ಮಂಗಳೂರು: ಮ್ಯಾಗನಮ್ ಇಂಟರ್ ಗ್ರಾಫಿಕ್ಸ್ ಮಾಲಕ ಸುಧೀರ್ ಘಾಟೆ ನಿಧನ

ಮಂಗಳೂರು: ಮಂಗಳೂರಿನ ಜಾಹೀರಾತು ಸಂಸ್ಥೆ ಮ್ಯಾಗನಮ್ ಇಂಟರ್ ಗ್ರಾಫಿಕ್ಸ್ ನ ಮಾಲಕರಾಗಿದ್ದ ಸುಧೀರ್ ಘಾಟೆ(64) ಇಂದು ನಿಧನ ಹೊಂದಿದರು.

ಆರೆಸ್ಸೆಸ್ ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ತನ್ನ ವೃತ್ತಿ ಜೀವನವನ್ನು ಆರಂಭಿಸಿ ,1992 ರಲ್ಲಿ ಮ್ಯಾಗ್ನಮ್ ಇಂಟರ್ ಗ್ರಾಫಿಕ್ಸ್ ಜಾಹೀರಾತು ಸಂಸ್ಥೆಯನ್ನು ಆರಂಭಿಸಿ, ಜಾಹೀರಾತು ಕ್ಷೇತ್ರದಲ್ಲಿ ದಿಗ್ಗಜನಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ವಾಸಿಯಾಗಿದ್ದರು. ಸಾವಿರಾರು ಮಂದಿಗೆ ಉದ್ಯೋಗದಾತರಾಗಿ ಸುಮಾರು 500ಕ್ಕಿಂತಲೂ ಹೆಚ್ಚು ಮಂದಿ

ನುರಿತ ಕೆಲಸಗಾರರನ್ನು ತನ್ನ ಗಡಿಯಲ್ಲಿ ಪಳಗಿಸಿದ್ದರು.

1995ರಲ್ಲಿ ಈಗಿನ ವಿಧಾನ ಸಭಾ ಸ್ಪೀಕರ್ ಕಾಗೇರಿಯವರು ಭಾರತೀಯ ಜನತಾ ಪಾರ್ಟಿಯ ರಾಜ್ಯ ಯುವ ಮೋರ್ಚಾದ ಅದ್ಯಕ್ಷರಾಗಿದ್ದ ಸಂಧರ್ಭ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಪಿ.ಆರ್.ಐ ಎಸ್ ನ ಅಧ್ಯಕ್ಷರಾಗಿ ತಮ್ಮ ಸೇವೆ ಸಲ್ಲಿಸಿದ್ದರು.

ದಿವಂಗತ ಅಟಲ್ ಬಿಹಾರಿ ವಾಜಪೇಯಿ, ಸುಷ್ಮಾ ಸ್ವರಾಜ್,ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅವರಂತಹ ಹಿರಿಯರ ಒಡನಾಟದಲ್ಲಿ ಇದ್ದ ಸುಧೀರ್ ಘಾಟೆಯವರು, ಬಿ ಎಮ್ ಎಸ್ ನ ಪ್ರಧಾನ ಕಾರ್ಯದರ್ಶಿ ಆಗಿದ್ದ ದಿವಂಗತ ಪ್ರಭಾಕರ್ ಘಾಟೆ, ಶಾರದಾ ಘಾಟೆ ದಂಪತಿಗಳ ಸುಪುತ್ರರಾಗಿದ್ದರು.

ಅವರು ಪತ್ನಿ, ಪುತ್ರ ಪ್ರಾಂಜಲ ಘಾಟೆ, ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂತಾಪ ಸೂಚನೆ: ಆರೆಸ್ಸೆಸ್ ನ ಸರಕಾರ್ಯ ನಿರ್ವಾಹಕ ದತ್ತಾತ್ರೇಯ ಹೊಸಬಾಳೆ, ಸಹ ಕಾರ್ಯನಿರ್ವಾಹಕ ಮುಕುಂದ್, ಆರೆಸ್ಸೆಸ್ ನ ಪ್ರಭಾಕರ್ ಭಟ್, ದಾಮ ರವೀಂದ್ರ, ಸಂಘ ಚಾಲಕ ವಾಮನ್ ಶೆಣೈ. ಎಂ. ಬಿ.ಪುರಾಣಿಕ್,ಸಂಸದ ನಳಿನ್ ಕುಮಾರ್ ಕಟೀಲ್, ಮಂತ್ರಿಗಳಾದ ಕೋಟ ಶ್ರೀನಿವಾಸ್ ಪೂಜಾರಿ, ಎಸ್.ಅಂಗಾರ, ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ರಾಜೇಶ ನಾಯ್ಕ, ಸಂಜೀವ್ ಮಠಂದೂರು, ಉಮಾನಾಥ ಕೋಟ್ಯಾನ್, ಪ್ರತಾಪ್ ಸಿಂಹ ನಾಯಕ್, ಬಿ.ಎಂ. ಎಸ್ ನ ವಿಶ್ವನಾಥ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಸಂಧ್ಯಾ ಪೈ, ವಿಜಯ್ ಸಂಕೇಶ್ವರ, ವಿನಯ್ ಹೆಗ್ಡೆ, ಮೋಹನ್ ಆಳ್ವ, ಕೃಷ್ಣ.ಜೆ.ಪಾಲೇಮಾರ್, ಮಂಜುನಾಥ ಭಂಡಾರಿ ಸಂತಾಪ ಸೂಚಿಸಿದ್ದಾರೆ.

Leave A Reply

Your email address will not be published.