ಮಕ್ಕಳು ತಪ್ಪು ಮಾಡಿದ್ರೆ ಅಪ್ಪ-ಅಮ್ಮನಿಗೆ ಶಿಕ್ಷೆ, ಇನ್ಮೇಲೆ. ತಂದೆ ತಾಯಿಯಂದಿರೆ ಎಚ್ಚರ!!!

ಅಪ್ರಾಪ್ತ ವಯಸ್ಕರು, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಾತ್ರ ಕೇವಲ ಒಂದು ಗಂಟೆಗಳ ಕಾಲ ಆನ್‍ಲೈನ್ ಆಟಗಳನ್ನು ಆಡುವ ಅವಕಾಶ ಇದೆ.ಚಿಕ್ಕ ಮಕ್ಕಳ ತಪ್ಪು ಮಾಡಿದರೆ ಕ್ಷಮಿಸಿ ಸುಮ್ಮನಾಗುವುದು ಸಾಮಾನ್ಯ. ಆದರೆ ಚೀನದಲ್ಲಿ ಮಾತ್ರ ಇನ್ನು ಮುಂದೆ ಹಾಗೆ ಮಾಡುವಂತಿಲ್ಲ..! ಚಿಕ್ಕ ಮಕ್ಕಳು ತಪ್ಪು ಮಾಡಿದರೆ ಅದಕ್ಕೆ ಹೆತ್ತವರು ಬೆಲೆ ತೆರಬೇಕಾಗುತ್ತದೆ.

Ad Widget

ಚೀನಾದಲ್ಲಿ ಚಿಕ್ಕ ಮಕ್ಕಳು “ಅತ್ಯಂತ ಕೆಟ್ಟ ನಡವಳಿಕೆ ಪ್ರದರ್ಶಿಸಿದರೆ ಅಥವಾ ಅಪರಾಧಗಳನ್ನು ಮಾಡಿದರೆ, ಅವರ ಹೆತ್ತವರಿಗೆ ದಂಡನೆ ವಿಧಿಸುವ ಶಾಸನವನ್ನು ಅಲ್ಲಿನ ಸಂಸತ್ತು ಪರಿಗಣಿಸಲಿದೆ. ಚೀನಾದಲ್ಲಿ ಚಿಕ್ಕ ಮಕ್ಕಳು ತಪ್ಪು ಮಾಡಿದರೆ, ಅವರ ಹೆತ್ತವರು ಸರಕಾರ ಮಾಡಿರುವ ಕಾನೂನಿನ ಮೂಲಕ ಬುದ್ಧಿವಾದ ಹೇಳಿಸಿಕೊಳ್ಳಬೇಕಾಗುತ್ತದೆ.

Ad Widget . . Ad Widget . Ad Widget . Ad Widget

Ad Widget

ಹೌದು, ಚೀನಾದ ಕುಟುಂಬ ಶಿಕ್ಷಣ ಉತ್ತೇಜನಾ ಕಾನೂನಿನ ಕರಡು ಪ್ರತಿಯಲ್ಲಿ, ಒಂದು ವೇಳೆ ಪ್ರಾಸಿಕ್ಯೂಟರ್‌ಗಳು, ಹೆತ್ತವರ ಆರೈಕೆಯಲ್ಲಿರುವ ಮಕ್ಕಳಲ್ಲಿ ಕೆಟ್ಟ ಅಥವಾ ಅಪರಾಧದ ವರ್ತನೆಯನ್ನು ಕಂಡು ಹಿಡಿದರೆ, ಅಂತಹ ಮಕ್ಕಳ ಹೆತ್ತವರನ್ನು ಖಂಡಿಸಲಾಗುತ್ತದೆ ಮತ್ತು ಕುಟುಂಬ ಶಿಕ್ಷಣ ಮಾರ್ಗದರ್ಶನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಆದೇಶ ನೀಡಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ

Ad Widget
Ad Widget Ad Widget

.ಹದಿಹರೆಯದ ವಯಸ್ಸಿನ ಮಕ್ಕಳು ತಪ್ಪಾಗಿ ವರ್ತಿಸಲು ಹಲವಾರು ಕಾರಣಗಳಿವೆ ಮತ್ತು ಅದಕ್ಕೆ ಅನುಚಿತ ಕುಟುಂಬ ಶಿಕ್ಷಣದ ಕೊರತೆಯೇ ಮುಖ್ಯ ಕಾರಣ ಎಂದು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್‍ಪಿಸಿ) ಅಡಿಯಲ್ಲಿರುವ ಶಾಸಕಾಂಗ ವ್ಯವಹಾರಗಳ ಆಯೋಗದ ವಕ್ತಾರ ಜ್ಯಾಂಗ್ ಟೈವೇ ಹೇಳಿದರು.

ಈ ವಾರ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‍ನ ಸ್ಥಾಯಿ ಸಮಿತಿ ಅಧಿವೇಶನದಲ್ಲಿ ಕುಟುಂಬ ಶಿಕ್ಷಣ ಉತ್ತೇಜನಾ ಕಾನೂನುನಿನ ಕರಡನ್ನು ವಿಮರ್ಶಿಸಲಾಗುವುದು. ಹೆತ್ತವರು ತಮ್ಮ ಮಕ್ಕಳು ವಿಶ್ರಾಂತಿ ಪಡೆಯಲು, ಆಟವಾಡಲು ಮತ್ತು ವ್ಯಾಯಾಮ ಮಾಡಲು ಸಮಯದ ವ್ಯವಸ್ಥೆ ಮಾಡಿಕೊಡಬೇಕು ಎಂದು ಈ ಕರಡು ಒತ್ತಾಯಿಸಿದೆ. ಯುವಜನರ ಪಾಲಿಗೆ “ಸ್ಪಿರಿಚುವಲ್ ಅಫೀಮ್” ಎಂದು ಕರೆಯಲ್ಪಡುವ ಆನ್‍ಲೈನ್ ಆಟಗಳ ಚಟದಿಂದ ಹಿಡಿದು ಇಂಟರ್‌ನೆಟ್‌ ಸೆಲೆಬ್ರಿಟಿಗಳ ಬಗೆಗಿನ ಅಂಧ ಭಕ್ತಿಯನ್ನು ನಿಗ್ರಹಿಸುವವರೆಗೆ, ಬೀಜಿಂಗ್ ಈ ವರ್ಷ ಹೆಚ್ಚು ದೃಢವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.

ಕೆಲವು ತಿಂಗಳಿಂದ, ಶಿಕ್ಷಣ ಸಚಿವಾಲಯವು, ಅಪ್ರಾಪ್ತ ವಯಸ್ಕರಿಗೆ ಸೀಮಿತ ಗೇಮಿಂಗ್ ಸಮಯವನ್ನು ನಿಗದಿಪಡಿಸಿದೆ. ಚೀನಾದ ಶಿಕ್ಷಣ ಸಚಿವಾಯದ ಆದೇಶ ಪ್ರಕಾರ, ಅಪ್ರಾಪ್ತ ವಯಸ್ಕರು, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಾತ್ರ ಕೇವಲ ಒಂದು ಗಂಟೆಗಳ ಕಾಲ ಆನ್‍ಲೈನ್ ಆಟಗಳನ್ನು ಆಡುವ ಅವಕಾಶ ಈ ಮಕ್ಕಳ ಮೇಲೆ ಹೆಚ್ಚಿನ ಶೈಕ್ಷಣಿಕ ಹೊರೆ ಬೀಳುವ ಬಗ್ಗೆ ಕಾಳಜಿ ವಹಿಸಿರುವ ಚೀನಾ ಶಿಕ್ಷಣ ಸಚಿವಾಲಯವು , ಹೋಮ್ ವರ್ಕ್‍ಗಳನ್ನು ಕೂಡ ಕಡಿತಗೊಳಿಸಿದೆ ಮತ್ತು ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಪ್ರಮುಖ ಪಠ್ಯ ವಿಷಯಗಳ ಶಾಲಾ ಅವಧಿಯ ನಂತರದ ಬೋಧನೆಯನ್ನು ನಿಷೇಧಿಸಿದೆ.

ಚೀನಾ ಶಿಕ್ಷಣ ಸಚಿವಾಲಯವು, ಡಿಸೆಂಬರ್‌ನಲ್ಲಿ ಪ್ರಕಟಿಸಲಾದ, ಹದಿಹರೆಯದ ಹುಡುಗರಲ್ಲಿ ಸ್ತ್ರೀ ಪರಿವರ್ತನೆಯನ್ನು ತಡೆಯುವ ಪ್ರಸ್ತಾವನೆ ಎಂಬ ದಾಖಲೆಯಲ್ಲಿ, ಶಾಲೆಗಳಲ್ಲಿ ಸಾಕರ್‌ನಂತಹ ಕ್ಯಾಂಪಸ್ ಕ್ರೀಡೆಗಳನ್ನು ಉತ್ತೇಜಿಸುವಂತೆ ಒತ್ತಾಯಿಸಿದೆ.

Leave a Reply

error: Content is protected !!
Scroll to Top
%d bloggers like this: