Day: October 22, 2021

ಇಲಾಖೆಯ ಕರ್ತವ್ಯದ ನಡುವೆಯೂ ವಿಡಿಯೊ ಮೂಲಕ ಪ್ರಚಾರ ಮಾಡಿ ಬದ್ದತೆ ತೋರಿದ ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ

ಬೆಂಗಳೂರು: ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿರುವ ಸಂದರ್ಭದಲ್ಲಿ ಇಲಾಖೆಯ ತುರ್ತು ಕಾರ್ಯದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆಯವರು, ತಮ್ಮ ಪೂರ್ವನಿಗದಿತ ಪ್ರಚಾರ ಕಾರ್ಯವನ್ನು ವಿಡಿಯೊ ಮೂಲಕ ಮಾಡಿ ಪಕ್ಷದ ಬಗ್ಗೆ ತಮಗಿರುವ ಬದ್ಧತೆಯನ್ನು ಪ್ರದರ್ಶಿಸಿದರು. ಗುರುವಾರ ಹಜ್ ಮತ್ತು ವಕ್ಫ್ ಇಲಾಖೆಯ ತುರ್ತು ಕಾರ್ಯದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಸಚಿವರಾದ ಶಶಿಕಲಾ ಜೊಲ್ಲೆಯವರು ಶುಕ್ರವಾರ ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ರಮೇಶ …

ಇಲಾಖೆಯ ಕರ್ತವ್ಯದ ನಡುವೆಯೂ ವಿಡಿಯೊ ಮೂಲಕ ಪ್ರಚಾರ ಮಾಡಿ ಬದ್ದತೆ ತೋರಿದ ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ Read More »

ಕುಂಬ್ರ : ಕಾಂಗ್ರೆಸ್-ಎಸ್‌ಡಿಪಿಐ ಕಾರ್ಯಕರ್ತರ ಹೊಡೆದಾಟ ,ಪೊಲೀಸರ ಆಗಮನ

ಕುಂಬ್ರ ಪೇಟೆಯಲ್ಲಿ ಒಂದೇ ಸಮುದಾಯಕ್ಕೆ ಸೇರಿದ ಇತ್ತಂಡಗಳು ಹೊಡೆದಾಡಿಕೊಂಡಿದ್ದು, ಸಂಪ್ಯ ಠಾಣಾ ಪೊಲೀಸರು ಆಗಮಿಸಿ ಚದುರಿಸಿದ ಘಟನೆ ಅ 22 ರಂದು ಸಂಜೆ ನಡೆದಿದೆ. ಹೊಡೆದಾಡಿಕೊಂಡವರು ಕಾಂಗ್ರೇಸ್ ಹಾಗೂ ಎಸ್ಟಿಪಿಐ ಪಕ್ಷದ ಕುಂಬ್ರ ಪರಿಸರದ ಕಾರ್ಯಕರ್ತರು ಎಂದು ತಿಳಿದು ಬಂದಿದೆ. ಅ 20ರಂದು ಎರಡು ತಂಡಗಳ ನಡುವೆ ಹೊಡೆದಾಟ ನಡೆದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕುಂಬ್ರದ ವಾಟ್ಸಾಪ್ ಗ್ರೂಪಿನಲ್ಲಿ ಇಂದು ಬೆಳಿಗ್ಗೆಯಿಂದಲೇ ಎರಡು ಗುಂಪುಗಳ ನಡುವೆ ಬಿಸಿಬಿಸಿ ಚರ್ಚೆ ನಡೆದಿತ್ತು ಎನ್ನಲಾಗಿದೆ. ಇಂದು …

ಕುಂಬ್ರ : ಕಾಂಗ್ರೆಸ್-ಎಸ್‌ಡಿಪಿಐ ಕಾರ್ಯಕರ್ತರ ಹೊಡೆದಾಟ ,ಪೊಲೀಸರ ಆಗಮನ Read More »

ಒಂದು ಕುಟುಂಬದ ಇಬ್ಬರು ಮಕ್ಕಳ ಸಾವು.ಸಾವಿಗೆ ಕಾರಣವಾಯಿತೆ ಫ್ರಿಡ್ಜ್ನಲ್ಲಿ ಇರಿಸಿದ ಆಹಾರ ಪದಾರ್ಥ!!!

ದೆಹಲಿ: ದೆಹಲಿಯಲ್ಲಿ ಒಂದು ಕುಟುಂಬದ ಇಬ್ಬರು ಮುಗ್ಧ ಶಾಲೆಗೆ ಹೋಗುವ ಮಕ್ಕಳು ಬೆಳಿಗ್ಗೆ ತಮ್ಮ ಹಾಸಿಗೆಗಳಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿನ ಸಂಭವನೀಯ ಕಾರಣದ ತನಿಖೆಯು ಅವರ ತಿನ್ನುವ ಮತ್ತು ಕುಡಿಯುವ ಆಹಾರವೇ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿದೆ. ನಂತರ ಮಕ್ಕಳ ತಾಯಿ ಮಕ್ಕಳು ಹೊರಗಿನಿಂದ ಏನನ್ನೂ ತಿನ್ನಲಿಲ್ಲ ಆದರೆ ಮಲಗುವ ವೇಳೆಗೆ ಎಂದಿನಂತೆ ಒಂದು ಲೋಟ ಹಾಲನ್ನು ನೀಡಲಾಯಿತು ಎಂದು ಹೇಳಿದರು. ಫ್ರಿಜ್ ನಲ್ಲಿರುವ ಹಾಲಿನ ಪಾತ್ರೆಯನ್ನು ಪರಿಶೀಲಿಸಿದಾಗ 3 ರಿಂದ 4 ಇಂಚಿನ ಮರಿ …

ಒಂದು ಕುಟುಂಬದ ಇಬ್ಬರು ಮಕ್ಕಳ ಸಾವು.ಸಾವಿಗೆ ಕಾರಣವಾಯಿತೆ ಫ್ರಿಡ್ಜ್ನಲ್ಲಿ ಇರಿಸಿದ ಆಹಾರ ಪದಾರ್ಥ!!! Read More »

ಬಡಗನ್ನೂರು : ದಲಿತ ಬಾಲಕಿಯ ಅತ್ಯಾಚಾರ, ಮಗುವಿಗೆ ಜನ್ಮ | ಆರೋಪಿ ನಾರಾಯಣ ರೈ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಪುತ್ತೂರು ತಾಲೂಕಿನ ಬಡಗನ್ನೂರಿನ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಆಕೆ ಮಗುವಿಗೆ ಜನ್ಮನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುತ್ತೂರು ನ್ಯಾಯಾಲಯ ಅ 22 ರಂದು ತಿರಸ್ಕರಿಸಿದೆ. ಪುತ್ತೂರು ತಾಲೂಕಿನ ಸುಳ್ಯಪದವು ಸಮೀಪದ ಪಡವನ್ನೂರು ಗ್ರಾಮದ ಕುದ್ಕಾಡಿ ನಾರಾಯಣ ರೈ (73)ಯವರು ಜಾಮೀನು ಕೋರಿ ತನ್ನ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಸಿದ ಪುತ್ತೂರು 5 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. …

ಬಡಗನ್ನೂರು : ದಲಿತ ಬಾಲಕಿಯ ಅತ್ಯಾಚಾರ, ಮಗುವಿಗೆ ಜನ್ಮ | ಆರೋಪಿ ನಾರಾಯಣ ರೈ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ Read More »

ತಲವಾರು ದಾಳಿ; 2 ಯುವಕರು ಆಸ್ಪತ್ರೆಗೆ ದಾಖಲು

ಉಡುಪಿ : ಬಾರ್‌ನ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರಿಗಾಗಿ ಸ್ಥಳಕ್ಕೆ ತೆರಳಿದ್ದ ವೇಳೆ ಆರೋಪಿಗಳ ತಂಡ ಏಕಾಏಕಿಯಾಗಿ ತಲವಾರು ದಾಳಿ ನಡೆಸಿದ ಪರಿಣಾಮ ಇಬ್ಬರು ಯುವಕರು ಗಾಯಗೊಂಡು ಬೈಂದೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ನಡೆದಿದೆ. ಕಾಲ್ನೋಡು ನಿವಾಸಿ ರವಿ ಶೆಟ್ಟಿ ಹಾಗೂ ಪ್ರಶಾಂತ್ ಶೆಟ್ಟಿ ತಲವಾರು ದಾಳಿಗೊಳಗಾದವರು. ಇಬ್ಬರೂ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿರೂರು ಗ್ರಾಮದ ನೀರ್ಗದ್ದೆಯ ರೆಸ್ಟೋರೆಂಟ್‌ಗೆ ಬುಧವಾರ ರಾತ್ರಿ ಬಂದಿದ್ದ …

ತಲವಾರು ದಾಳಿ; 2 ಯುವಕರು ಆಸ್ಪತ್ರೆಗೆ ದಾಖಲು Read More »

ನೆಲದ ಮೇಲೆ ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಹಾಲು ಕರೆಯುವ ದನ ಸಾವು

ಬೆಳ್ತಂಗಡಿ : ಕಕ್ಕಿಂಜೆ ವಿದ್ಯುತ್ ಸ್ಟೇಷನ್ ನ ಮುಂಡಾಜೆ ಮೆಸ್ಕಾಂ ಶಾಖಾ ಕಚೇರಿ ವ್ಯಾಪ್ತಿಯ, ಮುಂಡಾಲ ಬೆಟ್ಟಿನ ದೇವಸ್ಯ ಎಂಬಲ್ಲಿ ಕೆಂಪಯ್ಯ ಗೌಡ ಎಂಬವರ ಹಾಲು ಕರೆಯುವ ದನ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಅ. 22 ರಂದು ನಡೆದಿದೆ. ಹಾಲು ಕರೆಯುವ ಸಂದರ್ಭ ದನದ ಹಗ್ಗವನ್ನು ಬಿಚ್ಚಿದಾಗ ತೋಟದ ಕಡೆ ಓಡಿದ ದನ ಕೃಷಿ ಪಂಪು ಸೆಟ್ಟಿನ ಸಂಪರ್ಕದ ಕಡಿದು ನೆಲದ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದೆ. ಸುಮಾರು 35 ಸಾವಿರ …

ನೆಲದ ಮೇಲೆ ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಹಾಲು ಕರೆಯುವ ದನ ಸಾವು Read More »

ರಸ್ತೆ ಬದಿಯಲ್ಲಿ ಜುಟ್ಟು ಹಿಡಿದು ಕಿತ್ತಾಡುತ್ತಿರುವ ನಾರಿಯರು | ಇವರ ಶಕ್ತಿ ಪ್ರದರ್ಶನ ಕಂಡು ನಗೆಗಡಲಲ್ಲಿ ತೇಲಾಡಿದ ನೆಟ್ಟಿಗರು

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಅಂಥಹುದೇ ಒಂದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ವಿಡಿಯೋದಲ್ಲಿ ಇಬ್ಬರು ಮಹಿಳೆಯರ ನಡುವೆ ಜಗಳ ನಡೆಯುತ್ತಿದೆ. ಜುಟ್ಟು ಹಿಡಿದು ಎಳೆದಾಡುತ್ತಿರುವ ಇಬ್ಬರ ದೃಶ್ಯ ಇದೀಗ ಫುಲ್ ವೈರಲ್ ಆಗಿದೆ. ನಾ ಹೆಚ್ಚು ಬಲಶಾಲಿಯೋ ಅಥವಾ ನೀನೋ ಎಂಬುದನ್ನು ನಿರೂಪಿಸುವಂತಿದೆ ವಿಡಿಯೋ. ಇಬ್ಬರು ಮಹಿಳೆಯರು ಕಿತ್ತಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ, ಇಬ್ಬರ ಮಧ್ಯದ ಜಟಾಪಟಿಗೆ ಕಾರಣ ಏನಿರಬಹುದು ಎಂಬ …

ರಸ್ತೆ ಬದಿಯಲ್ಲಿ ಜುಟ್ಟು ಹಿಡಿದು ಕಿತ್ತಾಡುತ್ತಿರುವ ನಾರಿಯರು | ಇವರ ಶಕ್ತಿ ಪ್ರದರ್ಶನ ಕಂಡು ನಗೆಗಡಲಲ್ಲಿ ತೇಲಾಡಿದ ನೆಟ್ಟಿಗರು Read More »

ವಕೀಲ ರಾಜೇಶ್ ಭಟ್ ಅವರಿಂದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ | ಕರ್ತವ್ಯ ಲೋಪ ಪಿಎಸೈ ಶ್ರೀಲತಾ,ಹೆಚ್‌ಸಿ ಪ್ರಮೋದ್ ಅಮಾನತು

ಮಂಗಳೂರಿನ ಖ್ಯಾತ ವಕೀಲ ಕೆ.ಎಸ್.ಎನ್.ರಾಜೇಶ್ ಎಂಬುವರ ಮೇಲೆ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿ ಬಂದಿತ್ತು. ತನ್ನ ಕಚೇರಿಯಲ್ಲಿ ಇಂಟರ್ನ್‌ಶಿಪ್ ಮಾಡಲು ಬಂದಿದ್ದ ಮಂಗಳೂರಿನ ಕಾನೂನು ಪದವಿ ಕಾಲೇಜಿನ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಪಿಎಸ್​​ಐ ಮತ್ತು ಹೆಡ್ ಕಾನ್ಸ್​​​ಟೇಬಲ್ ಅವರನ್ನು ಅಮಾನತು ಮಾಡಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಆದೇಶಿಸಿದ್ದಾರೆ. ಪೂರ್ವ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಕಲಾ ಮತ್ತು ಹೆಡ್ ಕಾನ್ಸ್​​​ಟೇಬಲ್ ಪ್ರಮೋದ್​​ ಅಮಾನತು ಆದವರು. ಸಂತ್ರಸ್ತೆ …

ವಕೀಲ ರಾಜೇಶ್ ಭಟ್ ಅವರಿಂದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ | ಕರ್ತವ್ಯ ಲೋಪ ಪಿಎಸೈ ಶ್ರೀಲತಾ,ಹೆಚ್‌ಸಿ ಪ್ರಮೋದ್ ಅಮಾನತು Read More »

ಮಂಗಳೂರು: ಮ್ಯಾಗನಮ್ ಇಂಟರ್ ಗ್ರಾಫಿಕ್ಸ್ ಮಾಲಕ ಸುಧೀರ್ ಘಾಟೆ ನಿಧನ

ಮಂಗಳೂರು: ಮಂಗಳೂರಿನ ಜಾಹೀರಾತು ಸಂಸ್ಥೆ ಮ್ಯಾಗನಮ್ ಇಂಟರ್ ಗ್ರಾಫಿಕ್ಸ್ ನ ಮಾಲಕರಾಗಿದ್ದ ಸುಧೀರ್ ಘಾಟೆ(64) ಇಂದು ನಿಧನ ಹೊಂದಿದರು. ಆರೆಸ್ಸೆಸ್ ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ತನ್ನ ವೃತ್ತಿ ಜೀವನವನ್ನು ಆರಂಭಿಸಿ ,1992 ರಲ್ಲಿ ಮ್ಯಾಗ್ನಮ್ ಇಂಟರ್ ಗ್ರಾಫಿಕ್ಸ್ ಜಾಹೀರಾತು ಸಂಸ್ಥೆಯನ್ನು ಆರಂಭಿಸಿ, ಜಾಹೀರಾತು ಕ್ಷೇತ್ರದಲ್ಲಿ ದಿಗ್ಗಜನಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ವಾಸಿಯಾಗಿದ್ದರು. ಸಾವಿರಾರು ಮಂದಿಗೆ ಉದ್ಯೋಗದಾತರಾಗಿ ಸುಮಾರು 500ಕ್ಕಿಂತಲೂ ಹೆಚ್ಚು ಮಂದಿ ನುರಿತ ಕೆಲಸಗಾರರನ್ನು ತನ್ನ ಗಡಿಯಲ್ಲಿ ಪಳಗಿಸಿದ್ದರು. 1995ರಲ್ಲಿ ಈಗಿನ ವಿಧಾನ ಸಭಾ ಸ್ಪೀಕರ್ ಕಾಗೇರಿಯವರು ಭಾರತೀಯ …

ಮಂಗಳೂರು: ಮ್ಯಾಗನಮ್ ಇಂಟರ್ ಗ್ರಾಫಿಕ್ಸ್ ಮಾಲಕ ಸುಧೀರ್ ಘಾಟೆ ನಿಧನ Read More »

ಪತಿಯೊಂದಿಗೆ ಜೀವನ ನಡೆಸಲು ಎರಡು ವರ್ಷಗಳಿಂದ ಹೋರಾಟ ನಡೆಸಿದ ಆಸಿಯಾ ಹೋರಾಟದಿಂದ ಹಿಂದಕ್ಕೆ | ಸ್ವತಂತ್ರ ಬದುಕು ಕಟ್ಟಿ ಕೊಳ್ಳಲು ನಿರ್ಧರಿಸಿದ ಆಸಿಯಾ

ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಸುಳ್ಯದ ಇಬ್ರಾಹಿಂ ಕಟ್ಟೆಕಾರ್ ಹಾಗೂ ಆಸಿಯಾ ಬೀದಿ ರಂಪಾಟ ತಾರ್ಕಿಕ ಅಂತ್ಯ ಕಾಣುವತ್ತ ಹೊರಟಿದೆ. ಪತಿಯೊಂದಿಗೆ ವಾಸ ಮಾಡಲು ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಆಸಿಯಾ ಇದ್ದಕ್ಕಿದಂತೆ ತನ್ನ ಹೋರಾಟದಿಂದ ಹಿಂದೆ ಸರಿಯುವ ಮಾತುಗಳನ್ನು ಆಡಿದ್ದಾರೆ. ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನನ್ನೂ ವಿವಾಹವಾಗಿದ್ದ ಸುಳ್ಯದ ಇಬ್ರಾಹಿಂ ಕಟ್ಟೆಕಾರ್ ಅವರ ಮನ ಒಲಿಸಲು ಸಾಕಷ್ಟು ಪ್ರಯತ್ನ ಪಟ್ಟೆ. ಎರಡು ವರ್ಷ ಇದಕ್ಕಾಗಿ ಸಮಯ ವಿನಿಯೋಗಿಸಿದೆ. ಇನ್ನು ಅವರಿಗೂ ನನಗೂ ಯಾವುದೇ …

ಪತಿಯೊಂದಿಗೆ ಜೀವನ ನಡೆಸಲು ಎರಡು ವರ್ಷಗಳಿಂದ ಹೋರಾಟ ನಡೆಸಿದ ಆಸಿಯಾ ಹೋರಾಟದಿಂದ ಹಿಂದಕ್ಕೆ | ಸ್ವತಂತ್ರ ಬದುಕು ಕಟ್ಟಿ ಕೊಳ್ಳಲು ನಿರ್ಧರಿಸಿದ ಆಸಿಯಾ Read More »

error: Content is protected !!
Scroll to Top