ಕಡಬ: ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕುಕ್ಕೇ ಸುಬ್ರಹ್ಮಣ್ಯದ ದೇವರಗದ್ದೆ ಎಂಬಲ್ಲಿ ನಡೆದಿದೆ.
ಮೂಲತಃ ಚಾರ್ವಾಕ ಗ್ರಾಮದವರಾಗಿದ್ದು, ಕೆಲ ವರ್ಷಗಳಿಂದ ಸುಬ್ರಹ್ಮಣ್ಯ ದೇವರಗದ್ದೆಯ ನಿವಾಸಿಯಾಗಿದ್ದ ಉಮೇಶ್ ಎಂಬವರು ಆತ್ಮಹತ್ಯೆ ಮಾಡಿಕೊಂಡವರು. ಇವರು ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಮುಡಿ ತೆಗೆಯುವ ಕೆಲಸ ಮಾಡಿಕೊಂಡಿದ್ದು ಕೆಲ ತಿಂಗಳುಗಳ ಹಿಂದೆ ಇವರ ತಾಯಿ ಮೃತಪಟ್ಟಿದ್ದರು.
ಆ ಬಳಿಕ ಇವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಅ.11ರ ರಾತ್ರಿ ಮನೆಯಲ್ಲಿ ಮಲಗಿದ್ದು ಬೆಳಿಗ್ಗೆ ಎದ್ದು ಮನೆಯವರು ನೋಡಿದಾಗ ಕೊಠಡಿಯೊಂದರಲ್ಲಿ ನೇಣು ಬಿಗಿದು ಉಮೇಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಅವರ ತಂದೆ ಸುಬ್ರಹ್ಮಣ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
You must log in to post a comment.