ಮಂಗಳೂರಿನಲ್ಲಿ1500 ಕೆಜಿ ಭಾರೀ ಮೀನು ಸಿಕ್ಕ ಸಂಭ್ರಮ | ಆದರೆ ಮೀನುಗಾರರಿಗೆ ಆಗಿದೆ 1.5 ಲಕ್ಷ ಲಾಸ್ !!

ಅರಬ್ಬೀ ಸಮುದ್ರದಲ್ಲಿ ಬೃಹತ್ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದ್ದು, ದೈತ್ಯ ಮೀನು ಹಿಡಿದ ಮೀನುಗಾರರ ಮುಖದಲ್ಲಿ ವಿಶೇಷ ಸಂತಸ ಮನೆಮಾಡಿದೆ. ಅಷ್ಟು ದೊಡ್ಡ ಮೀನು ಹಿಡಿದರು ಮೀನುಗಾರರಿಗೆ ಬರೋಬ್ಬರಿ ಒಂದೂವರೆ ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಮೀನು ಸಿಕ್ಕರೂ ನಷ್ಟವೇ ?!.. ಹೌದು, ಬನ್ನಿ ಈ ಸುದ್ದಿ ಓದಿ.

ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಾಗರ್ ಹೆಸರಿನ ಬೋಟ್ ತೆರಳಿತ್ತು.
ಕಳೆದ 10 ದಿನಗಳ ಹಿಂದೆ ಈ ಬೋಟ್ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿತ್ತು. 3 ದಿನಗಳ ಹಿಂದೆ ದಡದಿಂದ 50 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಸಮಯದಲ್ಲಿ ಈ ಭಾರಿ ಮೀನು ಬಲೆಗೆ ಬಿದ್ದಿದೆ. ಹರವಿದ್ದ ಬಲೆ ಎಳೆಯಲಾಗದಷ್ಟು ಭಾರವಿದ್ದಿದ್ದರಿಂದ ಬಹಳಷ್ಟು ಮೀನುಗಳು ಬಲೆಗೆ ಬಿದ್ದಿವೆ ಎಂದು ಅರಿತ ಮೀನುಗಾರರು ಬಲೆಯನ್ನು ನಿಧಾನಕ್ಕೆ ಮೇಲೆತ್ತಿದಾಗ ಬೃಹತ್ ಗಾತ್ರದ ಈ ಮೀನು ಬಲೆಯೊಳಕ್ಕೆ ಸಿಲುಕಿಕೊಂಡು ಹೊರಬರಲು ತಡಕಾಗುತ್ತಿತ್ತು.

ಶಾರ್ಕ್ ಜಾತಿಗೆ ಸೇರಿದ ಮೀನು ಇದಾಗಿದ್ದು ಈ ಮೀನು ಹಿಡಿಯುವುದು ನಿಷೇಧವಿದೆ. ಹೀಗಾಗಿ ಬಲೆಗೆ ಸಿಕ್ಕ‌ ಮೀನನ್ನು ಮೀನುಗಾರರು ಬಲೆಯಿಂದ ಬಿಡಿಸಿ ವಾಪಾಸು ಸಮುದ್ರಕ್ಕೆ ಬಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಯ್ತು. ಸುಮಾರು 1,500 ಕ್ಕೂ ಹೆಚ್ಚು ತೂಕ ಈ ಮೀನು ಹೊಂದಿದ್ದು ಮೀನು ಸೆರೆ ಸಿಕ್ಕ ದೃಶ್ಯವನ್ನು ಬೋಟ್ ನಲ್ಲಿದ್ದ ಮೀನುಗಾರರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಸುಮಾರು 1,500 ಕೆಜಿ ಗೂ ಹೆಚ್ಚು ತೂಕವುಳ್ಳ ಈ ಬೃಹತ್ ಮೀನನ್ನು ಸಮುದ್ರದಿಂದ ಮೇಲೆತ್ತುವಾಗ ಮೀನುಗಾರರ ಏರಿಕಂಬವೇ ತುಂಡಾಗಿದೆ. ಅಲ್ಲದೇ ಬಲೆಸಹಿತ ಬಿಟ್ಟರೂ ಮೀನು ಉಳಿಯುವುದಿಲ್ಲ. ಹಾಗಾಗಿ ಬಲೆಯನ್ನು ತುಂಡರಿಸಿ ಬಿಡಲಾಗಿದೆ. ಇದರಿಂದ ಮೀನುಗಾರರಿಗೆ ಸುಮಾರು 1.50 ಲಕ್ಷ ರೂ. ನಷ್ಟವಾಗಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದರೂ, ಮೀನುಗಾರರು ಮೀನುಗಾರಿಕೆ ನಡೆಸಿ ದಡಕ್ಕೆ ಬಂದ ಬಳಿಕ ಹೊರಪ್ರಪಂಚಕ್ಕೆ ಈ ಸುದ್ದಿ ಮುಟ್ಟಿದೆ. ಬಲೆ ತುಂಡು ಮಾಡಬೇಕಾದ ಅನಿವಾರ್ಯತೆ ಉಂಟಾಗಿ 1.50 ಲಕ್ಷ ದುಡ್ಡು ಖರ್ಚಾದರೂ, ಬಿಗ್ ಕ್ಯಾಚ್ ಫಿಶ್ ಒಂದನ್ನು ಹಿಡಿದ ತೃಪ್ತಿ ಮೀನುಗಾರರಲ್ಲಿ ಇದೆ.

Leave A Reply

Your email address will not be published.