ಅ.23 : ಮಾಡಾವು,ಸವಣೂರು ಉಪಕೇಂದ್ರ ವ್ಯಾಪ್ತಿಯ ವಿದ್ಯುತ್ ನಿಲುಗಡೆ

ಪುತ್ತೂರು: ಮೆಸ್ಕಾಂ ಪುತ್ತೂರು ಗ್ರಾಮಾಂತರ ಉಪವಿಭಾಗದ ಹೊಸ 11 ಕೆ.ವಿ ಲೈನ್‌ಗಳ ನಿರ್ಮಾಣ ಹಾಗೂ ಹಾಲಿ ಇರುವ 11 ಕೆ.ವಿ ಲೈನ್‌ಗಳ ನಿರ್ವಹಣಾ ಕಾಮಗಾರಿ ನಿಮಿತ್ತ ಅ.23 ರಂದು ಬೆಳಿಗ್ಗೆ 9 ರಿಂದ ಸಂಜೆ 5.30 ರವರಗೆ ವಿದ್ಯುತ್ ಅಡಚಣೆಯಾಗುವ ಸಾಧ್ಯತೆ ಇರುತ್ತದೆ.

Ad Widget

ಆದ್ದರಿಂದ ಮಾಡಾವು 110/33/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕೈಕಂಬ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಮಾಡಾವು, ಬಂಬಿಲ, ಕೆಯ್ಯರು, ಕಣಿಯಾರು, ಕಟ್ಟತ್ತಾರು, ಇಳಂತಾಜೆ ಹಾಗೂ 33/11 ಕೆ.ವಿ ಸವಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ದೋಳ್ವಾಡಿ, ಕಾಣಿಯೂರು, ಚಾರ್ವಾಕ, ಶಾಂತಿಮೊಗರು ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ಬೆದ್ರಂಗಳ, ಪೈಕ, ಬೊಬ್ಬೆಕೇರಿ, ಕುಂಬ್ಲಾಡಿ, ನಾಣಿಲ, ಕೂರ, ಕಾಪೆಜಾಲು, ಅಟ್ಟೋಳೆ, ಚಾಪಳ್ಳ ಪ್ರದೇಶದ ವಿದ್ಯುತ್ ಬಳಕೆದಾರರು ಈ ಪ್ರಕಟಣೆಯನ್ನು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಇಲಾಖಾ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Ad Widget . . Ad Widget . Ad Widget . Ad Widget

Ad Widget

Leave a Reply

error: Content is protected !!
Scroll to Top
%d bloggers like this: