ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ಯುವತಿಯ ಭರ್ಜರಿ ಡ್ಯಾನ್ಸ್ | ಯುವತಿಯ ನೃತ್ಯಕ್ಕೆ ಮನಸೋತ ನೆಟ್ಟಿಗರು

ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮೂಲಕ ವೈರಲ್ ಆಗಲು ಇದೀಗ ಯುವಜನತೆ ತುದಿಗಾಲಲ್ಲಿ ಕಾದು ಕುಳಿತಿರುತ್ತದೆ. ವೈರಲ್ ಆಗಲು ಹೊಸದಾದ ಈ ಮಂದಿ ಯೋಜನೆಗಳನ್ನು ಹುಡುಕುತ್ತಲೇ ಇರುತ್ತಾರೆ. ಕೆಲವರು ಕೆಲ ಸವಾಲುಗಳನ್ನು ನೀಡುವ ಮೂಲಕ ವೈರಲ್ ಆದರೆ ಇನ್ನೂ ಕೆಲವರು ರಿಸ್ಕ್ ತೆಗೆದುಕೊಂಡು ಕೆಲವು ಸ್ಥಳಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ವೈರಲ್ ಆಗುತ್ತಾರೆ.

Ad Widget

ಕಳೆದ ತಿಂಗಳಷ್ಟೇ ಯುವತಿಯೊಬ್ಬಳು ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈಲರ್ ಆಗಿದ್ದಳು. ಸದ್ಯ ಮತ್ತೋರ್ವ ಯುವತಿ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ನೃತ್ಯ ಮಾಡುವ ಮೂಲಕ ಭರ್ಜರಿ ಟ್ರೋಲ್ ಆಗಿದ್ದಾಳೆ.

Ad Widget . . Ad Widget . Ad Widget . Ad Widget

Ad Widget

ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ‘ಸಾತ್ ಸಮುಂದರ್ ಪಾರ್‌’ ಹಾಡಿಗೆ ಯುವತಿ ಮೈ ಚಳಿಬಿಟ್ಟು ಕುಣಿದಿದ್ದಾಳೆ. ಹುಡುಗಿಯ ಡ್ಯಾನ್ಸ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸಹೇಲಿ ರುದ್ರ ಎನ್ನುವ ಯುವತಿ ಇನ್‌ಸ್ಟಾಗ್ರಾಮ್ ನಲ್ಲಿ ವೈರಲ್ ಆಗಲು ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ‘ಸಾತ್ ಸಮುಂದರ್ ಪರ್’ ರೀಮಿಕ್ಸ್ ಟ್ರ್ಯಾಕ್‌ಗೆ ನೃತ್ಯ ಮಾಡುವುದನ್ನು ನೋಡಬಹುದು. ಈ ವಿಡಿಯೋ 25 ಮಿಲಿಯನ್ ವೀಕ್ಷಣೆಗಳನ್ನು, 1.5 ಮಿಲಿಯನ್ ಲೈಕ್ಸ್ ಮತ್ತು 18.8K ಕಾಮೆಂಟ್‌ಗಳನ್ನು ಹೊಂದಿದೆ.

Ad Widget
Ad Widget Ad Widget

ಸಹೇಲಿ ರುದ್ರ ತನ್ನ ಲವಲವಿಕೆಯ ನೃತ್ಯದ ಮೂಲಕ ನೋಡುಗರನ್ನು ಸೆಳೆದಿದ್ದಾಳೆ. ವಿಡಿಯೋದಲ್ಲಿ ಮುಖವಾಡವನ್ನು ಧರಿಸಿದ್ದ ಸಹೇಲಿಯಾಳ ಅದ್ಭುತ ನೃತ್ಯ ಕೌಶಲ್ಯವನ್ನು ನೋಡಲು ಸುತ್ತಮುತ್ತಲಿನ ಜನರು ಸೇರಿರುವುದು ಕಾಣಬಹುದು. ಸಾತ್ ಸಮುಂದರ್ ಪಾರ್ ಹಾಡು ವಿಶ್ವಾತ್ಮ ಚಿತ್ರದ್ದು. ಇದರಲ್ಲಿ ನಟಿ ದಿವ್ಯಾ ಭಾರತಿ ನಟಿಸಿದ್ದಾರೆ.

ಯುವತಿ ಡ್ಯಾನ್ಸ್ ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಆಕೆಯ ನೃತ್ಯ ಕೌಶಲ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಬೇಜವಾಬ್ದಾರಿತನ ಎಂದು ಹೇಳಿದ್ದಾರೆ.

ಒಂದು ತಿಂಗಳ ಹಿಂದೆಯಷ್ಟೇ ಇನ್ಸ್ಟಾಗ್ರಾಂ ನಲ್ಲಿ ಶ್ರೇಯಾ ಕುಲ್ರಾ ವಾಹನ ಚಲಿಸುತ್ತಿರುವ ರಸ್ತೆ ಮಧ್ಯೆದಲ್ಲಿ ನಿಂತು ಡ್ಯಾನ್ಸ್ ಮಾಡುವ ಮೂಲಕ ವಿಡಿಯೋ ಹರಿಬಿಟ್ಟಿದ್ದಳು. ಸೋಷಿಯಲ್ ಮಿಡಿಯಾದಲ್ಲಿ ಚಾಲೆಂಜ್ ಸ್ವೀಕರಿಸಿದ ಯುವತಿ ಮಧ್ಯಪ್ರದೇಶದ ಇಂದೋರ್ ರಸ್ತೆಯಲ್ಲಿ ನೃತ್ಯ ಮಾಡಿದ್ದಳು. ವಿಡಿಯೋದಲ್ಲಿ ಶ್ರೇಯಾ ಟ್ರಾಫಿಕ್ ಸಿಗ್ನಲ್ ಬಿದ್ದಾಕ್ಷಣ ರಸ್ತೆಯ ಮಧ್ಯೆದಲ್ಲಿ ನಿಂತು ನೃತ್ಯ ಮಾಡಿದ್ದಾಳೆ.

ಶ್ರೇಯಾ ವಿಡಿಯೋ ವೈರಲ್ ಆಗುತ್ತಿದ್ದಂತೆ ಟ್ರಾಫಿಕ್ ಪೊಲೀಸರು ಆಕೆಯ ವಿರುದ್ಧ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ನೋಟಿಸ್ ಜಾರಿ ಮಾಡಿದ್ದರು. ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಘಟನೆಯ ಕುರಿತಾಗಿ ನಿರಾಶೆ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕೆ ಆದೇಶಿದ್ದರು. ಯುವತಿಯ ಉದ್ದೇಶ ಏನೇ ಇದ್ದರೂ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಆಕೆಯ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.

ಕೋಲ್ಕತ್ತಾದ ಸಾಮಾಜಿಕ ಮಾಧ್ಯಮ ಪ್ರಭಾವಿ ಸ್ಯಾಂಡಿ ಸಾಹಾ ಅವರು ಫ್ಲೈಓವರ್ ನಲ್ಲಿ ನೃತ್ಯ ಮಾಡಿ ಈ ಹಿಂದೆ ವಿಡಿಯೋ ಹರಿಬಿಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿತ್ತು. 3 ನಿಮಿಷ 38 ಸೆಕೆಂಡುಗಳ ಕ್ಲಿಪ್ ನಲ್ಲಿ ಸಾಹಾ ‘ಮೇನ್ ಆಯೂ ಹೂನ್ ಯುಪಿ ಬಿಹಾರ್ ಲೂಟ್ನೆ’ ಹಾಡಿಗೆ ನೃತ್ಯ ಮಾಡಿದ್ದರು.

ಹೀಗೆ ಹಲವು ಮಂದಿ ನಿಯಮ ಪಾಲಿಸಿ ಅಥವಾ ನಿಯಮ ಉಲ್ಲಂಘಿಸಿ ಈ ರೀತಿ ವೈರಲ್ ಆಗುತ್ತಿದ್ದಾರೆ. ಆದರೆ ನೆಟ್ಟಿಗರಿಗೆ ಮಾತ್ರ ಯಾವತ್ತೂ ಈ ರೀತಿಯ ವಿಡಿಯೋಗಳ ಬಾಡೂಟವೇ ಸಿಗುತ್ತದೆ. ತಮಗೆ ಇಷ್ಟವಾದ ವೀಡಿಯೋಗೆ ಮೆಚ್ಚುಗೆಯ ಕಾಮೆಂಟ್ ಹಾಕುತ್ತಾ, ಟೈಂಪಾಸ್ ಅಂತು ಮಾಡುತ್ತಾರೆ.

Leave a Reply

error: Content is protected !!
Scroll to Top
%d bloggers like this: