ಈ ಮೀನನ್ನು ಕೊಳ್ಳುವ ದುಡ್ಡಲ್ಲಿ ನೀವು 30/40 ಸೈಟ್ ನಲ್ಲಿ ಒಂದು ದೊಡ್ಡ ಮನೆ ಕಟ್ಟಿ ಬಿಡಬಹುದು | ಅಷ್ಟಕ್ಕೂ ಈ ಮೀನಿನ ರೇಟ್ ಎಷ್ಟು ಗೊತ್ತಾ ?!

ಸತ್ಯವಾಗಿಯೂ ಈ ಮೀನು ನಮ್ಮ ನಿಮ್ಮಂತವರು ಕೊಳ್ಳುವಂತೆಯೇ ಇಲ್ಲ. ಈ ಮೀನು ಕೊಳ್ಳುವ ದುಡ್ಡಲ್ಲಿ ನೀವು 30/40 ಸೈಟ್ ನಲ್ಲಿ ಒಂದು ದೊಡ್ಡ ಮನೆ ಕಟ್ಟಿ ಬಿಡಬಹುದು. ಅಷ್ಟರ ಮಟ್ಟಿಗಿನ ದುಬಾರಿ ಮೀನದು !!

ಪಶ್ಚಿಮ ಬಂಗಾಳದ ಸುಂದರ್‌ಬನ್ ನದಿಗಳಲ್ಲಿ ದೀರ್ಘಕಾಲದಿಂದ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರಿಗೆ ದೈತ್ಯ ‘ಟೆಲಿಯಾ ಭೋಲಾ’ ಎಂಬ ಮೀನು ತಮ್ಮ ಬಲೆಗೆ ಬಿದ್ದಿದೆ. ಇದು ಕೂಡ ಇತರ ಎಲ್ಲಾ ಮೀನುಗಳಂತೆ ಒಂದು ಮೀನು ಎಂದು ಅದನ್ನು ಹಿಡಿದು ಮೇಲಕ್ಕೆತ್ತಿ ತಕ್ಷಣ ಮೀನನ್ನು ಸ್ಥಳೀಯ ಮಾರುಕಟ್ಟೆಗೆ ತಂದರು.

ಸುಮಾರು 7 ಅಡಿ ಉದ್ದ ಮತ್ತು 78.4 ಕಿಲೋ ತೂಕದ ದೈತ್ಯಾಕಾರದ ಟೆಲಿಯಾ ಭೋಲಾ ಮೀನು ಇದಾಗಿದ್ದು, ಈ ಬೃಹತ್ ಗಾತ್ರದ ಮೀನು ಹಿಡಿದ 5 ಜನ ಮೀನುಗಾರರಿಗೆ ಆಶ್ಚರ್ಯವಾಗಿತ್ತು. ಸಹಜವಾಗಿ ಮೀನುಗಾರರಿಗೆ ಖುಷಿಯಾಗಿತ್ತು. ಇದು ದೊಡ್ಡ ಮೀನು ಆದುದರಿಂದ ಒಂದಷ್ಟು ದುಡ್ಡು ಜೇಬು ಸೇರುವ ಖುಷಿಯಲ್ಲಿ ಅವರಿದ್ದರು.
ಅದೇ ಲೆಕ್ಕಾಚಾರದಲ್ಲಿ ಬಲೆಗೆ ಬಿದ್ದ ಈ ದೈತ್ಯ ಮೀನನ್ನು ಮೀನುಗಾರರು ಸಂಜೆ ಕ್ಯಾನಿಂಗ್ ಮಾರುಕಟ್ಟೆಗೆ ಹರಾಜಿಗಾಗಿ ತಂದರು. ಆದರೆ ಅಲ್ಲಿ ನಡೆದ ಹರಾಜಿನಲ್ಲಿ ಆ ಮೀನು ದುಡಿದು ಕೊಟ್ಟ ದುಡ್ಡು ನೋಡಿ ಮೀನುಗಾರರೆಲ್ಲರೂ ಗಾಬರಿಬಿದ್ದು ಹೋಗಿದ್ದರು. ಆ ಮಟ್ಟಿಗೆ ಒಂದು ಮೀನು ಬಡ ಮೀನುಗಾರರ ಅದೃಷ್ಟವನ್ನು ಬದಲಾಯಿಸಿತ್ತು !!

ಈ ಮೀನನ್ನು ಅಲ್ಲಿ ಹರಾಜು ಹಾಕಲಾಗಿದ್ದು, ಕೋಲ್ಕತ್ತಾ ಮೂಲದ ಕೆಎಂಪಿ ಎಂಬ ಮೀನು ವ್ಯಾಪಾರ ಕಂಪನಿ ಅದನ್ನು ಖರೀದಿಸಿದೆ. ಅದರ ಬೆಲೆ ಕೇಳಿದರೆ ನೀವು ನಿಬ್ಬೆರಗಾಗದೆ ಇರಲಾರಿರಿ. ಆ ಮೀನು 36, 53,605 ( 36.5 ಲಕ್ಷ !!) ದ ಅಚ್ಚರಿಯ ಬೆಲೆಗೆ ಮಾರಾಟ ಆಗಿದೆ.
ಅಂದರೆ ಹರಾಜಿನಲ್ಲಿ ಪ್ರತಿ ಕಿಲೋಗೆ ರೂ.47,880 ದರದಲ್ಲಿ ಮೀನನ್ನು ಮಾರಾಟ ಮಾಡಲಾಗಿದೆ ಎಂದು ವ್ಯಾಪಾರಿಯೊಬ್ಬರು ಹೇಳಿದ್ದಾರೆ.

ಏನೀ ಮೀನಿನ ಸ್ಪೆಷಾಲಿಟಿ ?!

ಅಲ್ಲಿನ ಸ್ಥಳೀಯಮೀನುಗಾರರ ಪ್ರಕಾರ, ಆಡುಮಾತಿನಲ್ಲಿ ಟೆಲಿಯಾ ಭೋಲಾ ಎಂದು ಕರೆಯಲ್ಪಡುವ ಈ ದೈತ್ಯ ಮೀನು ಅಪಾರ ಪ್ರಮಾಣದ ಔಷಧೀಯ ಮೌಲ್ಯವನ್ನು ಹೊಂದಿದೆ. ಮೀನಿನ ಹೊಟ್ಟೆಯಲ್ಲಿ ಕೆಲವು ಅಮೂಲ್ಯವಾದ ಸಂಪನ್ಮೂಲಗಳಿವೆ ಎಂದು ಹೇಳಲಾಗುತ್ತದೆ. ಅದೇ ಕಾರಣಕ್ಕೆ ಈ ಮೀನು ತುಂಬಾ ದುಬಾರಿಯಾಗಿದೆ. ಈ ಮೀನು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ ಮತ್ತು ಔಷಧಿಗಳ ತಯಾರಿಕೆಯಲ್ಲಿ ಬಳಸಲು ರಫ್ತು ಮಾಡಲಾಗುತ್ತದೆ ಎನ್ನಲಾಗುತ್ತಿದೆ.

ಇತ್ತೀಚೆಗೆ, ಮಹಾರಾಷ್ಟ್ರದ ಪಾಲ್ಘರ್‍ನಲ್ಲಿ ಮೀನುಗಾರರೊಬ್ಬರು 1.33 ಕೋಟಿ ಮೌಲ್ಯದ 157 ಘೋಲ್ ಮೀನುಗಳನ್ನು ಹಿಡಿದಿದ್ದರು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಘೋಲ್ ಮೀನು ವಿಶ್ವದ ಅತ್ಯಂತ ದುಬಾರಿ ಸಮುದ್ರ ಮೀನುಗಳಲ್ಲಿ ಒಂದಾಗಿದೆ. ಪೂರ್ವ ಏಷ್ಯಾದಲ್ಲಿ ಮೀನನ್ನು ಅದರ ಔಷಧೀಯ ಗುಣಗಳಿಗಾಗಿ ಬಳಸಲಾಗುತ್ತದೆ.

Leave A Reply

Your email address will not be published.