‘ಸಾಂಬಾರ್ ರುಚಿಸಲಿಲ್ಲ’ ಎಂಬ ಕ್ಷುಲ್ಲಕ ಕಾರಣಕ್ಕೆ ತನ್ನ ತಾಯಿ ಮತ್ತು ಸಹೋದರಿಯನ್ನೇ ಗುಂಡಿಕ್ಕಿ ಹತ್ಯೆಮಾಡಿದ ಯುವಕ!!

ಈ ಜಗತ್ತಲ್ಲಿ ವಿಚಿತ್ರ-ವಿಚಿತ್ರವಾದ ಮಾನವರು ಇರುವುದಂತೂ ನಿಜ. ತನ್ನ ಸುಖ ಜೀವನಕ್ಕಾಗಿ ಯರನ್ನು ಬೇಕಾದರೂ ಬಲಿ ಕೊಡುವಂತಹ ಕಾಲವಿದು. ಹಾಗೇ ಇಲ್ಲಿ ನಡೆದಿದ್ದು ಅದೇ ರೀತಿ..

ಮನೆಯಲ್ಲಿ ಕೇವಲ ರುಚಿಯಾದ ಸಾಂಬಾರ್ ಮಾಡದಿದ್ದಕ್ಕೆ ಯುವಕನೋರ್ವ ತನ್ನ ತಾಯಿ ಮತ್ತು ಸಹೋದರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.ಹೌದು. ಈ ಘಟನೆ ನಡೆದಿರೋದು ಉತ್ತರ ಕನ್ನಡ ಜಿಲ್ಲೆಯ ಕೊಡಗೋಡು ಎಂಬಲ್ಲಿ.

ಆರೋಪಿಯನ್ನು 24 ವರ್ಷದ ಮಂಜುನಾಥ ಹಸ್ಲರ್ ಎಂದು ಗುರುತಿಸಲಾಗಿದೆ.ಮೃತರನ್ನು ಮಂಜುನಾಥ್ ತಾಯಿ 42 ವರ್ಷದ ಪಾರ್ವತಿ ನಾರಾಯಣ ಹಸ್ಲರ್ ಮತ್ತು 19 ವರ್ಷದ ರಮ್ಯಾ ನಾರಾಯಣ ಹಸ್ಲರ್ ಎಂದು ಗುರುತಿಸಲಾಗಿದೆ.

ಆರೋಪಿ ಮಂಜುನಾಥ್ ಮದ್ಯವ್ಯಸನಿ ಎಂದು ತಿಳಿದು ಬಂದಿದ್ದು,ರುಚಿಯಾದ ಸಾಂಬರ್ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ತಾಯಿಯೊಂದಿಗೆ ಜಗಳವಾಡಿದ್ದನು. ಅಲ್ಲದೆ ಸಾಲ ಪಡೆದು ತನ್ನ ತಂಗಿಗೆ ಸೆಲ್‌ಫೋನ್ ಖರೀದಿಸುವ ತಾಯಿಯ ಯೋಜನೆಯನ್ನು ಅವನು ವಿರೋಧಿಸಿದನು ಎಂದು ತಿಳಿದುಬಂದಿದೆ.

ಮೊಬೈಲ್ ಕೊಡಿಸಬೇಡ ಎಂದು ಹೇಳಲು ನೀನು ಯಾರು ಎಂದು ಪಾರ್ವತಿ ಮಗ ಮಂಜುನಾಥ್ ನನ್ನು ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಂಜುನಾಥ್, ಮನೆಯಲ್ಲಿ ಮಲಗಿದ್ದ ತಾಯಿಯ ಮೇಲೆ ದೇಶೀಯ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ನಂತರ, ಆತ ತನ್ನ ಸಹೋದರಿಯ ಮೇಲೆ ಗುಂಡು ಹಾರಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ತಂದೆ ಮನೆಗೆ ಮರಳಿದ ನಂತರ ಆತನ ಮಗನ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

Leave A Reply