ಅಮಿತ್ ಷಾ ಹುಟ್ಟುಹಬ್ಬಕ್ಕೆ ಸಾರಾ ಅಲಿ ಖಾನ್ ಟ್ವೀಟ್ | NCB ತನಿಖೆಯಿಂದ ತಪ್ಪಿಸಿಕೊಳ್ಳಲು ಈ ತಂತ್ರ ಎಂದು ಗೇಲಿ ಮಾಡಿಕೊಂಡು ನಗುತ್ತಿರುವ ಭಾರತ !

ನವದೆಹಲಿ: ಬಾಲಿವುಡ್ ನಟಿ ಸಾರಾ ಅಲಿಖಾನ್ ಅವರು ಗೃಹ ಸಚಿವ ಅಮಿತ್ ಶಾ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಇದೀಗ ಟ್ರೋಲಿಗರಿಗೆ ಭರ್ಜರಿ ಆಹಾರವಾಗಿದ್ದಾರೆ. ಇಡೀ ಭಾರತ ದೊಡ್ಡದಾಗಿ ಸಾರಾ ಅವರನ್ನು ಗೇಲಿ ಮಾಡಿಕೊಂಡು ನಗುತ್ತಿದೆ.

ನಿನ್ನೆ ಅಮಿತ್ ಶಾ ಅವರ ಹುಟ್ಟುಹಬ್ಬವಾಗಿತ್ತು. ಈ ಹಿನ್ನೆಲೆಯಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಗೃಹ ಸಚಿವರಿಗೆ ವಿಶ್ ಮಾಡಿದ್ದಾರೆ. ಆದರೆ ಇದುವರೆಗೆ ವಿಶ್ ಮಾಡಿದಿರುವ ಸಾರಾ ಈ ಬಾರಿ ಶುಭಕೋರಿರುವುದಕ್ಕೆ ನೆಟ್ಟಿಗರನ್ನು ಕುತೂಹಲಕ್ಕೆ ತಳ್ಳಿದ್ದು, ಈಗ ಟ್ರೋಲ್ ದಾರರು ಸಾರಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ, ಆಕೆಯ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

ಇತ್ತೀಚೆಗೆ ಬಾಲಿವುಡ್ ಸೆಲೆಬ್ರಿಟಿಗಳ ಮನೆ ಮೇಲೆ ಎನ್‍ಸಿಬಿ ದಾಳಿ ನಡೆಯುತ್ತಿದೆ. ಇದರಿಂದ ಪಾರಾಗುವ ಸಲುವಾಗಿ ಸಾರಾ ಅವರು ಅಮಿತ್ ಶಾಗೆ ವಿಶ್ ಮಾಡಿದ್ದಾರೆ ಎಂದು ಕಾಲೆಳೆದಿದ್ದಾರೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಸಾರಾ ಟ್ವೀಟ್ ನಲ್ಲೇನಿತ್ತು ?

ಗೃಹ ಸಚಿವ ಅಮಿತ್ ಶಾ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಎಂದು ಸಾರಾ ಟ್ವೀಟ್ ಮಾಡಿದ್ದಾರೆ. ನಟಿ ಈ ರೀತಿ ಟ್ವೀಟ್ ಮಾಡುತ್ತಿದ್ದಂತೆಯೇ ನೆಟ್ಟಿಗರು ಆಕೆಯನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಒಬ್ಬರು, ‘ನಿಮ್ಮ ಮನೆ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ಮಾಡಲ್ಲ. ಈ ಮೂಲಕ ನೀವು ಸುರಕ್ಷಿತವಾಗಿದ್ದೀರಿ’ ಎಂದು ಕಾಮೆಂಟ್ ಮಾಡಿದ್ದಾರೆ.
‘ NCB ಲಿಸ್ಟ್ ನಲ್ಲಿದ್ದ ಒಂದು ಹೆಸರು ಹೊಡೆದು ಹಾಕಲಾಗಿದೆ ‘ ಎಂದು ನೆಟ್ಟಿಗರು ಅಮಿತ್ ಮತ್ತು ಸಾರಾ ಫೋಟೋ ಹಾಕಿ ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದಾರೆ.

ಅತ್ತ ಮುಂಬೈನ ಕ್ರೂಸ್‍ನಲ್ಲಿ ನಡೆದ ಡ್ರಗ್ಸ್ ಕೇಸ್ ಪ್ರಕರಣದ ಬಗ್ಗೆ ಕೆದಕಿದಷ್ಟು ಮಾಹಿತಿ ಹೊರಬರ್ತಿದೆ. ಆರ್ಯನ್ ಖಾನ್ ಜೊತೆ ವಾಟ್ಸಪ್‍ನಲ್ಲಿ ಡ್ರಗ್ಸ್ ಬಗ್ಗೆ ಚಾಟಿಂಗ್ ಮಾಡಿದ್ದಂತೆ ನಟಿ ಅನನ್ಯ ಪಾಂಡೆಗೆ ಇಂದು ಕೂಡ ಎನ್‍ಸಿಬಿ ಡ್ರಿಲ್ ಮಾಡಿತು. ನಿಮಗೆ ಯಾರು ಡ್ರಗ್ಸ್ ತಂದು ಕೊಡ್ತಿದ್ರು..? ಯಾವ್ಯಾವ ಟೈಮಲ್ಲಿ ಡ್ರಗ್ಸ್ ತಗೋತಿದ್ರಿ..? ಆರ್ಯನ್ ಜೊತೆ ಎಷ್ಟು ದಿನಗಳಿಂದ ಡ್ರಗ್ಸ್ ತೆಗೆದುಕೊಳ್ತಿದ್ದೀರಿ..? ನಿಮ್ ಜೊತೆ ಯಾರ್ಯಾರು ಡ್ರಗ್ಸ್ ತಗೋತಿದ್ರು..? ಪೆಡ್ಲರ್‍ಗೆ ಹೇಗೆ ಹಣ ಕೊಡ್ತಿದ್ರಿ..? ಯಾವ್ಯಾವ ಸ್ಥಳದಲ್ಲಿ ಪೆಡ್ಲರ್‍ನ ಭೇಟಿಯಾಗ್ತಿದ್ರಿ ಅಂತಾ ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿರೋ ಅನನ್ಯ ಪಾಂಡೆ, ನಾನು ಡ್ರಗ್ಸ್ ತಗೋಳಲ್ಲ. ಆರ್ಯನ್ ಜೊತೆ ಗಾಂಜಾ ಕುರಿತು ಜೋಕ್ ಮಾಡಿದ್ದೇ ಅಷ್ಟೇ. ಅದೂ 1 ಒಂದು ವರ್ಷದ ಹಿಂದಿನ ಚಾಟ್ ಅದು ಅಂತ ಹೇಳಿದ್ದಾರೆ. ಆದರೆ ಆರ್ಯನ್ ಡ್ರಗ್ಸ್ ಕೇಳಿದಾಗ, ತಂದು ಕೊಡೋದಾಗಿ ಅನನ್ಯ ಪಾಂಡೆ ಚಾಟ್‍ನಲ್ಲಿ ಹೇಳಿದ್ದಳು ಅಂತ ಎನ್‍ಸಿಬಿ ಹೇಳಿದೆ.

Leave a Reply

error: Content is protected !!
Scroll to Top
%d bloggers like this: