ಗ್ರಾಹಕರಿಗೆ ಶಾಕ್ ನೀಡಿದ ಫೋನ್‌ಪೇ | ಇನ್ನು ಮುಂದೆ 50ರೂ. ಗಿಂತ ಹೆಚ್ಚಿನ ಪಾವತಿಗೆ ಬೀಳಲಿದೆ ಶುಲ್ಕ!!

ಭಾರತದ ಜನಪ್ರಿಯ ಡಿಜಿಟಲ್ ನಗದು ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದಾದ ಫೋನ್‌ಪೇ ಇದೀಗ ತನ್ನ ಬಳಕೆದಾರರಿಗೆ ಬಿಗ್ ಶಾಕ್‌ ಒಂದನ್ನು ನೀಡಿದೆ. ಡಿಜಿಟಲ್ ಪಾವತಿಗಳ ನಾಯಕನಾಗಿ ಬೆಳೆದುನಿಂತ ನಂತರ, ತನ್ನ ಫೋನ್ ಪೇ ಅಪ್ಲಿಕೇಷನ್‌ನಲ್ಲಿ 50 ರೂ.ಗಿಂತ ಹೆಚ್ಚಿನ ಫೋನ್ ರೀಚಾರ್ಜ್‌ಗಳ ಮೇಲೆ 1 ರಿಂದ 2 ರೂಗಳ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸಲು ಆರಂಭಿಸಿದೆ.

ಹೌದು, ಕಡಿಮೆ ಸಂಖ್ಯೆಯ ಬಳಕೆದಾರರೊಂದಿಗೆ ಇದನ್ನು ಪ್ರಾಯೋಗಿಕ ಆಧಾರದ ಮೇಲೆ ಮಾಡಲಾಗುತ್ತಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದು, 51 ರಿಂದ 100 ರೂ.ವರೆಗಿನ ರೀಚಾರ್ಜ್‌ಗಳಿಗೆ 1 ರೂ. ಶುಲ್ಕ ಮತ್ತು 100 ರೂ.ಗಿಂತ ಹೆಚ್ಚಿನದಕ್ಕೆ 2 ರೂ.ಶುಲ್ಕವನ್ನು ವಿಧಿಸುವುದಾಗಿ ತಿಳಿಸಿದೆ.

ಹೌದು, ನೀವು ಇನ್ಮುಂದೆ ಫೋನ್‌ಪೇ ಪ್ಲಾಟ್‌ಫಾರ್ಮ್‌ನಲ್ಲಿ ಮೊಬೈಲ್‌ ರೀಚಾರ್ಜ್ ಮಾಡಿಸಿದರೆ ಶುಲ್ಕ ವಿಧಿಸಲಾಗುತ್ತದೆ. ಇಷ್ಟು ದಿನ ಮೊಬೈಲ್‌ ರೀಚಾರ್ಜ್‌ ಮೊತ್ತ ಮಾತ್ರ ಭರಿಸುತ್ತಿದ್ದ ಮಂದಿ ಇನ್ಮುಂದೆ ರೀಚಾರ್ಜ್‌ ಗೆ ಶುಲ್ಕವನ್ನು ಕೂಡ ಭರಿಸಬೇಕಾಗುತ್ತದೆ. ಮೊಬೈಲ್‌ ರೀಚಾರ್ಜ್‌ ಮಾಡುವವರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದ್ದು, ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿರುವುದರಿಂದ ಸದ್ಯ ಎಲ್ಲಾ ಫೋನ್‌ಪೇ ಬಳಕೆದಾರರಿಗೆ ಅನ್ವಯಿಸುವುದಿಲ್ಲ. ಆದರೆ ಸಂಸ್ಕರಣಾ ಶುಲ್ಕವು ಸದ್ಯಕ್ಕೆ ಮೊಬೈಲ್ ರೀಚಾರ್ಜ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಇನ್ನು ಈ ಶುಲ್ಕ 50ರೂ. ಗಿಂತ ಹೆಚ್ಚಿನ ರೀಚಾರ್ಜ್‌ಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಕಂಪೆನಿ ತಿಳಿಸಿದೆ

ನಾವು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಒಂದು ಪ್ರಯೋಗವನ್ನು ನಡೆಸುತ್ತಿದ್ದೇವೆ. ಅಲ್ಲಿ ಕೆಲವು ಬಳಕೆದಾರರು ರೀಚಾರ್ಜ್‌ಗಳಿಗಾಗಿ ಪಾವತಿಸುತ್ತಿದ್ದಾರೆ. ನಾವು ನಡೆಸುತ್ತಿರುವ ಪ್ರಯೋಗದ ಒಂದು ಭಾಗವಾಗಿ ಹೆಚ್ಚಿನ ರೀಚಾರ್ಜ್‌ಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುತ್ತಿಲ್ಲ ಅಥವಾ ರೂ 1 ಪಾವತಿಸಲಾಗುತ್ತಿದೆ. ಆದಾಗ್ಯೂ, ಫೋನ್‌ಪೇ ನಲ್ಲಿನ ಇತರ ವಹಿವಾಟುಗಳು ಮತ್ತು ಹಣ ವರ್ಗಾವಣೆಗಳು ಉಚಿತವಾಗಿ ಉಳಿಯುತ್ತವೆ ಎಂದು ಫೋನ್ ಪೇ ವಕ್ತಾರರು ತಿಳಿಸಿದ್ದಾರೆ. ಹಾಗಾಗಿ, ಇನ್ಮುಂದೆ 50ರೂ ಬೆಲೆಯ ರೀಚಾರ್ಜ್‌ಗಳಿಗೆ 1 ರೂ.ಶುಲ್ಕವನ್ನು ವಿಧಿಸಲಾಗುತ್ತದೆ. 100ರೂ. ಮೇಲಿನ ಎಲ್ಲಾ ಮೊಬೈಲ್ ರೀಚಾರ್ಜ್‌ಗಳು 2 ರೂ.ಬೆಲೆಯ ಶುಲ್ಕವನ್ನು ವಿಧಿಸಲಾಗುತ್ತದೆ.

ಫೋನ್‌ಪೇ ಮೂಲಕ ರೀಚಾರ್ಜ್‌ ಮಾಡುವವರಿಗೆ ಶುಲ್ಕ ವಿಧಿಸುವ ಸಣ್ಣ ಪ್ರಮಾಣದ ಪ್ರಯೋಗ ಇದಾಗಿದ್ದು, ಇದರಲ್ಲಿ ಕೆಲವು ಬಳಕೆದಾರರು ಮೊಬೈಲ್ ರೀಚಾರ್ಜ್‌ಗಳಿಗೆ ಚಾರ್ಜಿಂಗ್‌ ಶುಲ್ಕ ಪಾವತಿಸಬೇಕಿದೆ ಎಂದು ಫೋನ್‌ಪೇ ಹೇಳಿಕೊಂಡಿದೆ. ಅಂದರೆ, ಅದು ನಿಮ್ಮ ಖಾತೆಯು ಪ್ರಾಯೋಗಿಕ ಗುಂಪಿನ ಅಡಿಯಲ್ಲಿ ಬರುತ್ತದೆಯೇ ಎಂಬುದನ್ನು ಅವಲಂಬಿಸಿರುತ್ತದೆ. ಈ ಪ್ರಯೋಗ ಯಶಸ್ವಿಯಾದರೆ ಶೀಘ್ರದಲ್ಲೇ ಫೋನ್‌ಪೇ ಬಳಕೆದಾರರ ಜೇಬಿಗೆ ಕತ್ತರಿ ಬೀಳಲಿದೆ. ಇನ್ನು ಫೋನ್‌ಪೇ ಎಲ್ಲಾ ಇತರ ಪಾವತಿ ಸೇವೆಗಳ ಮಾದರಿಯಲ್ಲಿಯೇ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮಾಡಿದ ಎಲ್ಲಾ ವಹಿವಾಟುಗಳಿಗೆ ಶುಲ್ಕ ವಿಧಿಸುತ್ತಿದೆ. ಆದರೆ ಇತರೆ ಪಾವತಿ ಸೇವೆಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ ಎಂದು ಫೋನ್‌ಪೇ ಹೇಳಿದೆ.

ವಾಲ್‌ಮಾರ್ಟ್-ಮಾಲೀಕತ್ವದ ಫೋನ್‌ಪೇ ಕಂಪನಿಯು ಮಾಸಿಕ ಏಕೀಕೃತ ಪಾವತಿ ಇಂಟರ್ಫೇಸ್ (UPI) ಹಾಗೂ ಭಾರತ್ ಬಿಲ್‌ಪೇ ಸೇವೆಗಳ (BBPS) ವಹಿವಾಟುಗಳಲ್ಲಿ ಅತ್ಯಧಿಕ ಮಾರುಕಟ್ಟೆ ಪಾಲನ್ನು ಹೊಂದಿದೆ. ಭಾರತದ ಜನಪ್ರಿಯ ಡಿಜಿಟಲ್ ನಗದು ಪಾವತಿ ಅಪ್ಲಿಕೇಶನ್‌ ಆಗಿ, UPI ಮಾಸಿಕ ಸಂಪುಟಗಳಲ್ಲಿ 45 ಪ್ರತಿಶತ ಮತ್ತು ವಹಿವಾಟಿನ ಮಾಸಿಕ ಮೌಲ್ಯದ 47 ಪ್ರತಿಶತ ಪಾಲನ್ನು ಹೊಂದಿದೆ. ಆಗಸ್ಟ್‌ನಲ್ಲಿ BBPS ನಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹಂಚಿಕೊಂಡ ಇತ್ತೀಚಿನ ಡೇಟಾವು ಫೋನ್‌ಪೇ 49 ಪ್ರತಿಶತದಷ್ಟು ವಾಲ್ಯೂಮ್ ಷೇರ್‌ನೊಂದಿಗೆ ಮಾರುಕಟ್ಟೆಯನ್ನು ಮುನ್ನಡೆಸುತ್ತಿದೆ ಎಂದು ತೋರಿಸಿದೆ.

Leave A Reply

Your email address will not be published.