ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 54ನೇ ವರ್ಧಂತಿ ಉತ್ಸವ | ನಾಡಿನ ಗಣ್ಯರಿಂದ ಶುಭಾಶಯ,ಗೌರವಾರ್ಪಣೆ

ಚತುರ್ದಾನ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳದ 21ನೇ ಧರ್ಮಾ ಧಿಕಾರಿಯಾದ 54ನೇ ವರ್ಷದ ಪಟ್ಟಾ ಭಿಷೇಕ ವರ್ಧಂತಿ ಉತ್ಸವದ ಪ್ರಯುಕ್ತ ಹೆಗ್ಗಡೆ ಅವರ ಬೀಡಿಗೆ ನಾಡಿ ನಾದ್ಯಂತ ದಿಂದ ಜನಪ್ರತಿನಿಧಿಗಳು, ಗಣ್ಯರು ಭೇಟಿ ನೀಡಿ ಗೌರವಾರ್ಪಣೆ ಸಲ್ಲಿಸಿದರು.

ಮುಂಜಾನೆ ಡಾ| ಹೆಗ್ಗಡೆ ಅವರು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಹಾಗೂ ಭಗವಾನ್‌ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ, ಹೃದ್ರೋಗ ತಜ್ಞ ಡಾ| ಬಿ.ಎಂ.ಹೆಗ್ಡೆ ದೂರವಾಣಿ ಮೂಲಕ ಹೆಗ್ಗಡೆಯವರಿಗೆ ಶುಭಾಶಂಸನೆ ಮಾಡಿದರು.

ಒಡಿಯೂರು ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ, ಶಾಸಕ ಸಂಜೀವ ಮಠಂದೂರು, ಶಾಸಕ ಹರೀಶ್‌ ಪೂಂಜ ಮತ್ತು ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ್‌, ಮಾಜಿ ಶಾಸಕ ರಾದ ಶಕುಂತಳಾ ಶೆಟ್ಟಿ ಮತ್ತು ಕೆ.ಪ್ರಭಾಕರ ಬಂಗೇರ, ಕೆನರಾ ಬ್ಯಾಂಕ್‌ ಜನರಲ್‌ ಮ್ಯಾನೇಜರ್‌ ಯೋಗೀಶ್‌ ಆಚಾರ್ಯ, ಶ್ರೀ. ಕ್ಷೇ. ಧ.ಜನಜಾಗೃತಿ ವೇದಿಕೆ, ಪ್ರಗತಿಬಂಧು ಒಕ್ಕೂಟದ ವತಿಯಿಂದ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸರ್ವ ಸದಸ್ಯರು, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಟuಲ ಶೆಟ್ಟಿ ಮತ್ತು ಸದಸ್ಯರು, ಬೆಳ್ತಂಗಡಿ ತಹಶೀಲ್ದಾರ್‌ ಮಹೇಶ್‌ ಜೆ., ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ವಲಯ ಅರಣ್ಯಾಧಿಕಾರಿ ತ್ಯಾಗರಾಜ್‌, ಮಂಗಳೂರಿನ ಕೆ. ರಾಜ ವರ್ಮ ಬಲ್ಲಾಳ್‌, ಬ್ಯಾಂಕ್‌ಆಫ್‌ ಬರೋಡಾದ ನಿವೃತ್ತ ಮ್ಯಾನೇಜರ್‌ ಎಂ.ಜಿನರಾಜ ಶೆಟ್ಟಿ ಹೆಗ್ಗಡೆಯವರನ್ನು ಭೇಟಿಯಾಗಿ ಗೌರವಾರ್ಪಣೆ ಮಾಡಿದರು.

ಡಾ| ಹೆಗ್ಗಡೆಯವರು ಪ್ರತಿಯೊಬ್ಬರ ಯೋಗ-ಕ್ಷೇಮ ವಿಚಾರಿಸಿ ಆಶೀರ್ವದಿಸಿ ಸಂತಸ ವ್ಯಕ್ತಪಡಿಸಿದರು. ಪಟ್ಟಾಭಿಷೇಕ ವರ್ಧಂತಿ ಆಚರಣೆ ಪ್ರಯುಕ್ತ ದೇಗುಲದ ನೌಕರರಿಗೆ ವಿವಿಧ ಸ್ಪರ್ಧೆಗಳು, ಹಿರಿಯ ನೌಕರರ ಸಮ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ಹೆಗ್ಗಡೆಯವರಿಂದ ಹೊಸ ಯೋಜನೆಗಳ ಪ್ರಕಟ ಮೊದಲಾದ ಕಾರ್ಯಕ್ರಮ ಆಯೋಜಿಸಲಾಗಿದೆ

Leave A Reply

Your email address will not be published.