ಬರೋಬ್ಬರಿ 60 ಕೆಜಿ ಚಿನ್ನದ ಆಭರಣ ತೊಟ್ಟು ಕೊರಳು ಜಗ್ಗಿಕೊಂಡು ನಗುತ್ತಾ ಕುಳಿತ ವಧು | ನಸುನಗಲು ಕಾರಣ ಗೊತ್ತಲ್ವಾ ಬಾಸ್ ?!

ಕೇವಲ ಭಾರತೀಯರಿಗಲ್ಲ, ಜಗತ್ತಿನಾದ್ಯಂತ ಮಹಿಳೆಯರಿಗೆ ಚಿನ್ನದ ಆಭರಣ ಎಂದರೆ ಬಹಳ ಇಷ್ಟ. ಅದರಲ್ಲಿಯೂ ವಿಶೇಷವಾಗಿ ಮದುವೆ ಸಮಾರಂಭಗಳಲ್ಲಿ ಚಿನ್ನ ಮಂಗಳಕರವೆಂದೂ ಪರಿಗಣಿಸಲಾಗಿದೆ. ಮದುವೆಯಾಗುವ ವಧು ಮತ್ತು ಮದುವೆ ಸಮಾರಂಭದಲ್ಲಿ ಭಾಗವಹಿಸುವ ಮಹಿಳೆಯರು ಮೈಮೇಲೆ ಆಭರಣ ಹೇರಿಕೊಂಡು ಕೊರಳು ಕೊಂಕಿಸಿ ನಡೆಯದೆ ಹೋದರೆ ಅದು ಮದುವೆಗೆ ಶೋಭೆ ಅಲ್ಲ. ಅಷ್ಟರಮಟ್ಟಿಗೆ ಹಳದಿ ಲೋಹದ ಮೋಹ ಭಾರತೀಯರನ್ನು ಮಾತ್ರವಲ್ಲದೆ ಪ್ರಪಂಚದಾದ್ಯಂತ ಮದುವೆಯ ಭಾಗವಾಗಿ ಹೋಗಿದೆ.

Ad Widget

ಹೀಗಿರುವಾಗ ಇದೀಗ ವೈರಲ್ ಆಗಿ ಅಲೆದಾಡುತ್ತಿರುವ ಸುದ್ದಿಯೆಂದರೆ, ಚೀನಾದ ವಧು ಮದುವೆಯ ದಿನದಂದು ಬರೋಬ್ಬರಿ 60 ಕೆಜಿ ಚಿನ್ನದ ಆಭರಣ ತೊಟ್ಟು ಅತಿಥಿಗಳನ್ನು ಬೆರಗುಗೊಳಿಸಿದ್ದಾಳೆ. ಆಕೆ ವರನಿಂದ ಉಡುಗೊರೆಯಾಗಿ ಪಡೆದ ಚಿನ್ನದ ಆಭರಣಗಳನ್ನು ಧರಿಸಿ, ಕೊರಳು ಉಳುಕಿಸಿಕೊಂಡು ಕುಳಿತ ಭಂಗಿ ನಮ್ಮನ್ನು ಆಕರ್ಷಿಸುತ್ತಿದೆ.

Ad Widget . . Ad Widget . Ad Widget .
Ad Widget

ವಧು ಚಿನ್ನವನ್ನು ಧರಿಸಿ ಕುಳಿತಿರುವ ಚಿತ್ರವೊಂದು ಫುಲ್ ವೈರಲ್ ಆಗಿದೆ. ವಧು, ಮದುವೆಯ ಉಡುಗೆ ತೊಟ್ಟು ಕುಳಿತಿದ್ದಾಳೆ. ಜತೆಗೆ ಕೈಗಳಲ್ಲಿ ಗುಲಾಬಿ ಹೂಗಳನ್ನು ಹಿಡಿದಿದ್ದಾಳೆ. ಇದರ ಜತೆಗೆ ಭಾರವಾದ ಬರೋಬ್ಬರಿ 60 ಕೆಜಿ ಚಿನ್ನದ ಆಭರಣಗಳನ್ನು ಧರಿಸಿ ಆಕೆ ನಗುತ್ತಾ ಕುಳಿತಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Ad Widget
Ad Widget Ad Widget

ಮದುವೆಯ ಸ್ಥಳಕ್ಕೆ ಬಂಗಾರದ ಭಾರಕ್ಕೆ ಬಗ್ಗಿಕೊಂಡು ಆಕೆ ಆಗಮಿಸುತ್ತಿದ್ದಂತೆಯೇ ಅಥಿತಿಗಳೆಲ್ಲಾ ಆಕೆಯನ್ನು ಆಶ್ಚರ್ಯದಿಂದ ಮತ್ತು ಆಸೆಯಿಂದ ನೋಡಿದ್ದಾರೆ. ಅಷ್ಟೊಂದು ಭಾರವಾದ ಚಿನ್ನವನ್ನು ಆಕೆ ಹೊತ್ತು ನಡೆದು ಬರುತ್ತಿರುವುದು ಅತಿಥಿಗಳನ್ನು ಬೆರಗುಗೊಳಿಸಿದೆ. ಮುಗುಳ್ನಗುತ್ತಾ ಬಂದ ವಧು, ಮದುವೆಯ ಸಮಾರಂಭವನ್ನು ಮುಂದುವರೆಸುವಂತೆ ಕೇಳಿಕೊಂಡಿದ್ದಾಳೆ. ವರದಿಯ ಪ್ರಕಾರ, ವರ ಶ್ರೀಮಂತ ಕುಟುಂಬದಿಂದ ಬಂದವನು, ವಧುವಿಗೆ ಬರೋಬ್ಬರಿ 60 ಚಿನ್ನದ ನೆಕ್ಲೆಸ್ ನೀಡಲಾಗಿತ್ತು. ಜತೆಗೆ ಎರಡು ಬೃಹತ್ ಬಳೆಗಳನ್ನು ವಧುವಿಗೆ ನೀಡಲಾಗಿದೆ ಎಂಬುದು ತಿಳಿದು ಬಂದಿದೆ. ಮೊದಲೇ ಚೀನಾದ ಮಹಿಳೆಯರು ಇರುವುದು ಸಣ್ಣಗೆ. ಅಂತಹಾ ಬಳುಕುವ ಬಳ್ಳಿಗೆ ಹಬ್ಬಿಕೊಂಡು 60 ಬಂಗಾರದ ನೆಕ್ಲೆಸ್ ಬಳ್ಳಿಗಳು !  ಮದುಮಗಳು ಮಳ್ಳಿಯಂತೆ ನಗುತ್ತಿದ್ದಾಳೆ. ನಗು ಸಕಾರಣ.!!

Leave a Reply

error: Content is protected !!
Scroll to Top
%d bloggers like this: