Day: October 21, 2021

ಗಡಿಪಿಲ : ರಿಕ್ಷಾ ಚಾಲಕ ಚೇತನ್‌ಗೆ ಹಲ್ಲೆ ,ಹ್ಯಾರಿಸ್ ಮತ್ತು ತಂಡದಿಂದ ಕೃತ್ಯ ಶಂಕೆ

ಪುತ್ತೂರು: ಗಡಿಪಿಲ ರೈಲ್ವೇ ಗೇಟ್ ಬಳಿ ತಂಡವೊಂದು ಆಟೋ ರಿಕ್ಷಾ ಚಾಲಕರೊಬ್ಬರಿಗೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ಅ.19 ರಂದು ತಡ ರಾತ್ರಿ ನಡೆದ ಬಗ್ಗೆ ತಡವಾಗಿ ವರದಿಯಾಗಿದೆ. ನರಿಮೊಗರು ಗ್ರಾಮದ ವೀರಮಂಗಲ ನಿವಾಸಿ ರಿಕ್ಷಾ ಚಾಲಕ ಚೇತನ್ ಯಾನೆ ಲಕ್ಷ್ಮಣ್ ಎಂಬವರು ಹಲ್ಲೆಗೊಳಗಾದವರು.ಚೇತನ್ ಯಾನೆ ಲಕ್ಷ್ಮಣ್ ಅವರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ರಾತ್ರಿ ವೇಳೆ ತನ್ನ ರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದಾಗ ಗಡಿಪಿಲ ರೈಲ್ವೆ ಗೇಟ್ ಬಳಿ ಆಕ್ಟಿವಾ ಮತ್ತು ಬೈಕ್‌ನಲ್ಲಿ ಬಂದ ತಂಡ ರಿಕ್ಷಾವನ್ನು ನಿಲ್ಲಿಸಿ …

ಗಡಿಪಿಲ : ರಿಕ್ಷಾ ಚಾಲಕ ಚೇತನ್‌ಗೆ ಹಲ್ಲೆ ,ಹ್ಯಾರಿಸ್ ಮತ್ತು ತಂಡದಿಂದ ಕೃತ್ಯ ಶಂಕೆ Read More »

1ರಿಂದ 5ನೇ ತರಗತಿ ಶಾಲಾರಂಭ | ರಾಜ್ಯ ಸರಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು, ಅ. 21: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಸುದೀರ್ಘ ಒಂದೂವರೆ ವರ್ಷದಿಂದ ಮುಚ್ಚಲ್ಪಟ್ಟಿದ್ದ ಒಂದರಿಂದ 5ನೆ ತರಗತಿ ಶಾಲೆಗಳು ಇದೆ 25ರಿಂದ ಪುನರಾರಂಭಗೊಳ್ಳಲಿದ್ದು, ನ.2ರಿಂದ ಪೂರ್ಣ ಪ್ರಮಾಣದ ಅವಧಿಗೆ ದೈನಂದಿನ ತರಗತಿ ಪ್ರಾರಂಭಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಗುರುವಾರ ಮಾರ್ಗಸೂಚಿ ಪ್ರಕಟಿಸಿದೆ. ರಾಜ್ಯದಲ್ಲಿ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 1ರಿಂದ 5ನೆ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಭೌತಿಕವಾಗಿ ಅ.25ರಿಂದ ಆರಂಭಿಸಲಾಗುತ್ತಿದ್ದು, ಶಾಲೆಗಳಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಪ್ರಕಟಿಸಲಾಗಿದೆ. ಶಾಲೆಗೆ ಹಾಜರಾಗುವ 6ರಿಂದ …

1ರಿಂದ 5ನೇ ತರಗತಿ ಶಾಲಾರಂಭ | ರಾಜ್ಯ ಸರಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ Read More »

ಪುತ್ತೂರು: ಅಪರಿಚಿತರಿಂದ ವಿದ್ಯಾರ್ಥಿ ಸಹಿತ ಇಬ್ಬರ ಮೇಲೆ ಹಲ್ಲೆ: ಗಾಯಾಳುಗಳು ಆಸ್ಪತ್ರೆಗೆ ದಾಖಲು

ಪುತ್ತೂರು: ಅಪರಿಚಿತ ವ್ಯಕ್ತಿಗಳಿಬ್ಬರು ಕಾಲೇಜು ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬನ ಸಹಿತ ಇಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ಗುರುವಾರ ಸಂಜೆ ಪುತ್ತೂರು ನಗರದಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಚಿಕ್ಕಮುಳ್ಳೂರು ಗ್ರಾಮದ ಸಾಲ್ಮರ ತಾರಿಗುಡ್ಡೆ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ವಿದ್ಯಾರ್ಥಿ ಮಹಮ್ಮದ್ ಝಿಯಾದ್(17) ಮತ್ತು ಜಿಡೆಕಲ್ಲು ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಮಹಮ್ಮದ್ ಇಜಾಝ್(20) ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ. ಝಿಯಾದ್ ಅವರು ಕಾಲೇಜು …

ಪುತ್ತೂರು: ಅಪರಿಚಿತರಿಂದ ವಿದ್ಯಾರ್ಥಿ ಸಹಿತ ಇಬ್ಬರ ಮೇಲೆ ಹಲ್ಲೆ: ಗಾಯಾಳುಗಳು ಆಸ್ಪತ್ರೆಗೆ ದಾಖಲು Read More »

ಭಗತ್ ಸಿಂಗ್ ಪುಸ್ತಕ ಓದುವುದು ತಪ್ಪೇ? -ವಿಠಲ ಮಲೆಕುಡಿಯ ಪ್ರಶ್ನೆ

ಭಗತ್‌ಸಿಂಗ್ ಪುಸ್ತಕ ಓದುವುದು ದೇಶದ್ರೋಹವಲ್ಲ; ಓದಬಹುದು. ವಿಚಾರಣೆ ಸಂದರ್ಭದಲ್ಲಿಯೂ ತನಿಖಾ ಅಧಿಕಾರಿಗಳು ಕೂಡ ಭಗತ್ ಸಿಂಗ್ ಪುಸ್ತಕ ಓದುವುದು ಅಥವಾ ಇಟ್ಟುಕೊಳ್ಳುವುದು ತಪ್ಪಲ್ಲ ಎಂದಿದ್ದರು. ಅರಣ್ಯವಾಸಿಗಳು ಭಗತ್‌ಸಿಂಗ್ ಪುಸ್ತಕ ಓದುವುದು ತಪ್ಪೇ? ಸಕ್ಕರೆ, ಚಹಾಪುಡಿ ಇಟ್ಟುಕೊಳ್ಳುವುದು ಅಪರಾಧವೇ ಎಂದು ಪ್ರಕರಣದ ನಿರ್ದೋಷಿ ವಿಠಲ ಮಲೆಕುಡಿಯ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದ್ದಾರೆ. 2012ರ ಮಾರ್ಚ್ 3ರಂದು ನನ್ನನ್ನು ಮತ್ತು ತಂದೆಯನ್ನು ಎಎನ್ಎಫ್ ತಂಡ ಮನೆಯಿಂದ ಬಂಧಿಸಿತ್ತು. ಅದರ ತೀರ್ಪು ಬಂದಿದ್ದು, ನಿರ್ದೋಷಿಗಳೆಂದು ಘೋಷಿಸಲಾಗಿದೆ. ಕುತ್ಲೂರು ಗ್ರಾಮವು …

ಭಗತ್ ಸಿಂಗ್ ಪುಸ್ತಕ ಓದುವುದು ತಪ್ಪೇ? -ವಿಠಲ ಮಲೆಕುಡಿಯ ಪ್ರಶ್ನೆ Read More »

ಅ.23 : ಮಾಡಾವು,ಸವಣೂರು ಉಪಕೇಂದ್ರ ವ್ಯಾಪ್ತಿಯ ವಿದ್ಯುತ್ ನಿಲುಗಡೆ

ಪುತ್ತೂರು: ಮೆಸ್ಕಾಂ ಪುತ್ತೂರು ಗ್ರಾಮಾಂತರ ಉಪವಿಭಾಗದ ಹೊಸ 11 ಕೆ.ವಿ ಲೈನ್‌ಗಳ ನಿರ್ಮಾಣ ಹಾಗೂ ಹಾಲಿ ಇರುವ 11 ಕೆ.ವಿ ಲೈನ್‌ಗಳ ನಿರ್ವಹಣಾ ಕಾಮಗಾರಿ ನಿಮಿತ್ತ ಅ.23 ರಂದು ಬೆಳಿಗ್ಗೆ 9 ರಿಂದ ಸಂಜೆ 5.30 ರವರಗೆ ವಿದ್ಯುತ್ ಅಡಚಣೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಾಡಾವು 110/33/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕೈಕಂಬ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಮಾಡಾವು, ಬಂಬಿಲ, ಕೆಯ್ಯರು, ಕಣಿಯಾರು, ಕಟ್ಟತ್ತಾರು, ಇಳಂತಾಜೆ ಹಾಗೂ 33/11 ಕೆ.ವಿ ಸವಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ …

ಅ.23 : ಮಾಡಾವು,ಸವಣೂರು ಉಪಕೇಂದ್ರ ವ್ಯಾಪ್ತಿಯ ವಿದ್ಯುತ್ ನಿಲುಗಡೆ Read More »

ಬೆಳ್ತಂಗಡಿ| ಕೆಲಸಕ್ಕೆಂದು ಹೋದ ಮಹಿಳೆ ನಾಪತ್ತೆ | ಮಗುವನ್ನು ಅತ್ತೆ ಮನೆಯಲ್ಲಿ ಬಿಟ್ಟು ನಾಪತ್ತೆಯಾದ ಗೃಹಿಣಿ

ಬೆಳ್ತಂಗಡಿ: ಗೃಹಿಣಿಯೊಬ್ಬಳು ಕೆಲಸಕ್ಕೆಂದು ಮನೆ ಬಿಟ್ಟು ಹೋಗಿದ್ದು ನಂತರ ಮನೆಗೆ ವಾಪಸ್ಸಾಗದೇ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡೂರು ಗ್ರಾಮದಲ್ಲಿ ನಡೆದಿದೆ. ನಾಪತ್ತೆಯಾದ ಮಹಿಳೆಯನ್ನು ಶಿಲ್ಪ ಎಂದು ಗುರುತಿಸಲಾಗಿದೆ. ಮಗುವನ್ನು ಅತ್ತೆಯ ಮನೆಯಲ್ಲೇ ಬಿಟ್ಟು ಅಕ್ಟೋಬರ್ 20 ರಂದು ಕೆಲಸಕ್ಕೆಂದು ಹೋದಾಕೆ ಮತ್ತೆ ಮನೆಗೆ ವಾಪಾಸ್ಸಾಗಲಿಲ್ಲ. ಊರಿನಲ್ಲಿರುವ ವಿವಿಧ ಸಂಘಗಳಲ್ಲಿ ಸಾಲ ಮಾಡಿರುವ ಈಕೆ ಫೇಸ್ ಬುಕ್ ನಲ್ಲಿ ಸಕ್ರೀಯವಾಗಿದ್ದಳು ಎಂದು ಹೇಳಲಾಗಿದೆ. ಮನೆ ಬಿಟ್ಟು ಹೋದ ದಿನ ಪಕ್ಕದ ಮನೆಯವರಿಂದ ಮದುವೆಗೆ ಹೋಗುತ್ತಿದ್ದೆನೆಂದು ಸುಳ್ಳು ಹೇಳಿ …

ಬೆಳ್ತಂಗಡಿ| ಕೆಲಸಕ್ಕೆಂದು ಹೋದ ಮಹಿಳೆ ನಾಪತ್ತೆ | ಮಗುವನ್ನು ಅತ್ತೆ ಮನೆಯಲ್ಲಿ ಬಿಟ್ಟು ನಾಪತ್ತೆಯಾದ ಗೃಹಿಣಿ Read More »

ಬಡಗನ್ನೂರು : ಅತ್ಯಾಚಾರ ಪ್ರಕರಣದ ಆರೋಪಿ ನಾರಾಯಣ ರೈ ಬಂಧಿಸದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ

ಪುತ್ತೂರು: ತಾಲೂಕಿನ ಬಡಗನ್ನೂರು ಎಂಬಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮತ್ತು ವೈದ್ಯಾಧಿಕಾರಿಗಳು ನೈಜತೆಯನ್ನು ಮರೆಮಾಚಿದ್ದು, ಪ್ರಕರಣದ ನೈಜ ಆರೋಪಿಯನ್ನು ಈತನಕ ಬಂಧಿಸಿಲ್ಲ. ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮೊಗೇರ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ ಅವರು ಎಚ್ಚರಿಸಿದ್ದಾರೆ. ಅವರು ಗುರುವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಕರಣಕ್ಕೆ ಸಂಬಂಧಿಸಿ ಈತನಕ ಯಾವುದೇ ಸ್ಪಂಧನೆ ದೊರಕಿಲ್ಲ. ಇಲ್ಲಿನ ಶಾಸಕರು,ಕೂಡಾ ಈ ಬಗ್ಗೆ ಯಾವುದೇ ಪರಿಶೀಲನೆ …

ಬಡಗನ್ನೂರು : ಅತ್ಯಾಚಾರ ಪ್ರಕರಣದ ಆರೋಪಿ ನಾರಾಯಣ ರೈ ಬಂಧಿಸದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ Read More »

ಮಂಗಳೂರು: ನವೆಂಬರ್ 8 ರಂದು ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ!! ಕಳೆದ ಬಾರಿ ನೀಡಬೇಕಾಗಿದ್ದ ಪ್ರಶಸ್ತಿ ಮಹಾಮಾರಿಯಿಂದಾಗಿ ಮುಂದೂಡಲ್ಪಟ್ಟು ಈ ಬಾರಿ ಪ್ರಧಾನ

ಕಿತ್ತಳೆ ಮಾರಿ ತನ್ನ ಸಂಸಾರ ನಿಭಾಯಿಸುವುದರೊಂದಿಗೆ ತನ್ನೂರಿನ ಮಕ್ಕಳ ವಿದ್ಯಾರ್ಜನೆಗಾಗಿ ವಿದ್ಯಾ ದೇಗುಲವನ್ನೇ ನಿರ್ಮಿಸಿದ ಉದಾರ ದಾನಿ,ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ 2020ನೇ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ನವಂಬರ್ 8ರಂದು ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಗೌರವ ಸ್ವೀಕರಿಸಲಿದ್ದಾರೆ. ನವೆಂಬರ್ ನಲ್ಲಿ ನವದೆಹಲಿಗೆ ಆಗಮಿಸುವಂತೆ ಹರೇಕಳ ಹಾಜಬ್ಬಗೆ ಪತ್ರ ಬಂದಿದ್ದು,ಈ ಹಿನ್ನೆಲೆಯಲ್ಲಿ ತನ್ನ ಸಹಾಯಕra ಜೊತೆ ಹಾಜಬ್ಬ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ನವಂಬರ್ 8ರಂದು ದೆಹಲಿಗೆ ತಲುಪಿ …

ಮಂಗಳೂರು: ನವೆಂಬರ್ 8 ರಂದು ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ!! ಕಳೆದ ಬಾರಿ ನೀಡಬೇಕಾಗಿದ್ದ ಪ್ರಶಸ್ತಿ ಮಹಾಮಾರಿಯಿಂದಾಗಿ ಮುಂದೂಡಲ್ಪಟ್ಟು ಈ ಬಾರಿ ಪ್ರಧಾನ Read More »

ನಕ್ಸಲ್ ಸಂಬಂಧ ಆರೋಪ | ಬೆಳ್ತಂಗಡಿಯ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ

ಬೆಳ್ತಂಗಡಿ :ನಕ್ಸಲ್ ಸಂಪರ್ಕದ ಆರೋಪ ಹೊರಿಸಿ, ನಕ್ಸಲ್ ನಿಗ್ರಹ ದಳದ ಪೊಲೀಸರಿಂದ ದಶಕಗಳ ಹಿಂದೆ ಬಂಧಿತನಾಗಿದ್ದ ಪತ್ರಿಕೋದ್ಯಮ ವಿದ್ಯಾರ್ಥಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ ವಿಠಲ ಮಲೆಕುಡಿಯ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಮೂರನೇ ಹೆಚ್ಚುವರಿ ನ್ಯಾಯಾಲಯವು ಇದೀಗ ಇಬ್ಬರನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ. ಬೆಳ್ತಂಗಡಿ ತಾಲೂಕಿನ ಕೂಡ್ಲುರು ನಿವಾಸಿ ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ನಿರ್ದೋಷಿಗಳು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಬಿ ಜಕಾತಿ ಈ ತೀರ್ಪು …

ನಕ್ಸಲ್ ಸಂಬಂಧ ಆರೋಪ | ಬೆಳ್ತಂಗಡಿಯ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ Read More »

ಉಳ್ಳಾಲ:ಪೊಲೀಸರ ಮೇಲೆಯೇ ತಲವಾರು ಬೀಸಿ ಕೊಲೆಗೆ ಯತ್ನಿಸಿದ ಆರೋಪಿ!!ವಾರಂಟ್ ಹಿಡಿದು ಬಂಧಿಸಲು ತೆರಳಿದ್ದ ವೇಳೆ ನಡೆದ ಘಟನೆ

ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಪೊಲೀಸರ ಬಲೆಗೆ ಸಿಗದೇ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ವಾರಂಟ್ ಮೇಲೆ ಬಂಧಿಸಲು ತೆರಳಿದ್ದಾಗ ಪೊಲೀಸರಾ ಮೇಲೆಯೇ ತಲವಾರು ಬೀಸಿ ಕೊಲೆಗೆ ಯತ್ನಿಸಿ ತಪ್ಪಿಸಿಕೊಂಡು ಪರಾರಿಯಾದ ಘಟನೆ ಮೇಲೆಯ ಧರ್ಮ ನಗರ ನಿವಾಸಿ ಮುಕ್ತಾರ್ ಅಹ್ಮದ್ ಎಂಬಾತನನ್ನು ವಶಕ್ಕೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ. ಆರೋಪಿ ಮುಕ್ತಾರ್ ತಲವಾರು ಬೀಸಿ ಕೊಲೆಗೆ ಯತ್ನಿಸಿ ಪರಾರಿಯಾದರೆ, ಆತ ಪರಾರಿಯಾಗಲು ಸಹಕರಿಸಿದ ಇನ್ನೊಬ್ಬನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧರ್ಮನಗರ ನಿವಾಸಿ ಕ್ರಿಮಿನಲ್ ಆರೋಪಿಯಾಗಿದ್ದ ಮುಕ್ತಾರ್ ಅಹ್ಮದ್ ಎಂಬಾತನ ಬಂಧನಕ್ಕಾಗಿ …

ಉಳ್ಳಾಲ:ಪೊಲೀಸರ ಮೇಲೆಯೇ ತಲವಾರು ಬೀಸಿ ಕೊಲೆಗೆ ಯತ್ನಿಸಿದ ಆರೋಪಿ!!ವಾರಂಟ್ ಹಿಡಿದು ಬಂಧಿಸಲು ತೆರಳಿದ್ದ ವೇಳೆ ನಡೆದ ಘಟನೆ Read More »

error: Content is protected !!
Scroll to Top