ನಿರ್ಬಂಧವಿದ್ದರೂ ಬೆಳಿಗ್ಗೆ 5 ಕ್ಕೆ ಮಸೀದಿಯಲ್ಲಿ ಅಜಾನ್ ಕೂಗುತ್ತಿದ್ದರೂ ಯಾಕೆ ತಡೆಯುತ್ತಿಲ್ಲ ಪ್ರಶ್ನಿಸಿದ ಶ್ರೀ ರಾಮ ಸೇನೆ | ಶಬ್ದ ಮಾಲಿನ್ಯ ತಡೆಯುವಂತೆ ಶ್ರೀರಾಮ ಸೇನೆಯಿಂದ ಕಡಬ ತಹಶೀಲ್ದಾರ್ ಗೆ ಮನವಿ

ಕಡಬ: ಶಬ್ದ ಮಾಲಿನ್ಯ ತಡೆಯುವಂತೆ ಆಗ್ರಹಿಸಿ ಕಡಬ ತಹಶೀಲ್ದಾರರಿಗೆ ಶ್ರೀ ರಾಮ ಸೇನೆಯಿಂದ ಸೋಮವಾರ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ಕಾರ್ಯ ನಿರ್ವಹಿಸುತ್ತಿಲ್ಲ, ಪ್ರಾರ್ಥನೆ, ಭಕ್ತಿಗೀತೆ, ಭಜನೆಗೆ ವಿರೋಧವಿಲ್ಲ ಆದರೆ ಆಸ್ಪತ್ರೆ, ಶಾಲಾ ಕಾಲೇಜು,ಜನವಸತಿ ಪ್ರದೇಶ, ಕೋರ್ಟ್ ಸರ್ಕಾರಿ ಕಚೇರಿಗಳು,ದೇವಸ್ಥಾನ, ಮಸೀದಿ ಚರ್ಚ್‌ಗಳನ್ನು ನಿಶ್ಯಬ್ದ ವಲಯವೆಂದು ಸರ್ವೋಚ್ಚ ನ್ಯಾಯಾಲಯದ ತೀರ್ಪಿದ್ದರೂ ಶಬ್ದ ಮಾಲಿನ್ಯ ನಿರಂತರ ನಡೆಯುತ್ತಲೇ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದ್ದು,ಪರವಾನಿಗೆ ಇಲ್ಲದ ಮೈಕ್ ತೆರವುಗೊಳಿಸಲು ಸರ್ವೋಚ್ಚ ನ್ಯಾಯಾಲಯದ ಆಜ್ಞೆ ಇದ್ದರೂ ತಮ್ಮ ಇಲಾಖೆ ಹಾಗೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ರಾತ್ರಿ 10ರಿಂದ ಬೆಳಿಗ್ಗೆ 6 ರ ವರೆಗೆ ಮೈಕ್ ನಿರ್ಬಂಧ ಇದ್ದರೂ ಬೆಳಿಗ್ಗೆ 5 ಕ್ಕೆ ಮಸೀದಿಯಲ್ಲಿ ಅಜಾನ್ ಕೂಗುತ್ತಿದ್ದರೂ ಯಾಕೆ ತಡೆಯುತ್ತಿಲ್ಲ ಎಂದು ಮನವಿಯಲ್ಲಿ ಪ್ರಶ್ನಿಸಿದ್ದಾರೆ.

ವೃದ್ಧರ, ವಿದ್ಯಾರ್ಥಿಗಳ ಕಾರ್ಮಿಕರ, ರೋಗಿಗಳು ಸಾಮಾನ್ಯ ಜನರ ನೆಮ್ಮದಿ ಭಂಗಗೊಳಿಸುತ್ತಿರುವುದು ಸಂವಿಧಾನ ವಿರೋಧಿಯಾಗಿದೆ ಇದು ತಮ್ಮ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನೆ ಮಾಡಿರುವ ಶ್ರೀ ರಾಮ ಸೇನೆ, ನ್ಯಾಯಾಲಯದ ಆಜ್ಞೆಯಿದ್ದರೂ ಪೊಲೀಸರ ಅಸಡ್ಡೆ ನಿರ್ಲಕ್ಷ್ಯದಿಂದಾಗಿ ದಿನೇ ದಿನೇ ಶಬ್ದ ಮಾಲಿನ್ಯ ಹೆಚ್ಚುತ್ತಲೇ ಇದೆ. ಇದು ಸಂವಿಧಾನ ಕಾನೂನು, ನ್ಯಾಯಾಂಗ ನಿಂದನೆ ಸ್ಪಷ್ಟವಾಗಿದೆ. ಕಡಬ ತಾಲೂಕಿನಲ್ಲಿ ಈ ಆಜ್ಞೆಯನ್ನು ಜಾರಿಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವೆಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ನೀಡುವ ಸಂಧರ್ಭ ಶ್ರೀ ರಾಮ ಸೇನೆ ಕಡಬ ತಾಲೂಕು ಘಟಕದ ಪ್ರಮುಖರಾದ ಗೋಪಾಲ ನಾಯ್ಕ್ ಮೇಲಿನ ಮನೆ , ತಾಲೂಕು ಘಟಕದ ಉಪಾಧ್ಯಕ್ಷರಾದ ದಯಾನಂದ ಕೊಡಿಂಬಾಳ, ರಾಜೇಶ್ ಅಚಾರ್ಯ ಕೋಡಿಂಬಾಳ, ಗೋವರ್ಧನ ಅಮೈ ಪಿಜಕ್ಕಲ, ಪ್ರದೀಪ್ ಅಂಗಡಿಮನೆ ಹಾಜರಿದ್ದರು.

Leave A Reply

Your email address will not be published.