ರಾಜ್ಯ ರಾಜಕಾರಣದಲ್ಲಿ ಕಂಡುಬರುತ್ತಿದೆ ದಿನಕ್ಕೊಂದು ಬೆಳವಣಿಗೆ!!ಪರಸ್ಪರ ಟೀಕೆಗಳಿಂದಾಗಿ ಬಿಜೆಪಿಗೆ ತೊಡೆ ತಟ್ಟಿ ಸವಾಲು ಮಾಡಿದ ಮಾಜಿ ಸಿಎಂ ಸಿದ್ದು

ಕೆಲ ಜಿಲ್ಲೆಗಳಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗಿದ್ದು ರಾಜಕೀಯ ನಾಯಕರು ತಮ್ಮ ಪಕ್ಷದ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ಭಾಷಣದಲ್ಲಿ ಒಬ್ಬರನೊಬ್ಬರು ಕಾಳೆಲೆದುಕೊಂಡು ಟೀಕಿಸುತ್ತ ಜನರ ಹಾದಿ ತಪ್ಪಿಸುತ್ತಾದ್ದರೋ? ಅಥವಾ ಪ್ರಚಾರಕ್ಕೆ ಇದೊಂದು ಟ್ರಿಕ್ಸ್ ಆಗಿರಬಹುದೇನೋ ಎಂಬುವುದನ್ನು ಕೂಲಂಕುಷವಾಗಿ ವಿಚಾರ ಮಾಡುವ ಪರಿಜ್ಞಾನ ಯಾವೊಬ್ಬ ಪ್ರಜೆಗೂ ಇಲ್ಲವಾಗಿದೆ.ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಬಿಜೆಪಿಗೆ ಬಹಿರಂಗವಾಗಿ ಸವಾಲು ಹಾಕಿದ್ದು ಸವಾಲಿನಲ್ಲಿ ಸೋತರೆ ತನ್ನ ರಾಜಕೀಯ ನಿವೃತ್ತಿ ಪಡೆಯಲು ಮುಂದಾಗಿದ್ದಾರೆ.

ಕೆಲ ದಿನಗಳ ಹಿಂದೆ ರಾಜ್ಯ ರಾಜಕೀಯದ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರನ್ನು ಬಿಜೆಪಿ ವಕ್ತಾರರು ಜಾತಿವಾದಿ ಎಂಬ ಪಟ್ಟಕೊಟ್ಟು ಕರೆದಿದ್ದು,ಇಲ್ಲಿಂದ ಶುರುವಾದ ಪ್ರಕರಣ ಹಲವು ರೀತಿಯಲ್ಲಿ ಟ್ವೀಟ್ ಗಳ ಮುಖಾಂತರ ಮುಂದುವರಿಯುತ್ತಿದೆ. ಸದ್ಯ
ಜಾತಿವಾದಿ ಎಂದು ಕರೆದ ಬಿಜೆಪಿಗೆ ಸಿದ್ದು ತಿರುಗೇಟು ನೀಡಿದ್ದು, ಶೋಷಿತ ಜಾತಿಗಳ ಸಮಾವೇಶದಲ್ಲಿ ನಾನು ಭಾಗವಹಿಸಿದರೆ ಜಾತಿವಾದಿ, ನೀವು ಭಾಗವಹಿಸಿದರೆ ಜಾತ್ಯತೀತರಾ? ಎಂದು ಪ್ರಶ್ನಿಸಿದ್ದಾರೆ. ಆತ್ಮವಂಚನೆ ಬಿಟ್ಟು ಪ್ರಾಮಾಣಿಕ ರಾಜಕೀಯ ಮಾಡಿ, ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಲಿಂಗಾಯತ ಸ್ವಾಮಿಗಳನ್ನು ಮನೆಗೆ ಕರೆಸಿ ದುಡ್ಡು ಹಂಚಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಾತಿವಾದಿಯೇ ? ಜಾತ್ಯತೀತವಾದಿಯೇ? ಅಂ, ಶೋಷಿತ ಜಾತಿಗಳ ಸಮಾವೇಶದಲ್ಲಿ ನಾನು ಭಾಗವಹಿಸಿದರೆ ಜಾತಿವಾದಿ, ನೀವು ಭಾಗವಹಿಸಿದರೆ ಜಾತ್ಯತೀತರಾ? ಎಂದು ಪ್ರಶ್ನಿಸಿದ್ದಾರೆ. ಆತ್ಮವಂಚನೆ ಬಿಟ್ಟು ಪ್ರಾಮಾಣಿಕ ರಾಜಕೀಯ ಮಾಡಿ, ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಲಿಂಗಾಯತ ಸ್ವಾಮಿಗಳನ್ನು ಮನೆಗೆ ಕರೆಸಿ ದುಡ್ಡು ಹಂಚಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಾತಿವಾದಿಯೇ ? ಜಾತ್ಯತೀತವಾದಿಯೇ? ಅಂತ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಒಟ್ಟಿನಲ್ಲಿ ಚುನಾವಣೆ ಹತ್ತಿರ ಆಗುತ್ತಿದ್ದಂತೆ ರಾಜಕೀಯ ನಾಟಕಗಳು ಸಾಮಾನ್ಯ. ಒಂದುವೇಳೆ ಬಿಜೆಪಿ ಜಾತ್ಯತೀತರು ಎಂದು ಸಾಬೀತುಪಡಿಸಿದಲ್ಲಿ ಸಿದ್ದು ರಾಜಕೀಯ ಪಯಣ ಅಂತ್ಯವಾಗುತ್ತದೆಯೇ ಎಂಬುವುದನ್ನು ಕಾದುನೋಡಬೇಕಾಗಿದೆ.

Leave A Reply

Your email address will not be published.