BTS ಚಾಲಕರಾಗಿದ್ದ ಗೆಳೆಯನಿಗೆ ದಾದಾ ಸಾಹೇಬ್ ಪ್ರಶಸ್ತಿ ಅರ್ಪಿಸಿದ ಸೂಪರ್ ಸ್ಟಾರ್ ರಜನಿಕಾಂತ್ | ನಡೆದು ಬಂದ ನೆಲ ಮರೆಯದ ಹೀರೋಗೆ ಒಂದು ವಂದನೆ !

ಅದೆಷ್ಟೋ ಸಿನಿಮಾ ನಟರು ಉನ್ನತ ಸ್ಥಾನ ಏರಿದಂತೆ ತಮ್ಮ ಬೆನ್ನ ಹಿಂದೆ ಕೈ ಸಹಾಯವಾಗಿ ನಿಂತ ವ್ಯಕ್ತಿಯ ಪರಿಚಯವೇ ಇಲ್ಲದಂತೆ ವರ್ತಿಸುತ್ತಾರೆ. ಆದರೆ ನಡೆದ ನೆಲ ಮರೆಯದೆ ನಡೆವ ಓರ್ವ ವ್ಯಕ್ತಿ ಇದ್ದಾನೆ. ಆತ ಬೇರ್ಯಾರೂ ಅಲ್ಲ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್. ಈಗ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆಗಾಗಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ‘ದಾದಾ ಸಾಹೇಬ್ ಫಾಲ್ಕೆ’ ಸಂದಿದೆ. ಅದನ್ನವರು ತನ್ನ ಕಷ್ಟ ಕಾಲದ ಮಿತ್ರ ರಾಜ್ ಬಹಾದೂರ್ ಗೆ ಅರ್ಪಿಸಿ ಮತ್ತಷ್ಟು ದೊಡ್ಡ ವ್ಯಕ್ತಿಯಾಗಿ ಮೂಡಿ ನಿಂತಿದ್ದಾರೆ.

ಸೋಮವಾರದಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಜನಿಕಾಂತ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.ಇವರ ಸಾಧನೆಗೆ ಅದೆಷ್ಟೋ ಸಾಲು ಸಾಲು ಬಳಗವು ಶುಭ ಹಾರೈಸಿದೆ.ಸಿನಿಮಾ ಕ್ಷೇತ್ರದಲ್ಲಿ ಸಾಧನೆಗಾಗಿ ರಜನಿಕಾಂತ್​ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. 67ನೇ ರಾಷ್ಟ್ರ ಪ್ರಶಸ್ತಿ ಸಮಾರಂಭ ಇದಾಗಿದ್ದು, 2019ರಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ.

ಹೌದು ಇವರು ಇಷ್ಟು ಪ್ರೇಕ್ಷಕರನ್ನು ಪಡೆಯಲು ಕಾರಣವೇ ಇವರ ಲೈಫ್ ಸ್ಟೈಲ್ ಎಂದು ಹೇಳಬಹುದು. ಯಾಕೆಂದರೆ ರಜನಿಕಾಂತ್ ಇಂದು ಚಿತ್ರರಂಗದಲ್ಲಿ ಉನ್ನತ ಸ್ಥಾನಕ್ಕೇರಿದ್ದರೂ ಇದಕ್ಕೆ ಕಾರಣಕರ್ತರಾದವರನ್ನು ಮರೆತಿಲ್ಲ. ಬಹಳಷ್ಟು ಮಂದಿ ತಾವು ಏರಿದ್ದ ಏಣಿಯನ್ನೇ ಒದೆಯುವ ಈ ಕಾಲಘಟ್ಟದಲ್ಲಿ ರಜನಿಕಾಂತ್ ಮಾತ್ರ ವಿಭಿನ್ನವಾಗಿ ನಿಲ್ಲುತ್ತಾರೆ. ಚಿತ್ರರಂಗಕ್ಕೆ ಬರಲು ನೆರವಾದವರನ್ನು ಈಗಲೂ ಸ್ಮರಿಸಿಕೊಳ್ಳುವ ರಜನಿಕಾಂತ್, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಮಾರಂಭದಲ್ಲೂ ಈ ಕಾರ್ಯ ಮಾಡಿದ್ದಾರೆ.

ಒಂದು ಕಾಲದಲ್ಲಿ’ ಶಿವಾಜಿ ರಾವ್ ಗಾಯಕ್ವಾಡ್ ‘ಎಂಬ ಯುವಕ ಬೆಂಗಳೂರಿನ ಬಿಟಿಎಸ್ ಬಸ್ ನಲ್ಲಿ ಕಂಡಕ್ಟರ್ ಆಗಿ ಚೀಟಿ ಹರಿಯುತ್ತಾ ಸೀಟಿ ಹೊಡೆಯುತ್ತಾ ಲವ-ಲವಿಕೆಯಿಂದ ತನ್ನದೇ ಸ್ಟೈಲ್ ನಲ್ಲಿ ಕಾರ್ಯ ನಿರ್ವಹಿಸಿದ್ದು, ಈಗ ರಜನಿಕಾಂತ್ ಎಂಬ ಹೆಸರಿನಲ್ಲಿ ಹಿಂದಿನ ತನ್ನ ಸ್ಟೈಲ್ ಅನ್ನೇ ಸಿನಿಮಾ ಕ್ಷೇತ್ರಕ್ಕೆ ತಂದು ಸೂಪರ್ ಸ್ಟಾರ್ ಆಗಿದ್ದಾರೆ. ರಜನಿಕಾಂತ್ ಬಿಟಿಎಸ್ ಕಂಡಕ್ಟರ್ ಆಗಿದ್ದಾಗ ಆ ಬಸ್ಸಿನ ಚಾಲಕರಾಗಿದ್ದವರು ರಾಜ್ ಬಹದೂರ್ ಎಂಬ ಗೆಳೆಯ.ಅವರೇ ‘ಶಿವಾಜಿ ರಾವ್ ‘ಎಂಬ ಈ ಯುವಕನಲ್ಲಿದ್ದ ಕಲೆಯನ್ನು ಗುರುತಿಸಿ ಚಿತ್ರರಂಗದಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಿದ್ದರು.

ಹೀಗಾಗಿ ಸೋಮವಾರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ರಜನಿ ಕಾಂತ್ ಈ ಪ್ರಶಸ್ತಿಯನ್ನು ಗೆಳೆಯ ರಾಜ್ ಬಹಾದೂರ್ ಅವರಿಗೆ ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಗೆಳೆಯನ ಸಹಕಾರವನ್ನು ಸ್ಮರಿಸಿರುವ ಅವರು, ಚಿತ್ರರಂಗ ಸೇರ್ಪಡೆಗೊಳ್ಳುವಂತೆ ಸಲಹೆ ನೀಡಿ ನನ್ನ ಬದುಕನ್ನೇ ಬದಲಿಸಿದ ಸ್ನೇಹಿತ ಎಂದು ಬಣ್ಣಿಸಿದ್ದಾರೆ. ಅಲ್ಲದೇ ತಮ್ಮ ಅಭಿನಯದ ಮೊದಲ ಚಿತ್ರ ನಿರ್ದೇಶಿಸಿದ ಕೆ. ಬಾಲಚಂದರ್ ಹಾಗೂ ಸಹೋದರ ಸತ್ಯನಾರಾಯಣ ರಾವ್ ಅವರಿಗೂ ರಜನಿಕಾಂತ್ ಗೌರವ ಸಮರ್ಪಿಸಿದ್ದಾರೆ.

Leave A Reply

Your email address will not be published.