ಮತಾಂತರ ನಿಷೇಧ ಕಾಯ್ದೆ ಜಾರಿ ಹಿನ್ನೆಲೆ ಕರ್ನಾಟಕದ ಚರ್ಚ್‌ಗಳ ಮೇಲೆ ಸರಕಾರದ ಗೂಢಚಾರಿಕೆ-ಕ್ರೈಸ್ತ ಮಹಾಧರ್ಮಾಧ್ಯಕ್ಷ ಆರೋಪ

ಸರ್ಕಾರ ಮತಾಂತರ ತಡೆಗಟ್ಟಲು ಕರ್ನಾಟಕದ ಚರ್ಚ್‌‌ಗಕಲ ಮೇಲೆ ಗೂಢಚಾರಿಕೆ ನಡೆಸುತ್ತಿದೆ. ಹೀಗಾಗಿ ಪೊಲೀಸ್ ಇಲಾಖೆ ಭೇಟಿ ನೀಡಲಿದ್ದು, ಗಣತಿ, ಗೂಢಚಾರಿಕೆ ನಡೆಸುತ್ತಿದೆ ಎಂದು ಕ್ರೈಸ್ತ ಧರ್ಮದ ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ಆರೋಪ ಮಾಡಿದ್ದಾರೆ.

ಕ್ರೈಸ್ತ ಧರ್ಮದಿಂದ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದಡಿ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬಾರದು ಎಂದು ಮಾಧ್ಯಮಗಳಿಗೆ ಕ್ರೈಸ್ತ ಧರ್ಮದ ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ಹೇಳಿಕೆ ನೀಡಿದ್ದಾರೆ.

ಮತಾಂತರ ಮಾಡಲಾಗುತ್ತಿದೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ. ಯಾರೋ ಶಿಲುಬೆ ಹಾಕಿಕೊಂಡ ಮಾತ್ರಕ್ಕೆ, ಕ್ರೈಸ್ತ ದೇವಾಲಯಕ್ಕೆ ಬಂದ ಮಾತ್ರಕ್ಕೆ ಅದು ಮತಾಂತರ ಆಗದು. ಸರ್ಕಾರ ಚರ್ಚ್ ಗಳಿಗೆ ಪೊಲೀಸರನ್ನು ಕಳುಹಿಸಿ ಮಾಹಿತಿ ಪಡೆಯುತ್ತಿದೆ. ಕ್ರೈಸ್ತ ಸಮುದಾಯದ ಗಣತಿ ಮಾಡಲಾಗುತ್ತಿದೆ. ಕ್ರೈಸ್ತ ಧರ್ಮವನ್ನೇ ಟಾರ್ಗೆಟ್ ಮಾಡೋದು ತಪ್ಪು ಎಂದು ಕ್ರೈಸ್ತ ಧರ್ಮದ ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ವಿರೋಧ ವ್ಯಕ್ತಪಡಿಸಿದ್ದಾರೆ.

ಯಾವುದೇ ಲಿಖಿತ ಮಾಹಿತಿ ಇಲ್ಲದೆ ಪೊಲೀಸರಿಗೆ ಮಾಹಿತಿ ನೀಡದಂತೆ ರಾಜ್ಯದ ಚರ್ಚ್ ಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಸರ್ಕಾರ ಮತಾಂತರ ನಿಷೇಧ ಕಾಯ್ದೆ ಯಾಕೆ ತರಬೇಕು? ಈ ಬಗ್ಗೆ ವಿಶ್ವ ಕ್ರೈಸ್ತ ಧರ್ಮದ ಪೋಪ್ ಅವರಿಗೂ ಮಾಹಿತಿ ತಿಳಿಸಲಾಗಿದೆ. ನವೆಂಬರ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಗೆ ಭೇಟಿ ನೀಡಲಿದ್ದು,ಪೋಪ್ ಅವರನ್ನು ಭೇಟಿಯಾಗಲಿದ್ದಾರೆ. ಆಗ ಈ ವಿಚಾರ ವಿಸ್ತೃತ ಚರ್ಚೆಯಾಗಲಿದೆ ಹೊರ ಎಂದು ಕ್ರೈಸ್ತ ಧರ್ಮದ ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ತಿಳಿಸಿದ್ದಾರೆ.

Leave A Reply

Your email address will not be published.