ಒಂದೂವರೆ ವರ್ಷಗಳ ಬಳಿಕ ಶಾಲೆಯತ್ತ ಪುಟಾಣಿಗಳ ಹೆಜ್ಜೆ | ಇಂದಿನಿಂದ ಶಾಲೆಯಲ್ಲಿ ಚಿಣ್ಣರ ಚಿಲಿಪಿಲಿ

ಕೋವಿಡ್ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಶಾಲೆಗೆ ತೆರಳದ ಪುಟಾಣಿ ಮಕ್ಕಳು ಇಂದಿನಿಂದ ಶಾಲೆಗೆ ಹೆಜ್ಜೆ ಹಾಕಲಿದ್ದಾರೆ.ಕಳೆದೊಂದು ವರ್ಷದಿಂದ ಕೇವಲ ಆನ್‌ಲೈನ್‌ ತರಗತಿಗೆ ಒಗ್ಗಿಕೊಂಡಿದ್ದ ಪುಟಾಣಿಗಳು ಅ. 25ರಿಂದ ಶಾಲೆಯತ್ತ ಹೆಜ್ಜೆ ಇಡಲಿದ್ದಾರೆ.ಶಾಲೆಯಲ್ಲಿ ಇಂದಿನಿಂದ ಮತ್ತೆ ಚಿಣ್ಣರ ಚಿಲಿಪಿಲಿ ಕೇಳಲಿದೆ. ಪುಟಾಣಿಗಳನ್ನು ಸ್ವಾಗತಿಸಲು ಶಾಲೆಯ ಶಿಕ್ಷಕರು ಕಾತರದಲ್ಲಿದ್ದಾರೆ.

ಕೊರೊನಾ ಪ್ರಕರಣ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ತರಗತಿ ಮರು ಆರಂಭಗೊಳ್ಳುತ್ತಿದ್ದು ನಗರ ಪ್ರದೇಶದ ಪ್ರಾಥಮಿಕ ತರಗತಿಗಳು ಮಕ್ಕಳ ಸ್ವಾಗತಕ್ಕೆ ಶಾಲೆಗಳು ಸಜ್ಜಾಗಿವೆ. ಒಂದೂವರೆ ವರ್ಷದಿಂದ ಶಾಲಾ ವಾತಾವರಣದಿಂದ ದೂರವಾಗಿದ್ದ ಪುಟಾಣಿಗಳನ್ನು ಮರಳಿ ಶಾಲಾ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲಿದೆ. ಮಕ್ಕಳಿಗೆ ಮೊಬೈಲ್ ನೀಡುವುದು ಬೇಡ ಎಂದಿದ್ದ ಪೋಷಕರು ಅನಿವಾರ್ಯವಾಗಿ ಮೊಬೈಲ್ ನೀಡುವಂತೆ ಕೊರೊನಾ ಮಾಡಿತ್ತು.ಆನ್‌ಲೈನ್‌ ತರಗತಿಗಾಗಿ ಮೊಬೈಲ್ ಹಿಡಿದುಕೊಂಡು ತಲ್ಲೀನರಾಗಿದ್ದ ಪುಟಾಣಿಗಳು ಮುಂದೆ ಶಾಲೆಯ ಕರಿಹಲಗೆಯತ್ತ ದೃಷ್ಟಿ ಇಡಲಿದ್ದಾರೆ.

ತರಗತಿಗೆ ಆಗಮಿಸುವ ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ಯಾನಿಂಗ್‌ ಮಾಡುವುದು, ಅವರನ್ನು ಒಂದು ಮೀಟರ್‌ ಅಂತರದಲ್ಲಿ ಕುಳಿತುಕೊಳ್ಳುವಂತೆ ಮಾಡುವುದು, ಪ್ರತಿ ದಿನ ಶಾಲಾ ಕೊಠಡಿಗಳನ್ನು ಸೋಡಿಯಂ ಹೈಪೊಕ್ಲೋರೈಟ್‌ ಸಿಂಪಡಿಸಿ ಸೋಂಕು ರಹಿತಗೊಳಿಸುವುದು ಸಹಿತ ಹೆಚ್ಚು ವರಿ ಕೆಲಸಗಳನ್ನು ಶಾಲಾ ಸಿಬಂದಿ ಕೈಗೊಳ್ಳ ಲಿದ್ದಾರೆ. ಶನಿವಾರ ಹಾಗೂ ರವಿವಾರ ಬಹುತೇಕ ಶಾಲೆಯಲ್ಲಿ ಈ ನಿಟ್ಟಿನಲ್ಲಿ ತಯಾರಿ ಪ್ರಕ್ರಿಯೆ ನಡೆಯಿತು.

ಸಿಬಿಎಸ್‌ಇ ಸಹಿತ ಕೆಲವು 1ರಿಂದ 5ನೇ ತರಗತಿ ಶಾಲಾ ತರಗತಿಗಳು ನ. 2ರಿಂದ ಆರಂಭಗೊಳ್ಳಲಿವೆ.

Leave A Reply

Your email address will not be published.