಕಡಿತ, ಪ್ರೊಮೋಷನ್​ನಿಂದ ವಂಚನೆ ಇತ್ಯಾದಿ ದೌರ್ಜನ್ಯ ನಡೆಯುತ್ತಿದೆ ಎಂದು ಈ ವಿಮಾನ ಪರಿಚಾರಿಕೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮಿಂದ ನಿಂತಿರುವ ಐಟಿಎ ಏರ್​ವೇಸ್ ಈಗ ನಮಗೇ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ಧಾರೆ.

ಅಲಿಟಾಲಿಯಾ ಸಂಸ್ಥೆ 110 ವಿಮಾನಗಳನ್ನು ಚಾಲನೆಯಲ್ಲಿರಿಸಿದ್ದ ಕಂಪನಿಯಾಗಿತ್ತು. 10 ಸಾವಿರ ನೌಕರರು ಇದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಇದನ್ನು ಖರೀದಿಸಿದ ಐಟಿಎ ಏರ್​ವೇಸ್ ಸಂಸ್ಥೆ ಹೊಂದಿರುವುದು ಕೇವಲ 52 ವಿಮಾನ ಮಾತ್ರ. ಉದ್ಯೋಗಿಗಳ ಸಂಖ್ಯೆ 2,800 ಮಾತ್ರ.

ಅದೇನೇ ಇದ್ದರೂ ಹಿಂದಿನ ಕಂಪನಿಯ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡು ಅವರಿಗೆ ಕಡಿಮೆ ಸಂಬಳ ಕೊಡುತ್ತಿರುವ ವಿಚಾರಕ್ಕೆ ಐಟಿಎ ಏರ್​ವೇಸ್ ಸಂಸ್ಥೆಯರು ಉತ್ತರ ಕೊಟ್ಟಿಲ್ಲವೆನ್ನಲಾಗಿದೆ. ಈ ಕಾರಣಕ್ಕಾಗಿ ಗಗನಸಖಿಯರು ಪ್ರತಿಭಟನೆ ನಡೆಸುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: