ಆನ್ಲೈನ್ ಆರ್ಡರ್ ಎಡವಟ್ಟು |ಆರ್ಡರ್ ಮಾಡಿದ್ದು ಐಷಾರಾಮಿ ಐಫೋನ್ ಆದ್ರೆ ಬಂದಿದ್ದು ಪಾತ್ರೆ ತೊಳೆಯುವ ಸೋಪ್!

ಈಗ ಬಹಳಷ್ಟು ಮಂದಿ ಇ-ಕಾಮರ್ಸ್ ವೆಬ್ಸೈಟ್ ನಿಂದಲೇ ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡುತ್ತಾರೆ. ಇ-ಕಾಮರ್ಸ್ ವೆಬ್ ಸೈಟ್‍ನಲ್ಲಿ ಆರ್ಡರ್ ಮಾಡಿದಾಗ ತಪ್ಪಾದ ಪ್ರಾಡೆಕ್ಟ್ ಗಳು ಬರುವುದು ಮಾಮೂಲಾಗಿ ಹೋಗಿದೆ. ಹಾಗೆಯೇ ಇದೀಗ ಕೇರಳದ ವ್ಯಕ್ತಿಯೋರ್ವ ಐಷಾರಾಮಿ ಐಫೋನ್ ಆರ್ಡರ್ ಮಾಡಿದ್ದು, ಐಫೋನ್ ಬದಲು ಪಾತ್ರೆ ತೊಳೆಯುವ ಸೋಪು ಮತ್ತು 5 ರೂ. ನಾಣ್ಯ ಸಿಕ್ಕಿದೆ.

ಹೌದು, ಅಲುವಾ ನಿವಾಸಿಯಾದ ನೂರುಲ್ ಅಮೀನ್, ತಾವು ಆರ್ಡರ್ ಮಾಡಿದ್ದ ಆಪಲ್ ಸ್ಮಾರ್ಟ್ ಫೋನ್‍ಗಾಗಿ ಕಾಯುತ್ತಿದ್ದರು. ಆದರೆ ಐಫೋನ್ ಬಾಕ್ಸ್‌ನಲ್ಲಿ ಸೋಪ್ ಅನ್ನು ನೋಡಿ ಅವರಿಗೆ ಹೇಗಾಗಿರಲಿಕ್ಕಿಲ್ಲ.

ಸದ್ಯ ವೈರಲ್ ಆಗುತ್ತಿರುವ ಫೋಟೋದಲ್ಲಿ, ಹಸಿರು ಬಣ್ಣದ ವಿಮ್ ಡಿಶ್ ವಾಶ್ ಸೋಪ್ ಮತ್ತು 5 ರೂ. ನಾಣ್ಯ ಇರುವುದನ್ನು ಕಾಣಬಹುದಾಗಿದೆ. ನುರುಲ್ 70,900 ರೂ ಸ್ಮಾರ್ಟ್ ಫೋನ್ ಅನ್ನು ಆರ್ಡರ್ ಮಾಡಿದ್ದರು. ಆದರೆ, ಸ್ಮಾರ್ಟ್ ಫೋನ್ ಬದಲಾಗಿ ಪಾತ್ರೆ ತೊಳೆಯುವ ಸಾಬೂನನ್ನು ಪಡೆದಿದ್ದರು.

ಅಮೀನ್ ಅವರು ಅಕ್ಟೋಬರ್ 12ರಂದು ಐಫೋನ್ ಬುಕ್ ಮಾಡಿದ್ದರು. ಅಕ್ಟೋಬರ್ 15ರಂದು ಆರ್ಡರ್ ಅನ್ನು ಸ್ವೀಕರಿಸಿದ್ದರು. ಕೂಡಲೇ ಎನ್‍ಆರ್‍ಐನಲ್ಲಿ ದೂರು ದಾಖಲಿಸಿ ನಂತರ ಅದೃಷ್ಟವಶಾತ್ ಪಾವತಿಸಿದ ಹಣ ಹಿಂಪಡೆದರು.

ಇದೀಗ ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಅಲ್ಲದೇ ನೂರುಲ್ ಸ್ವೀಕರಿಸಬೇಕಿದ್ದ ಫೋನ್ ಅನ್ನು ಜಾರ್ಖಂಡ್ ನಲ್ಲಿ ಸೆಪ್ಟೆಂಬರ್‌ನಿಂದ ಯಾರೋ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೊಬೈಲ್ ನ ಐಎಂಇಐ ಸಂಖ್ಯೆಯಿಂದಾಗಿ ಇದೆಲ್ಲವನ್ನು ಕಂಡುಹಿಡಿಯಲು ಸಾಧ್ಯವಾಯಿತು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave A Reply

Your email address will not be published.