1-5 ನೇ ತರಗತಿ ಶಾಲೆ ಪುನರಾರಂಭ : ದ.ಕ. ಶೇ70,ಉಡುಪಿ ಶೇ.85 ಹಾಜರಾತಿ

ಕೋವಿಡ್ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಬಂದ್ ಆಗಿದ್ದ ಶಾಲೆಗಳು ಸೋಮವಾರ ತೆರೆಯಲ್ಪಟ್ಟವು.1ನೇ ತರಗತಿಯಿಂದ 5ನೇ ತರಗತಿಯವರೆಗಿನ ಪುಟಾಣಿಗಳ ಕಲರವ ಶಾಲೆಯಲ್ಲಿ ಮತ್ತೊಮ್ಮೆ ಕಳೆಗಟ್ಟಿದ್ದವು.

ಜಿಲ್ಲೆಯಲ್ಲಿ ಬಾಗಿಲು ಮುಚ್ಚಿದ್ದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 5ರ ವರೆಗಿನ ಭೌತಿಕ ತರಗತಿಗಳು ಆರಂಭವಾಗಿದ್ದು, ಮೊದಲ ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ದಿನ ಶೇ. 70ರಷ್ಟು, ಉಡುಪಿ ಜಿಲ್ಲೆಯಲ್ಲಿ ಶೇ. 85 ಹಾಜರಾತಿ ದಾಖಲಾಗಿದೆ.

ಪುಟಾಣಿ ಮಕ್ಕಳನ್ನು ತಳಿರು ತೋರಣ, ಸ್ವಾಗತ ಕಮಾನುಗಳ ಮೂಲಕ ಸ್ವಾಗತಿಸಲಾಗಿತ್ತು. ಕೆಲವು ಶಾಲೆಗಳಲ್ಲಿ ಸಿಹಿತಿಂಡಿ, ನೀಡಿ ,ಆರತಿ ಎತ್ತಿ ಶಿಕ್ಷಕರು ಸ್ವಾಗತಿಸಿದರು. ಜತೆಗೆ ಕೆಲವು ಶಾಲೆಯಲ್ಲಿ ಹೂ ನೀಡಿ ಮಕ್ಕಳನ್ನು ಬರಮಾಡಿಕೊಂಡರು.

ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರ ವರೆಗೆ ಅರ್ಧ ದಿನ ಮಾತ್ರ ತರಗತಿ ನಿಗದಿಯಾಗಿದೆ. ನ. 2ರಿಂದ ಪೂರ್ಣಾವಧಿ (ಬೆಳಗ್ಗೆ 10ರಿಂದ ಸಂಜೆ 4.30) ತರಗತಿ ನಡೆಯಲಿದೆ.

ಉಡುಪಿ ಜಿಲ್ಲೆಯಲ್ಲಿ 1ನೇ ತರಗತಿಗೆ 14,623, ಎರಡನೇ ತರಗತಿಗೆ 14,431, ಮೂರನೇ ತರಗತಿಗೆ 14,766, ನಾಲ್ಕನೇ ತರಗತಿಗೆ 14,051, ಐದನೇ ತರಗತಿಗೆ 15,289 ಮಂದಿ ವಿದ್ಯಾರ್ಥಿಗಳು ಹಾಜರಾದರು.

Leave A Reply

Your email address will not be published.