ಮನೆಯಲ್ಲಿಯೇ ಇದ್ದು ಹೊಸ ಬೆಡ್ಡಿನಲ್ಲಿ ಕಾಲು ಚಾಚಿ ಮಲಗಿ, ಟಿವಿ ನೋಡುವ ವರ್ಕ್ ಫ್ರಮ್ ಬೆಡ್ ಕೆಲಸಕ್ಕೆ ಅರ್ಜಿ ಆಹ್ವಾನ | ವಾರ್ಷಿಕ ಸಂಬಳ 25 ಲಕ್ಷ !

ಡ್ಯೂಟಿಗೆ ಯಾಕೆ ಆಫೀಸಿಗೆ ಹೋಗಬೇಕು ಮನೆಯಿಂದಲೇ ಕೆಲಸ ಮಾಡುವಂತಿದ್ದರೆ ಎಂದು ಆಲೋಚಿಸುವ ಕಾಲವೊಂದಿತ್ತು. ಕೋರೋನಾ ಕಾರಣದಿಂದ ಅದು ಕೂಡ ಇದೀಗ ನಿಜವಾಗಿದೆ. ವರ್ಕ್ ಫ್ರಮ್ ಹೋಂ, ಕೇವಲ ಐಟಿ ಉದ್ಯೋಗಿಗಳಿಗಲ್ಲದೆ, ಇನ್ನಿತರ ಉದ್ಯೋಗಿಕ ವಲಯಗಳಿಗೂ ವಿಸ್ತರಿಸಿದೆ.
ಈಗ ಸೋಮಾರಿ ಜನರಲ್ಲಿ ಇನ್ನೊಂದು ಆಸೆ ಹುಟ್ಟಿದೆ. ಮನೆಯಲ್ಲಿ ಇದ್ದರೂ ಕೆಲಸ ಮಾಡಲೇ ಬೇಕಲ್ಲ, ಕೆಲಸ ಮಾಡದೆ ಆರಾo ಆಗಿ ಟಿವಿ ನೋಡುತ್ತಾ ಮನೆಯಲ್ಲಿ ಕಾಲ ಕಲೆಯುವಂತಿದ್ದರೆ….?!
ಈಗ ಅಂತವರಿಗಾಗಿಯೂ ಇಲ್ಲೊಂದು ಕನಸಿನ ಉದ್ಯೋಗವಿದೆ. ಅದೇನೆಂದರೆ ವ್ಯಕ್ತಿ ಕಾಲು ಚಾಚಿ ಮಲಗಬೇಕು ಮತ್ತು ಮಲಗಿ ಟಿವಿ ನೋಡುತ್ತಾ ಜೀವನವನ್ನು ಆನಂದಿಸಬಹುದಾಗಿದೆ. ಮಾತ್ರವಲ್ಲದೆ, ಈ ಸೋಮಾರಿ ಕೆಲಸಕ್ಕೆ ವಾರ್ಷಿಕವಾಗಿ ದೊಡ್ಡ ಪ್ಯಾಕೇಜ್ ಲೆಕ್ಕದಲ್ಲಿ ಸಂಬಳವನ್ನು ಎಣಿಸಬಹುದಾಗಿದೆ.

ಅಚ್ಚರಿಯಾದರು ನಿಜ. ಸಾಕಷ್ಟು ಜನರಿಗೆ ಈ ಉದ್ಯೋಗದ ಬಗ್ಗೆ ನಂಬಿಕೆ ಬರಲಿಕ್ಕಿಲ್ಲ. ಆದರೆ ಯುಕೆಯ ಕಂಪನಿಯೊಂದು ಇಂತಹದೊಂದು ಹೊಸ ಕೆಲಸವನ್ನು ಸೃಷ್ಟಿಸಿದೆ. ಟಿವಿ ನೋಡುತ್ತಾ ಟೈಂ ಪಾಸ್ ಮಾಡುತ್ತಾ ಮನೆಯಲ್ಲಿಯೇ ಇರುವ ಕೆಲಸ ಇದು, ಆದರೆ ಭರ್ತಿ ಸಂಬಳ.

ವಾರ್ಷಿಕ 25 ಲಕ್ಷ ರೂ ಸಂಬಳ!

‘ದಿ ಸನ್’​ ವೆಬ್​ಸೈಟ್​ ವರದಿ ಮಾಡಿದ ಪ್ರಕಾರ, ಐಷಾರಾಮಿ ಬೆಡ್​ ಕಂಪನಿ ‘ಕ್ರಾಫ್ಟೆಡ್​ ಬೆಡ್ಸ್’​ ಮ್ಯಾಟ್ರೆಸ್​ ಟೆಸ್ಟರ್​ ಅನ್ನು ನೇಮಿಸಿಕೊಳ್ಳುತ್ತಿದೆ. ಅಂದರೆ ನೇಮಕಗೊಂಡ ಉದ್ಯೋಗಿ ಹಾಸಿಗೆಯಲ್ಲಿ ಮಲಗುವ ಮೂಲಕ ಆ ಹಾಸಿಗೆಯ ಬಗ್ಗೆ ಸರಿಯಾದ ರಿವ್ಯೂ ನೀಡಬೇಕು. ಈ ಕೆಲಸಕ್ಕಾಗಿ ಕಂಪನಿ ವರ್ಷಕ್ಕೆ 25 ಲಕ್ಷ ಸಂಬಳ ನೀಡುತ್ತದೆ. ಹಾಗಾಗಿ ವಾರಕ್ಕೊಮ್ಮ ಉದ್ಯೋಗಿ ಹಾಸಿಗೆ ಗುಣಮಟ್ಟವನ್ನು ಪರೀಕ್ಷಿಸಬೇಕಾಗುತ್ತೆ.

ಕ್ರಾಫ್ಟೆಡ್​ ಬೆಡ್ಸ್ ತನ್ನ ಕಂಪನಿಯ ಹಾಸಿಗೆಗಳ ಖರೀದಿದಾರರು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಬಾರದೆಂದು ಬಯಸುತ್ತದೆ, ಆದ್ದರಿಂದ ಅವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಅವರು ಎಲ್ಲಾ ಪರೀಕ್ಷೆಗಳನ್ನು ಮಾಡಲು ಬಯಸುತ್ತಾರೆ. ಇದಕ್ಕಾಗಿ, ‘ಮ್ಯಾಟ್ರೆಸ್ ಟೆಸ್ಟರ್’ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉದ್ಯೋಗದಲ್ಲಿರುವ ವ್ಯಕ್ತಿಯು ಇಡೀ ವಾರ 37.5 ಗಂಟೆಗಳ ಕಾಲ ಹಾಸಿಗೆಯ ಮೇಲೆ ಮಲಗಬೇಕಾಗುತ್ತದೆ.

ಇದು ಸಂಪೂರ್ಣವಾಗಿ ವಿಚಿತ್ರ ಕೆಲಸವೆ ಸೈ. ಆದರೆ ಬೆಡ್​ ಗುಣಮಟ್ಟ ಮತ್ತು ಗ್ರಾಹಕರ ಸ್ಥಿತಿಗತಿ ಅರ್ಥಮಾಡಿಕೊಂಡು ಕಂಪನಿ ಈ ಕೆಲಸಕ್ಕೆ ಉದ್ಯೋಗಿ ನೇಮಕ ಮಾಡುತ್ತಿದೆ. ಇನ್ನು ಉದ್ಯೋಗಿಗಳು ಕಚೇರಿಗೆ ಬರುವ ಅಗತ್ಯವಿಲ್ಲ. ಹಾಸಿಗೆಗಳನ್ನು ಅವರ ಮನೆಗಳಿಗೆ ತಲುಪಿಸಲಾಗುವುದು. ಅರ್ಜಿದಾರರು ಕೆಲಸ ಪಡೆಯಲು ಕೆಲವು ಷರತ್ತುಗಳನ್ನು ಪೂರೈಸಬೇಕು ಎಂದು ಕಂಪನಿ ತಿಳಿಸಿದೆ.
ಆದ್ರೆ ಮ್ಯಾಟ್ರೆಸ್​ ಟೆಸ್ಟರ್ ಯದ್ಯೋಗಕ್ಕೆ ಅರ್ಜಿ ಸಲ್ಲಿಸುವವರು ಬ್ರಿಟನ್‌ನ ನಿವಾಸಿಯಾಗಿರಬೇಕು. ಸದ್ಯದ ಮಟ್ಟಿಗೆ ಭಾರತದ ಸೋಮಾರಿಗಳಿಗೆ ಹುದ್ದೆಗೆ ಆಯ್ಕೆಯಾಗುವ ಅರ್ಹತೆ ಇಲ್ಲ !

ಯಾವುದೇ ಹಸ್ತಕ್ಷೇಪವಿಲ್ಲದೆ ಹಾಸಿಗೆಯನ್ನು ಮಾತ್ರ ಪರೀಕ್ಷಿಸಲು ಶಕ್ತನಾಗಿರಬೇಕು. ಇದರ ಹೊರತಾಗಿ, ಅವನು ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು, ಇದರಿಂದ ಅವನು ಹಾಸಿಗೆ ಪರೀಕ್ಷೆಯ ವಿಮರ್ಶೆಯನ್ನು ನಮಗೆ ಲಿಖಿತವಾಗಿ ಕಳುಹಿಸಬಹುದು ಎಂದು ಕಂಪನಿ ತಿಳಿಸಿದೆ. ಸರಿಯಾದ ನಿದ್ದೆಮಾಡಲು ಮತ್ತು ಬೆಡ್​ ಮಲಗಲು ಸೂಕ್ತವೇ ಎಂಬುದನ್ನು ಪ್ರಮುಖವಾಗಿ ಕಂಪನಿಗೆ ತಿಳಿಸಬೇಕಾಗಿದೆ. ಆದರೆ ಮಲಗಲು ಮತ್ತು ನಿದ್ದೆ ಮಾಡಲು ಮಾತ್ರ ಸೂಕ್ತವೇ ಈ ಬೆಡ್ ? ಈ ಬೆಡ್ ನಲ್ಲಿ ಮಲಗಿ ಮಾಡುವ ಮಿಲನದ ಪರ್ಫಾರ್ಮೆನ್ಸ್ ಅಳೆಯಲು ಯಾಕೆ ಹೊರಟಿಲ್ಲ ಎಂದು ರಸಿಕ ಗ್ರಾಹಕರು ಕಂಪನಿಗೆ ದೂರು ನೀಡಿದ್ದಾರಂತೆ.

Leave A Reply

Your email address will not be published.