ಕಡಿಮೆ ಬೆಲೆಗೆ ‘ಆಸ್ತಿ ಖರೀದಿ’ಗೆ ಸಿದ್ದವಾಗಿದೆ ಈ ವೇದಿಕೆ | ಎಸ್.ಬಿ.ಐ ಬ್ಯಾಂಕ್ ನಿಂದ ನಡೆಯಲಿದೆ ಆಸ್ತಿ ಹರಾಜು ಪ್ರಕ್ರಿಯೆ

ಎಲ್ಲರಿಗೂ ಜೀವನದಲ್ಲಿ ಒಳ್ಳೆಯ ರೀತಿಯಲ್ಲಿ ಸೆಟ್ಲ್ ಆಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಆಸ್ತಿ ಖರೀದಿ, ಹಣ ಹೂಡಿಕೆ ಎಲ್ಲವನ್ನೂ ಮಾಡುತ್ತೇವೆ. ಇದೀಗ ಆಸ್ತಿ ಖರೀದಿ ಮಾಡಲು ಉತ್ತಮ ವೇದಿಕೆಯೊಂದು ಸಜ್ಜಾಗಿದೆ.

ಹೌದು, ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್.ಬಿ.ಐ ಆಸ್ತಿಗಳನ್ನು ಹರಾಜಿಗೆ ಇಡಲಿದ್ದು, ಒಳ್ಳೆಯ ಬೆಲೆಯಲ್ಲಿ ಆಸ್ತಿ ಖರೀದಿ ಮಾಡಲು ಆಸಕ್ತರಿಗೆ ಅವಕಾಶ ಸೃಷ್ಟಿಯಾಗಿದೆ. ವಿವಿಧ ರೀತಿಯ ಆಸ್ತಿಗಳನ್ನು ತಾನು ಹರಾಜಿಗೆ ಇಡುವುದಾಗಿ ಎಸ್.ಬಿ.ಐ. ಟ್ವಿಟ್ ಮಾಡಿದೆ.

ಅಕ್ಟೋಬರ್ 25ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಇದೇ ವಿಚಾರವನ್ನು ಜಾಹೀರಾತುಗಳ ಮೂಲಕ ಎಸ್.ಬಿ.ಐ. ತಿಳಿಸಿದೆ. ಎಲ್ಲ ರೀತಿಯ ಆಸ್ತಿಗಳು, ಭದ್ರತೆಗಳು ಹಾಗೂ ಮುಟ್ಟುಗೋಲು ಹಾಕಲಾದ ವಸ್ತುಗಳು ಇರಲಿವೆ.

ಎಸ್.ಬಿ.ಐ. ಜಾಲತಾಣದಲ್ಲಿ ತಿಳಿಸಿದಂತೆ ಎಸ್.ಬಿ.ಐ.ನ ಇ ಹರಾಜಿನಲ್ಲಿ ಭಾಗಿಯಾಗಲು ಬೇಕಾದ ದಾಖಲೆಗಳು: –

*ಇ-ಹರಾಜಿನ ನೊಟೀಸ್‌ನಲ್ಲಿ ನಮೂದಿಸಿರುವ ನಿರ್ದಿಷ್ಟ ಆಸ್ತಿಯ ಇಎಂಡಿ.
*ಕೆವೈಸಿ ದಾಖಲೆಗಳು – ಸಂಬಂಧಪಟ್ಟ ಶಾಖೆಯಲ್ಲಿ ಸಲ್ಲಿಸಬೇಕು.
*ಸಿಂಧುವಾದ ಡಿಜಿಟಲ್ ಸಹಿ – ಬಿಡರ್‌ಗಳು ಇ ಹರಾಜುದಾರರು ಅಥವಾ ಅನುಮೋದಿಸಲ್ಪಟ್ಟ ಏಜೆನ್ಸಿಯಿಂದ ಡಿಜಿಟಲ್ ಸಹಿ.
*ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ – ಇಎಂಡಿ ಹಾಗೂ
ಕೆವೈಸಿ ದಾಖಲೆಗಳನ್ನು ಸಂಬಂಧಪಟ್ಟ ಶಾಖೆಗೆ ಸಲ್ಲಿಸಿದ ಬಳಿಕ ನಿಮ್ಮ ಇ-ಮೇಲ್ ಐಡಿಗೆ ಕಳುಹಿಸಲಾಗುವುದು. *ಹರಾಜಿನ ವೇಳೆ ನಿಯಮಗಳ ಅನುಸಾರ ಬಿಡ್ಡರ್‌ಗಳು ಲಾಗಿನ್ ಆಗಬೇಕು. ಆಸ್ತಿಗಳ ಹರಾಜು ಸಂಪೂರ್ಣವಾಗಿ ಆನ್ಸೆನ್ ಇರಲಿದೆ.

ನೀವೂ ಸಹ ಬಿಡ್‌ನಲ್ಲಿ ಭಾಗಿಯಾಗುವ ಇಚ್ಛೆಯಿದ್ದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ ಮೂಲಕ ಮೊದಲು ನೋಂದಣಿಯಾಗಬೇಕು.

ಪ್ರಕ್ರಿಯೆ ಪೂರ್ಣವಾದಲ್ಲಿ ಆಸ್ಟ್ರೇನ್ ಚಲನ್ ಭರ್ತಿಯಾಗಲಿದ್ದು, ಇದಾದ ನಂತರವಷ್ಟೇ ನೀವು ಆನೈನ್ ಬಿಡ್‌ನಲ್ಲಿ ಭಾಗಿಯಾಗಬಹುದು. ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಮಂದಿಯ ಆಸ್ತಿಗಳನ್ನು ಹರಾಜಿಗೆ ಇಡಲಾಗುವುದು.

Leave A Reply

Your email address will not be published.