ಅ.24 : ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಚಾಲನೆ

ಬೆಂಗಳೂರು: ಅ. 24ರಂದು ಬೆಳಿಗ್ಗೆ 8:30ರ ಸಮಯ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಚಾಲನೆ ದೊರೆಯಲಿದೆ. 9:30ರ ಸಮಯ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಸ್ವಯಂ ಭಾವಚಿತ್ರ ಕೇಂದ್ರ ಉದ್ಘಾಟನೆ, 9:55ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪರ್ವ ನಾಟಕಕ್ಕೆ ಚಾಲನೆ, 10 30 ರವೀಂದ್ರ ಕಲಕ್ಷೇತ್ರದಲ್ಲಿ ವಿಡಿಯೋಗಳ ಅನಾವರಣ, ಮಧ್ಯಾಹ್ನ 3 ಗಂಟೆಗೆ ಕನ್ನಡ ಭವನದಲ್ಲಿ 2021ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ, ಸಲಹಾ ಸಮಿತಿ ಸಭೆ, ಸಂಜೆ 6:30ರ ಅನಂತರ ರಾಜಭವನದಲ್ಲಿ ರಾಜ್ಯಪಾಲರಿಂದ ಮಾತಾಡ್ ಮಾತಾಡ್ ಕನ್ನಡ ಅಭಿಯಾನಕ್ಕೆ ಚಾಲನೆ ದೊರೆಯಲಿದೆ ಎಂದು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವರ ಕಚೇರಿ ತಿಳಿಸಿದೆ.

Ad Widget

Leave a Reply

error: Content is protected !!
Scroll to Top
%d bloggers like this: