ಸರಕಾರಿ ಉದ್ಯೋಗಗಳಲ್ಲಿ ಎಸ್.ಸಿ -ಎಸ್.ಟಿಗಳಿಗೆ ಭಡ್ತಿ ಮೀಸಲಾತಿ,ತೀರ್ಪು ಕಾದಿರಿಸಿದ ನ್ಯಾಯಾಲಯ

ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ)ಗಳಿಗೆ ಸರಕಾರಿ ಉದ್ಯೋಗಗಳಲ್ಲಿನ ಭಡ್ತಿಯಲ್ಲಿ ಮೀಸಲಾತಿ ನೀಡುವ ವಿಚಾರವಾಗಿ ತನ್ನ ತೀರ್ಪನ್ನು ಸುಪ್ರೀಂಕೋರ್ಟ್‌ ಕಾದಿರಿಸಿದೆ.

ಅಟಾರ್ನಿಜನರಲ್ ಕೆ.ಕೆ. ವೇಣುಗೋಪಾಲ್, ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಬಲಬೀರ್‌ಸಿಂಗ್ ಹಾಗೂ ವಿವಿಧ ರಾಜ್ಯಗಳ ಪರವಾಗಿ ಹಾಜರಾದ ಇತರ ಹಿರಿಯ ನ್ಯಾಯವಾದಿಗಳ ಅಹವಾಲುಗಳ ವಿಚಾರಣೆಯನ್ನು ನ್ಯಾಯಮೂರ್ತಿ ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿತು.

ಸ್ವಾತಂತ್ರ ದೊರೆತು 75 ವರ್ಷಗಳು ಕಳೆದ ಬಳಿಕವೂ ಎಸ್‌ಸಿಗಳು ಹಾಗೂ ಎಸ್ಟಿ ಸಮುದಾಯಗಳನ್ನು ಮುಂದುವರಿದ ವರ್ಗಗಳ ಮಟ್ಟಕ್ಕೆ ಮುಂದಕ್ಕೆ ತರಲು ಸಾಧ್ಯವಾಗಿಲ್ಲವೆಂಬುದು ವಾಸ್ತವವೆಂದು ಕೇಂದ್ರ ಸರಕಾರವು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಬಿ.ಆರ್.ಗವಾಯಿ ಅವರನ್ನು ಕೂಡಾ ಒಳಗೊಂಡಿರುವ ನ್ಯಾಯಪೀಠಕ್ಕೆ ತಿಳಿಸಿತು.

ಎಸ್‌ಸಿ ಹಾಗೂ ಎಸ್‌ಟಿ ಪಂಗಡಗಳಿಗೆ ಸೇರಿದವರಿಗೆ ಎ ಶ್ರೇಣಿ ಸರಕಾರಿ ಉದ್ಯೋಗಗಳಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಈಗಲೂ ಹೆಚ್ಚು ಕಷ್ಟಕರವಾಗುತ್ತಿದೆ ಹಾಗೂ ಖಾಲಿ ಬಿದ್ದಿರುವ ಹುದ್ದೆಗಳನ್ನು ತುಂಬಲು ಎಸ್ಸಿ, ಎಸ್‌ಟಿ ಹಾಗೂ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಕೆಲವು ದೃಢವಾದ ತಳಹದಿಯನ್ನು ರೂಪಿಸಬೇಕೆಂದು ಅಟಾರ್ನಿ ಜನರಲ್ ವೇಣುಗೋಪಾಲ್ ಮನವಿ ಮಾಡಿದರು.

Leave A Reply

Your email address will not be published.