ಪ್ರವಾಸಕ್ಕಾಗಿ ಕೊಡಗಿಗೆ ಬಂದಿದ್ದ ಯುವತಿ ಅನ್ಯಾಯವಾಗಿ ಹೆಣವಾದಳು!! ತನ್ನ ಗೆಳತಿಯರೊಂದಿಗೆ ಹೋಮ್ ಸ್ಟೇ ಯಲ್ಲಿ ತಂಗಿದ್ದಾಗ ನಡೆಯಿತು ದುರ್ಘಟನೆ

ಪ್ರವಾಸಕ್ಕಾಗಿ ಬಂದ ಯುವತಿಯರು ಹೋಂ ಸ್ಟೇ ಒಂದರಲ್ಲಿ ತಂಗಿದ್ದು, ಜೊತೆಗಿದ್ದ ಇನ್ನೊರ್ವ ಯುವತಿಯು ಗ್ಯಾಸ್ ಗೀಜರ್ ನಲ್ಲಿ ಆದ ಅನಿಲ ಸೋರಿಕೆಯಿಂದಾಗಿ ಮೃತಪಟ್ಟಿದ್ದು ಘಟನೆಯ ಬಳಿಕ ಅವರು ತಂಗಿದ್ದ ಹೋಂ ಸ್ಟೇ ಗೆ ನೋಂದಣಿಯಾಗಿರಲಿಲ್ಲ, ಅದೊಂದು ಅಕ್ರಮ ಹೋಮ್ ಸ್ಟೇ ಯಾಗಿದೆ ಎಂಬ ಮಾಹಿತಿಯು ಬಯಲಾಗಿದೆ.

ಘಟನೆ ವಿವರ: ಮುಂಬೈ ನಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಬಳ್ಳಾರಿ ಮೂಲದ ವಿಘ್ನೇಶ್ವರಿ ತನ್ನ ಐದು ಜನ ಗೆಳತಿಯರೊಂದಿಗೆ ಪ್ರವಾಸಕ್ಕೆ ಬಂದಿದ್ದು ಕೊಡಗಿನ ತಲಕಾವೇರಿಗೆ ಭೇಟಿ ನೀಡಿದ್ದರು. ಅಂದು ರಾತ್ರಿ ಕೂರ್ಗ್ ವ್ಯಾಲಿ ವ್ಯೂ ಹೋಂ ಸ್ಟೇ ಯಲ್ಲಿ ತಂಗಿದ್ದ ಅವರು ಸ್ನಾನಕ್ಕೆ ತೆರಳಿದ್ದು ಇನ್ನೂ ಬಾರದಿರುವುದರಿಂದ ಅನುಮಾನಗೊಂಡ ಇತರ ನಾಲ್ವರು ಸೇರಿ ಬೀಗ ಮುರಿದು ಒಳಪ್ರವೇಶಿಸಿದಾಗ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.

ಅವರು ತಂಗಿದ್ದ ಹೋಂ ಸ್ಟೇಯ ಮಾಲೀಕ ದುಬೈ ನಿವಾಸಿಯಾಗಿದ್ದು ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ನೋಂದಣಿ ಮಾಡಿಸಿಕೊಂಡಿರಲಿಲ್ಲ ಎಂಬ ಮಾಹಿತಿ ಬಯಲಾಗಿದೆ. ಸದ್ಯ ಜಿಲ್ಲೆಯಲ್ಲಿ ಇಂತಹ ಹಲವು ಅಕ್ರಮ ಹೋಮ್ ಸ್ಟೇ ಗಳಿದ್ದು ಕೂಡಲೇ ಅವುಗಳಿಗೆ ಕಡಿವಾಣ ಹಾಕದಿದ್ದಲ್ಲಿ ಇಂತಹ ಪ್ರಕರಣ ಹೆಚ್ಚಾಗುತ್ತದೆ ಎಂಬ ಆಕ್ರೋಶ ಕೇಳಿಬಂದಿದೆ.

Leave A Reply

Your email address will not be published.