ಶಾಂತಿಗೋಡು:ಕೋಳಿ ಅಂಕಕ್ಕೆ ದಾಳಿ, ಇಬ್ಬರ ಬಂಧನ, ಎರಡು ಕೊಳಿ,ನಗದು ವಶ

ಪುತ್ತೂರು:ಗುಡ್ಡವೊಂದರಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪುತ್ತೂರು ನಗರ ಠಾಣಾ ಎಸ್.ಐ ಸುತೇಶ್ ನೇತೃತ್ವದ ಪೊಲೀಸರು ಇಬ್ಬರನ್ನು ಬಂಧಿಸಿ, 2ಕೋಳಿ ಹಾಗೂ ರೂ.700 ನಗದನ್ನು ವಶಪಡಿಸಿಕೊಂಡಿರುವ ಘಟನೆ ಅ.17ರಂದು ಶಾಂತಿಗೋಡು ಗ್ರಾಮದ ಪಜಿರೋಡಿ ಎಂಬಲ್ಲಿ ನಡೆದಿದೆ.

ಶಾಂತಿಗೋಡು ಗ್ರಾಮದ ಕಲ್ಕಾರ್ ನಿವಾಸಿಗಳಾದ ಕೇಶವ ಗೌಡ ಹಾಗೂ ಈರಪ್ಪ ಪೂಜಾರಿ ಬಂಧಿತ ಆರೋಪಿಗಳು, ಶಾಂತಿಗೋಡು ಪಜಿರೋಡಿ ಎಂಬಲ್ಲಿ ಗುಡ್ಡವೊಂದರಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅಂಕದಲ್ಲಿ ನಿರತರಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಕೋಳಿ ಅಂಕಕ್ಕೆ ಬಳಸಲಾದ ಎರಡು ಕೋಳಿ ಹಾಗೂ ರೂ. 700ರನ್ನು ವಶಪಡಿಸಿಕೊಂಡಿರುತ್ತಾರೆ. ಎಸ್.ಐ. ಸುತೇಶ್,ಸಿಬಂದಿಗಳಾದ ರಾಜೇಶ್ ಹಾಗೂ ಸುಬ್ರಹಣ್ಯ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.

Leave a Reply

error: Content is protected !!
Scroll to Top
%d bloggers like this: