ಪತಿಗೆ ತಿಳಿಯದಂತೆ ಕದ್ದು ಆನ್ಲೈನ್ ಶಾಪಿಂಗ್ ಮಾಡಿದ ಪತ್ನಿ | ಗ್ರಾಹಕಿ ಯನ್ನು ಕಾಪಾಡಲು ಅಮೆಜಾನ್ ಡೆಲಿವರಿ ಗರ್ಲ್ ಮಾಡಿದ ಪ್ಲಾನ್ ನೋಡಿದರೆ ನೀವು ದಂಗಾಗುವುದು ಪಕ್ಕಾ!!

ಶಾಪಿಂಗ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗೆ ಕೇಳೋದೇ ಬೇಡ.ಮನೆಯಲ್ಲಿ ಅದೆಷ್ಟೇ ಬಟ್ಟೆಗಳು ತುಂಬಿದ್ದರೂ ಹೊಸದನ್ನು ಖರೀದಿ ಮಾಡಲು ಹಿಂದೇಟು ಹಾಕಲ್ಲ.ಇವಾಗಿನ ಕಾಲವಂತೂ ಆನ್ ಲೈನ್ ಮಯವಾಗಿದ್ದು, ಮನೆಯಲ್ಲೇ ಕೂತು ಶಾಪಿಂಗ್ ಮಾಡಬಹುದು.ಇದೇ ರೀತಿ ತನ್ನ ಗಂಡನ ಕಣ್ಣು ತಪ್ಪಿಸಿ ಆನ್ಲೈನ್ ಆರ್ಡರ್ ಮಾಡಿದ ಪತ್ನಿಯ ಐಡಿಯಾ ನೋಡಿದ್ರೆ ಒಮ್ಮೆ ನಗೋದಂತೂ ಗ್ಯಾರಂಟಿ.

ಅಮೆರಿಕದ ಮಹಿಳೆ ಪತಿಗೆ ತಿಳಿಯದಂತೆ ಆನ್ ಲೈನ್ ಶಾಪಿಂಗ್ ಮಾಡಿದ್ದರಿಂದ, ತನ್ನ ಗ್ರಾಹಕಿಯನ್ನು ಕಾಪಾಡಲು ಆಮೆಜಾನ್ ಡೆಲಿವರಿ ಗರ್ಲ್ ಮಾಡಿದ ಪ್ಲಾನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಡೇಲಿ ಮೇಲ್ ವರದಿ ಪ್ರಕಾರ ಈ ಘಟನೆ ಅಮೆರಿಕಾದ ಓಕ್ಲೋಹೊಮಾದಲ್ಲಿ ನಡೆದಿದೆ. ಮನೆಗೆ ಪಾರ್ಸೆಲ್ ತಂದು ಅದನ್ನು ಬಚ್ಚಿಡುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಗ್ರಾಹಕಿ ತನಗೆ ಯುವತಿ ಸಹಾಯ ಮಾಡಿದ ಸಹಾಯವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

https://youtu.be/qRrXRM4tLac

ವೈರಲ್ ವಿಡಿಯೋದಲ್ಲಿ ಇರೋ ಪ್ರಕಾರ,ಓರ್ವ ಅಮೇಜಾನ್ ಡೆಲಿವರಿ ಗರ್ಲ್ ಪಾರ್ಸೆಲ್ ತೆಗೆದುಕೊಂಡು ಮನೆಯ ಹತ್ತಿರ ಬರುತ್ತಾಳೆ. ಬಂದ ಕೂಡಲೇ ಪಾರ್ಸೆಲ್ ಮನೆಯ ಮುಂದೆ ಇರಿಸುತ್ತಾಳೆ. ಅಲ್ಲಿ ಆಕೆಗೆ ಒಂದು ಚೀಟಿ ಕಾಣಿಸುತ್ತದೆ. ಚೀಟಿಯಲ್ಲಿ ಪತಿಗೆ ತಿಳಿಯದಂತೆ ಶಾಪಿಂಗ್ ಮಾಡಿದ್ದು, ಪಾರ್ಸೆಲ್ ಮುಚ್ಚಿಡಿ ಎಂದು ಬರೆಯಲಾಗಿತ್ತು. ಕೂಡಲೇ ಪಾರ್ಸೆಲ್ ಎತ್ತಿಕೊಂಡ ಮಹಿಳೆ, ಅದನ್ನು ಪಕ್ಕದಲ್ಲಿರುವ ಪೊದೆಗಳ ಮಧ್ಯೆ ಬಚ್ಚಿಡುತ್ತಾಳೆ. ಪೊದೆಯಲ್ಲಿರಿಸಿದ ಪಾರ್ಸೆಲ್ ಫೋಟೋ ಕ್ಲಿಕ್ಕಿಸಿಕೊಂಡ ಯುವತಿ ಹಿಂದಿರುಗಿದ್ದಾಳೆ.

ಬಳಿಕ ಪಾರ್ಸೆಲ್ ಆರ್ಡರ್ ಮಾಡಿದ್ದ ಗ್ರಾಹಕಿ ಈ ವಿಡಿಯೋವನ್ನು ಟಿಕ್ ಟಾಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ವಿಡಿಯೋ ವೈರಲ್ ಆಗಿದ್ದು, ವಿಶೇಷವಾಗಿ ಮಹಿಳೆಯರು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಅಮೇಜಾನ್ ಪಾರ್ಸೆಲ್ ತಂದ ಯುವತಿಯನ್ನು ತಲುಪಿದ್ದು, ತನ್ನ ಸಮರ್ಥಿಸಿಕೊಂಡ ಮಹಿಳೆಯರಿಗೆ ಧನ್ಯವಾದ ಸಲ್ಲಿಸಿದ್ದಾಳೆ. ಯುವತಿ ತನ್ನ ಹೆಸರು ಲೀಜಾ ಹಾಲ್ ಎಂದು ಹೇಳಿಕೊಂಡಿದ್ದಾಳೆ. ಟಿಕ್ ಟಾಕ್ ನಲ್ಲಿ ಈ ವಿಡಿಯೋ ಒಂದು ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ.

Leave A Reply

Your email address will not be published.