60000ದ ಗಡಿ ದಾಟಿ ನುಗ್ಗುತ್ತಿರುವ ಷೇರುಪೇಟೆ ಸೆನ್ಸೆಕ್ಸ್ ಎಂಬ ಕೊಬ್ಬಿದ ಗೂಳಿ | 18000 ಬೇಲಿಯಾಚೆಗೆ ಇಣುಕಿ ನೋಡುತ್ತಿರುವ ನಿಫ್ಟಿ !

ಮುಂಬಯಿ: ಕಿವಿಗೆ ಗಾಳಿ ಸಾಕಿದ ಗೂಳಿಯಂತೆ ನುಗ್ಗಿ ಓಡುತ್ತಿದೆ ಷೇರು ಮಾರುಕಟ್ಟೆಯ ಕೊಬ್ಬಿದ ಗೂಳಿ. ಹೂಂಕರಿಸಿಕೊಂಡು ಓಡುವ ಅದರ ವೇಗಕ್ಕೆ 60000 ದ ಗಡಿ ಉಡೀಸ್ !

ಜಾಗತಿಕ ಷೇರುಮಾರುಕಟ್ಟೆಯಲ್ಲಾದ ಧನಾತ್ಮಕ ವಹಿವಾಟಿನ ಪರಿಣಾಮ ಸೋಮವಾರ ಇಂದು ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ದಾಖಲೆ ತಲುಪಿ ಗುಡ್ಡ ಏರಿ ಕೂತಿದೆ. ನೀವಾಗ ಹೂಡಿಕೆದಾರರಲ್ಲಿ ಒಂದು ರೀತಿಯ ಅಸ್ಥಿರತೆ. ಮತ್ತಷ್ಟು ಗಡಿಗಳನ್ನು ದಾಟಿ ಷೇರುಮಾರುಕಟ್ಟೆ ಮುಂದಕ್ಕೆ ಹೋಗುತ್ತದೆ ಯಾ ಅಥವಾ ಹಿಂದಿರುಗಿ ಗೂಳಿ ಗುಡ್ಡ ಇಳಿದರೆ ಹಾಕಿದ ದುಡ್ಡಿನ ಕಥೆಯೇನು ಎಂಬ ತಳಮಳ ಉಂಟಾಗಿದೆ. ಇಂದು
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 76.72 ಅಂಕ ಏರಿಕೆಯಾಗಿದ್ದು, 60,135.78 ಅಂಕಗಳ ಸಾರ್ವಕಾಲಿಕ ಗರಿಷ್ಠ ಹೆಚ್ಚಳದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 50.80 ಅಂಕ ಏರಿಕೆಯಾಗಿದ್ದು, 17,946ರ ಗಡಿ ತಲುಪಿದೆ.

ಟಾಟಾ ಮೋಟಾರ್ಸ್, ಕೋಲ್ ಇಂಡಿಯಾ, ಮಾರುತಿ ಸುಜುಕಿ, ಪವರ್ ಗ್ರಿಡ್ ಕಾರ್ಪೋರೇಷನ್ ಷೇರುಗಳು ಲಾಭಗಳಿಸಿವೆ. ಆ ಹಿನ್ನೆಲೆಯಲ್ಲಿ ಸೆನ್ಸೆಕ್ಸ್, ನಿಫ್ಟಿ ಪೀಕ್ ಗೆ ಏರಿದೆ.

ಈ ಹಿಂದೆ ಇದ್ದ resistance ಲೆವೆಲ್ ಅನ್ನು ದಾಟಿದ ನಿಫ್ಟಿ ಸೆನ್ಸೆಕ್ಸ್ ನ ಕಾರಣ ಮತ್ತಷ್ಟು ಎತ್ತರಕ್ಕೆ ಸೂಚ್ಯಂಕಗಳು ಇರುವ ಲಕ್ಷಣ ಕಂಡು ಬಂದಿದೆ. ಆದರೂ ಹೂಡಿಕೆದಾರರು ಜಾಗೃತರಾಗಿ ಇರುವುದು ಮುಖ್ಯ ಎನ್ನುವುದು ಹೂಡಿಕೆ ತಜ್ಞರ ಅಭಿಪ್ರಾಯ.

Leave A Reply

Your email address will not be published.