ತನಗೆ ಒಪ್ಪುವ ಪರ್ಫೆಕ್ಟ್ ಜೊತೆಗಾರ ಸಿಕ್ಕಿಲ್ಲ ಎಂದು ಗಂಡಸಿಲ್ಲದೆ ‘ ಲಿಟ್ಲ್ ‘ ಹೊಂದಲು ನಿರ್ಧರಿಸಿದ ಬಟಲ್ !

ಲಂಡನ್ :  ತಾಯ್ತನ ಪ್ರತಿಯೊಬ್ಬ ಮಹಿಳೆಯ ಬಯಕೆ. ಸಹಜವಾಗಿ ಮದುವೆ ಆಗಿ ಮಾಡಿ, ಸಂಸಾರ ಹೂಡಿ ಮಕ್ಕಳು ಮಾಡೋದು ಸಹಜ.ತಾಯ್ತನ ಅನುಭವಿಸಲು ನೈಸರ್ಗಿಕವಾಗಿ ಮಗುವನ್ನು ಪಡೆಯೋಕೆ ಹಿಂದಿನ ಕಾಲದಲ್ಲಿ ಗಂಡ ಬೇಕಿತ್ತು. ನಂತರ ಒಂದು ಕಾಲ ಬಂತು. ಅಲ್ಲಿ ಗಂಡ ಇಲ್ಲದೆ ಹೋದರೂ ಓಕೆ, ಜೊತೆಗಾರ ಸಾಕಿತ್ತು. ಈಗ ಈ ಇಬ್ಬರೂ ಬೇಡ. ಗಂಡಸರ ಸಹವಾಸವೇ ( ಮಕ್ಕಳನ್ನು ಹುಟ್ಟಿಸಲು) ಬೇಡ. ಯಾರೋ ಒಬ್ಬನ ಒಂದಷ್ಟು ವೀರ್ಯ ಸಾಕು !!

ಹಾಗೆ ಇಲ್ಲೊಬ್ಬ ಮಹಿಳೆ ಇದೆಲ್ಲಕ್ಕಿಂತ ಭಿನ್ನವಾಗಿ ಮಗುವನ್ನು ಹೆತ್ತಿದ್ದಾಳೆ. ಮಾಡಲು ಯಾವುದೇ ಜೊತೆಯಿಲ್ಲದೆಯೇ ಇದ್ದ ಈ ಅನುಕೂಲಸ್ಥ ಹುಡುಗಿಗೆ ಪರ್ಫೆಕ್ಟ್ ಜೊತೆಗಾರ ಬೇಕಿತ್ತು. ಆದ್ರೆ ಆಕೆಯ ದುರಾದೃಷ್ಟಕ್ಕೆ ಪ್ರಪಂಚದಲ್ಲಿ ಪರ್ಫೆಕ್ಟ್ ಅನ್ನುವಂತಹ ಗಂಡಸು ಸಿಗಲಿಲ್ಲ. ಹಾಗೆ ಹುಡುಕಾಟ ನಡೆಸಿದ ಇಂಗ್ಲೆಂಡ್ ನ ಡೆನಿಯಲ್ ಬಟಲ್ ಅನ್ನೋ 30 ವರ್ಷದ ಮಹಿಳೆ ಪರ್ಫೆಕ್ಟ್ ಜೊತೆಗಾರ ಸಿಗದೇ ಇದ್ದಿದ್ದಕ್ಕೆ ಕೊನೆಗೂ ಒಂಟಿಯಾಗಿಯೇ ಮಗುವನ್ನು ಹಡೆದಿದ್ದಾಳೆ.

ಮಿರರ್ ವರದಿ ಪ್ರಕಾರ ಡೆನಿಯಲ್ ಬಟಲ್ ಗೆ ಮಗುವನ್ನು ಹೆರಬೇಕು, ಅದರ ಪಾಲನೆ ಮಾಡಬೇಕು ಅನ್ನೋ ಆಸೆಯಿತ್ತಾದರೂ ಅವಳು ಒಳ್ಳೆ ಜೊತೆಗಾರ ಸಿಗದ ಕಾರಣ ನೈಸರ್ಗಿಕವಾಗಿ ಮಗುವನ್ನ ಪಡೆಯೋಕೆ ಸಫಲಳಾಗಲಿಲ್ಲ. ಇದರಿಂದ ಬೇಸತ್ತ ಆಕೆ ಒಂದು ನಿರ್ಧಾರಕ್ಕೆ ಬರ್ತಾಳೆ. ಬಟಲ್ ಐವಿಎಫ್ ಸಹಾಯದಿಂದ ಸಿಂಗಲ್ ಮದರ್ ಆಗೋಕೆ ನಿರ್ಧರಿಸ್ತಾಳೆ. ಅದಕ್ಕಾಗಿ ಬಟಲ್ ವೀರ್ಯಾಣು ದಾನಿಯನ್ನು (ಸ್ಪರ್ಮ್ ಡೋನರ್) ಹುಡುಕೋಕೆ ಆರಂಭಿಸುತ್ತಾಳೆ.

ಸ್ಪರ್ಮ್ ಬ್ಯಾಂಕ್ ನಲ್ಲಿ ತನಗೆ ಬೇಕಾದ, ತನ್ನ ಪರ್ಫೆಕ್ಟ್ ಜೊತೆಗಾರನಿಗೆ ಇರಬೇಕಾದ ಅರ್ಹತೆ ಇರೋ ಅರ್ಜೆಂಟೇನಾ ಮೂಲದ ಸ್ಪರ್ಮ್ ಆಯ್ಕೆ ಮಾಡಿ ಆತನಿಗೆ ಒಂದು ಲಕ್ಷ ರೂ. ನೀಡಿ ಸ್ಪರ್ಮ್ ಪಡೆದು ತಾಯಿಯಾಗಿದ್ದಾಳೆ. ಇದೀಗ ಡೆನಿಯಲ್ ಬಟಲ್ ಮಡಿಲಲ್ಲಿ ಒಬ್ಬ ಲಿಟ್ಲ್ ಲೇಳೆ ಹಾಕುತ್ತಿದೆ.

Leave A Reply