ಪಾರ್ಕಿನಲ್ಲಿ ವಿಶ್ರಾಂತಿಗಾಗಿ ಕೂತಿದ್ದಾಗ ವಿಮಾನದಿಂದ ತಲೆಯ ಮೇಲೆ ಬಿದ್ದ ಮಲ | ಅಷ್ಟಕ್ಕೂ ವಿಮಾನದಿಂದ ಹೇತು ಹಾಕಿದ್ದಾದರೂ ಯಾರು ??

ಸಾಮಾನ್ಯವಾಗಿ ವಿಮಾನಗಳಲ್ಲಿನ ಕೊಳಚೆ ಮತ್ತು ಶೌಚಾಲಯದ ತ್ಯಾಜ್ಯವನ್ನು ವಿಶೇಷ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ವಿಮಾನ ಇಳಿದ ನಂತರ ವಿಲೇವಾರಿ ಮಾಡಲಾಗುತ್ತದೆ.ಆದರೆ ಇಲ್ಲೊಂದು ಕಡೆ ಚಲಿಸುತಿದ್ದ ವಿಮಾನದಿಂದ ಪಾರ್ಕ್ ನಲ್ಲಿ ಕೂತ ವ್ಯಕ್ತಿಯ ಮೇಲೆ ಮಲ ಮೂತ್ರ ವಿಸರ್ಜನೆ ಬಿದ್ದು ದಂಗು ಪಡಿಸಿದೆ.

ಉದ್ಯಾನದಲ್ಲಿ ಬಿಡುವಿನ ಸಮಯದಲ್ಲಿ ತಂಪಾದ ಗಾಳಿ ಪಡೆಯುತ್ತಾ ಸಮಯ ಕಳೆಯುವುದು ಕೆಲವರಿಗೆ ರೂಢಿ. ಆದರೆ ಇದೇ ಅಭ್ಯಾಸ ಒಬ್ಬ ಬ್ರಿಟಿಷ್ ನಿವಾಸಿಗೆ ಭಯಾನಕ ಅನುಭವ ನೀಡಿದೆ.ಅದೇನೆಂದು ನೀವೇ ನೋಡಿ. ವಿಂಡ್ಸರ್ ಕ್ಯಾಸಲ್ ಬಳಿ ವಾಸಿಸುತ್ತಿದ್ದ ವ್ಯಕ್ತಿಯ ಹಾಗೂ ಆತನ ಉದ್ಯಾನವನದ ಮೇಲೆ ವಿಮಾನ ಆಕಾಶದಲ್ಲಿ ಹಾರಿ ಹೋಗುತ್ತಿದ್ದ ಸಮಯದಲ್ಲಿ ವಿಮಾನದಿಂದ, ದಬಕ್ಕನೆ ಮೇಲಿನಿಂದ ಮಾನವನ ಮಲ ಬಿದ್ದಿರುವ ಘಟನೆ ನಡೆದಿದೆ.

ಈ ಹಿಂದೆ ರೈಲಿನ ಕೊನೆಯಲ್ಲಿ ಓಪನ್ ಆಗಿ ತೆರೆದಿದ್ದು, ಇದು ಹಳಿಯ ಮೇಲೆ ಎಲ್ಲಾ ಮಲ ತ್ಯಾಜ್ಯಗಳನ್ನು ಹಾಕುತಿದ್ದವು. ಆದ್ರೆ ಇದೀಗ ಬ್ಯಾನ್ ಆಗಿ ಹೊಸ ನಿಯಮಾವಳಿಗಳು ಬಂದಿದೆ.ವಿಮಾನವು ಸಂಪೂರ್ಣವಾಗಿ ಮುಚ್ಚಿ ಇರುವುದರಿಂದ ಇಂತಹ ಘಟನೆಗಳು ಸಂಭವಿಸುವುದು ಆಶ್ಚರ್ಯವೇ ಸರಿ.ಈ ಅನುಭವ ಪಡೆದ ವ್ಯಕ್ತಿಯು ‘ವಿಮಾನದಿಂದ ಮಾನವನ ಮಲ ಮೂತ್ರ ವಿಸರ್ಜನೆಯು ಮೇಲಿನಿಂದ ಬೀಳುವ ವೇಳೆ ನಾನು ತೋಟದಲ್ಲಿದ್ದು,ಇದು ನಿಜವಾಗಿಯೂ ಭಯಾನಕ ಅನುಭವ ‘ಎಂದು ವಿವರಿಸಿದರು.

ಬಿಬಿಸಿ ವರದಿಯ ಪ್ರಕಾರ ಆ ವ್ಯಕ್ತಿಯ ತೋಟ, ಹಾಗೂ ಆ ವ್ಯಕ್ತಿಯು ಮೇಲಿಂದ ಬಿದ್ದ ಮಲದಿಂದ ತೊಯ್ದುಹೋಗಿದ್ದವು. ವಿಮಾನಗಳಿಂದ ಹೆಪ್ಪುಗಟ್ಟಿದ ಕೊಳಚೆ ನೀರು, ಮಲ ಬೀಳುವುದು ಪ್ರತಿವರ್ಷ ಒಂದಲ್ಲಾ ಒಂದು ಕಡೆ ನಡೆಯುತ್ತಿರುವುದ ಬಗ್ಗೆ ನನಗೆ ತಿಳಿದಿದೆ. ಆದರೆ ಇದು ಫ್ರೀಜ್ ಆಗಿಲ್ಲ ಮತ್ತು ಅವರ ಇಡೀ ತೋಟವು ತುಂಬಾ ಅಹಿತಕರ ರೀತಿಯಲ್ಲಿ ಕಾಣಿಸುತ್ತಿದೆ” ಎಂದು ಹೇಳಿದರು.

ಇಟಾನ್ ಮತ್ತು ಕ್ಯಾಸಲ್‌ನ ಕೌನ್ಸಿಲರ್ ಜಾನ್ ಬೌಡೆನ್, ಈ ಘಟನೆಗೆ ಬೆಚ್ಚಗಿನ ವಾತಾವರಣವು ಕಾರಣ ಎಂದೆನಿಸುತ್ತದೆ ಎಂದು ಸೂಚಿಸಿದರು. ಇಂತಹ ವಾತಾವರಣದಲ್ಲಿ ಮಲವು ಹೆಪ್ಪುಗಟ್ಟಿದ ಬ್ಲಾಕ್‌ಗಿಂತ ಹೆಚ್ಚಾಗಿ “ದ್ರವರೂಪದ” ವಸ್ತುವಾಗಿ ಹೊರಬರುತ್ತದೆ ಎಂದು ಹೇಳಿದರು. ಇನ್ನು ವಿಮಾನ ಸಂಸ್ಥೆ ಹಾಗೂ ವಿಮಾನ ನಿಲ್ದಾಣಗಳಲ್ಲಿ 40 ವರ್ಷ ಅನುಭವ ಹೊಂದಿರುವ ವಿಟ್‌ಫೀಲ್ಡ್‌ ಪ್ಯಾರಿಷ್ ಕೌನ್ಸಿಲರ್ ಜೆಫ್ ಪ್ಯಾಕ್ಸ್ಟನ್, ಈ ಘಟನೆಯನ್ನು “ಬಹಳ ಅಪರೂಪ” ಎಂದು ಕರೆದರು.

‘ಆಗಮನದ ಸಮಯದಲ್ಲಿ ಆಕಾಶದಲ್ಲಿ ಹೆಪ್ಪುಗಟ್ಟಿದ ಮಾನವ ತ್ಯಾಜ್ಯ ಮತ್ತು ಸೋಂಕುನಿವಾರಕ ಸಮಸ್ಯೆಗಳನ್ನು ಎದುರಿಸುತ್ತಿದ್ದೆವು. ಆದರೆ ಆ ಶೌಚಾಲಯಗಳು ಸೋರಿಕೆಯಾಗುತ್ತಿದ್ದವು. ಆಧುನಿಕ ವಿಮಾನಗಳಲ್ಲಿನ ಶೌಚಾಲಯಗಳು ಹೆಚ್ಚು ಸುರಕ್ಷಿತವಾಗಿವೆ ಎಂದು ಅವರು ಹೇಳಿದರು. ಕಡಿಮೆ ಎತ್ತರದಲ್ಲಿ ರಂಧ್ರದಿಂದ ಏನಾದರೂ ಹೊರಬಂದಿದೆಯೇ ಎಂದು ನೋಡಬಹುದು” ಎಂದು ಅವರು ಹೇಳಿದರು.

ನ್ಯೂಸ್ ವೀಕ್ ಪ್ರಕಾರ, ಘಟನೆಗೆ ಕಾರಣವಾಗಿರುವ ವಿಮಾನಯಾನ ಸಂಸ್ಥೆಯ ಹೆಸರನ್ನು ಬಹಿರಂಗ ಮಾಡಿಲ್ಲ. ಈ ಮಧ್ಯೆ, ಆಕಸ್ಮಿಕವಾಗಿ ಘಟನೆಗೆ ಒಳಗಾದ ವ್ಯಕ್ತಿಯು ವಿಮಾನಯಾನ ಸಂಸ್ಥೆಯ ವಿರುದ್ಧ ವಿಮಾ ಹಕ್ಕನ್ನು ಮುಂದುವರಿಸದಿರಲು ನಿರ್ಧರಿಸಿದ್ದಾರೆ.ವ್ಯಕ್ತಿ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿದರು ಎಂದು ಎಂ.ಎಸ್ ಡೇವಿಸ್ ಹೇಳಿದರು. ಆರಂಭದಲ್ಲಿ ವಿಮಾನವು ಈ ಪ್ರದೇಶದಲ್ಲಿನ ಹಾರಾಟ ನಿರಾಕರಿಸಿತು. ರೂಟ್ ಟ್ರ‍್ಯಾಕಿಂಗ್ ಆ್ಯಪ್‌ ಮೂಲಕ ವ್ಯಕ್ತಿ ವಿಮಾನವನ್ನು ಗುರುತಿಸಿದ ನಂತರ ಏರ್‌ಲೈನ್ ಅಂತಿಮವಾಗಿ ಘಟನೆಯನ್ನು ಒಪ್ಪಿಕೊಂಡಿತು.

ಈ ಘಟನೆ ಜುಲೈ ತಿಂಗಳಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆದರೆ ಸ್ಥಳೀಯ ಕೌನ್ಸಿಲರ್ ಕರೆನ್ ಡೇವಿಸ್ ಅವರು ರಾಯಲ್ ಬರೋ ಆಫ್ ವಿಂಡ್ಸರ್ ಮತ್ತು ಮೇಡನ್ ಹೆಡ್‌ನ ವಾಯುಯಾನ ವೇದಿಕೆಯ ಗಮನಕ್ಕೆ ತಂದ ನಂತರ ಇತ್ತೀಚೆಗೆ ಸುದ್ದಿಯಾಗಿದೆ.

Leave A Reply

Your email address will not be published.