ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಆನ್‌ಲೈನ್ ವಂಚನೆ ಪ್ರಕರಣಗಳ ಸಂಖ್ಯೆ | ನೀವೂ ಕೂಡ ಈ ರೀತಿಯ ವಂಚನೆಗೊಳಗಾಗಿದ್ದೀರಾ? | ಕಳೆದುಕೊಂಡ ಹಣ ವಾಪಸ್ಸು ಪಡೆಯಲು ಈ ವಿಧಾನ ಅನುಸರಿಸಿ

ಇತ್ತೀಚಿನ ದಿನಗಳಲ್ಲಿ, ಆನ್‌ಲೈನ್ ವಂಚನೆ ಪ್ರಕರಣಗಳ ಬಗ್ಗೆ ಪ್ರತಿದಿನ ಕೇಳಲಾಗುತ್ತದೆ. ಅದಲ್ಲದೆ ಆನ್‌ಲೈನ್ ವಂಚನೆಗೊಳಗಾಗುತ್ತಿರುವ ಸಂಖ್ಯೆಯೂ ಹೆಚ್ಚಾಗಿದೆ.
ವಿಶೇಷವಾಗಿ ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್ ವಂಚನೆಯಂತಹ ಸೈಬರ್ ಅಪರಾಧ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಒಂದು ವರದಿಯ ಪ್ರಕಾರ, ಕಳೆದ 1 ವರ್ಷದಲ್ಲಿಯೇ 2.7 ಕೋಟಿಗೂ ಹೆಚ್ಚು ಜನರು ಸೈಬರ್ ವಂಚಕರ ಗುರಿಯಾಗಿದ್ದಾರೆ.

ವೈಯಕ್ತಿಕ ಮಾಹಿತಿಯನ್ನು ಕದಿಯುವ ಮೂಲಕ ವಂಚನೆ :

ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಹೊರತೆಗೆಯುವ ಮೂಲಕ ಸೈಬರ್ ಕಳ್ಳರು ಜನರ ಖಾತೆಯಿಂದ ಹಣವನ್ನು ನಿರ್ಭಯವಾಗಿ ಕದಿಯುತ್ತಿದ್ದಾರೆ. ಆನ್‌ಲೈನ್ ವಂಚನೆಯಲ್ಲಿ ಹಣದ ಕಳ್ಳತನವು ತುಂಬಾ ಗಂಭೀರವಾಗಿದೆ. ಏಕೆಂದರೆ ಖಾತೆಯಿಂದ ಹಣ ಕಳ್ಳತನವಾದರೆ, ಮತ್ತೆ ಅದನ್ನು ಮರಳಿ ಪಡೆಯಲು ಯಾವುದೇ ಆಯ್ಕೆ ಇರುವುದಿಲ್ಲ. ಆನ್ಲೈನ್ ​​ವಂಚನೆಗಳನ್ನು ತಪ್ಪಿಸಲು ನೀವು ಅನುಸರಿಸಬಹುದಾದ ಕೆಲವು ಸುಲಭ ಹಂತಗಳಿವೆ. ಇದಲ್ಲದೇ, ಒಂದು ವೇಳೆ ಆನ್‌ಲೈನ್ ವಂಚನೆಗೆ ಬಲಿಯಾಗಿದ್ದರೂ, ಕಳೆದುಕೊಂಡ ಹಣವನ್ನು ಮತ್ತೆ ಪಡೆಯಬಹುದು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಹೀಗಾಗುತ್ತದೆ ವಂಚನೆ :

ಅಂತರ್ಜಾಲದಲ್ಲಿ ವಂಚನೆ ನಡೆಸಲು, ಹ್ಯಾಕರ್‌ಗಳು ನಕಲಿ ವೆಬ್‌ಸೈಟ್‌ಗಳನ್ನು ರಚಿಸುತ್ತಾರೆ. ಅದು ಸಂಪೂರ್ಣವಾಗಿ ಅಸಲಿಯಂತೆಯೇ ಕಾಣಿಸುತ್ತದೆ. ಬ್ಯಾಂಕಿನ ನಿಯಮಗಳ ಪ್ರಕಾರ, ಇಂತಹ ವಂಚನೆಯ ಜಾಲಕ್ಕೆ ಸಿಲುಕಿ, ಹಣ ಕಳೆದುಕೊಂಡರೆ ಆ ಹಣವನ್ನು ಮರಳಿ ಪಡೆಯಬಹುದು. ಇದಕ್ಕಾಗಿ, ಬ್ಯಾಂಕ್ ಖಾತೆದಾರರು ತಕ್ಷಣವೇ ಆ ವಹಿವಾಟಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಬ್ಯಾಂಕಿಗೆ ನೀಡಬೇಕು.

ಏನು ಹೇಳುತ್ತದೆ ಆರ್‌ಬಿಐ ?

ಆರ್‌ಬಿಐ (RBI) ಪ್ರಕಾರ, ನೀವು ಆನ್ಲೈನ್ ಮೋಸಕ್ಕೆ ಒಳಗಾದರೆ ತಕ್ಷಣ ಬ್ಯಾಂಕಿಗೆ ಈ ಬಗ್ಗೆ ಮಾಹಿತಿ ನೀಡಿದರೆ, ನಿಮಗೆ ಆಗಬಹುದಾದ ನಷ್ಟವನ್ನು ತಪ್ಪಿಸಬಹುದು.

ಹಣ ವಾಪಸ್ ಪಡೆಯುವುದು ಹೇಗೆ ?

ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹಣಕಾಸು ವಂಚನೆ ವಿಮೆಯನ್ನು ಹೊಂದಿವೆ. ಹಣ ವರ್ಗಾವಣೆಯ ಸಮಯದಲ್ಲಿ ವಂಚನೆಯಾಗಿದ್ದರೆ, ಗ್ರಾಹಕರು ತಕ್ಷಣವೇ ತಮ್ಮ ಬ್ಯಾಂಕ್‌ಗೆ ಮಾಹಿತಿ ನೀಡಬೇಕು. ಬ್ಯಾಂಕಿಗೆ ಸೂಚನೆ ನೀಡಿದ ನಂತರ, ವಂಚನೆಯ ಬಗ್ಗೆ ತಕ್ಷಣವೇ ವಿಮಾ ಕಂಪನಿಗೆ ವರದಿ ಮಾಡಲಾಗುತ್ತದೆ. ಈ ರೀತಿಯಾಗಿ ನಿಮ್ಮ ಹಣವನ್ನು ಪಡೆಯಬಹುದು.

ತಡವಾಗಿ ತಿಳಿಸುವುದು ನಷ್ಟಕ್ಕೆ ಕಾರಣವಾಗಬಹುದು

ಬ್ಯಾಂಕುಗಳು ಸಾಮಾನ್ಯವಾಗಿ 10 ವ್ಯವಹಾರ ದಿನಗಳಲ್ಲಿ ನಷ್ಟವಾದ ಹಣವನ್ನು ಮರಳಿ ನೀಡುತ್ತವೆ. ಅನಧಿಕೃತ ವಹಿವಾಟುಗಳನ್ನು ಸಾಮಾನ್ಯವಾಗಿ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ಮರುಪಾವತಿ ಮಾಡುತ್ತವೆ. ಇದಕ್ಕಾಗಿ, ಗ್ರಾಹಕರು ವಂಚನೆ ಅಥವಾ ವಂಚನೆಯ ವಹಿವಾಟಿನ ಮೂರು ದಿನಗಳಲ್ಲಿ ಈ ಬಗ್ಗೆ ಬ್ಯಾಂಕಿಗೆ ತಿಳಿಸಬೇಕು. ನಷ್ಟದ ಮೂರು ದಿನಗಳಲ್ಲಿ ಗ್ರಾಹಕರು ಬ್ಯಾಂಕಿಗೆ ಮಾಹಿತಿ ನೀಡದಿದ್ದರೆ, ಆತ 25,000 ರೂ.ವರೆಗೆ ನಷ್ಟ ಅನುಭವಿಸಬಹುದು.

ಈ ಮಾಹಿತಿಗಳನ್ನು ನಿಮಗೆ ಸಹಕಾರಿಯಾಗಬಲ್ಲದು. ಮುಂದೆ ಈ ರೀತಿಯ ಪರಿಸ್ಥಿತಿ ನಿಮಗೆ ಎದುರಾದರೆ ಈ ಮೇಲಿನ ಮಾಹಿತಿಯಂತೆ ಮಾಡಿ. ಆದರೂ ಆನ್ಲೈನ್ ವಂಚನೆಯ ಬಗ್ಗೆ ತುಂಬಾನೇ ಜಾಗರೂಕರಾಗಿರಿ.

Leave a Reply

error: Content is protected !!
Scroll to Top
%d bloggers like this: