ಮಡಿಕೇರಿ ಕಂದಾಯ ಪ್ರದೇಶದಲ್ಲಿ ಸುಳ್ಯಅರಣ್ಯಾಧಿಕಾರಿಗಳ ದಾಂಧಲೆ ,ಕೃಷಿಕನಿಗೆ ಬೆದರಿಕೆ ಆರೋಪ | ಮಡಿಕೇರಿ ಪೊಲೀಸರಿಂದ ಕೇಸು ದಾಖಲು

ಸುಳ್ಯ : ತಮ್ಮ ಕಾರ್ಯ ವ್ಯಾಪ್ತಿಯ ಹೊರತಾದ ಪ್ರದೇಶಕ್ಕೆ ದಾಳಿ ನಡೆಸಿ ಅಕ್ರಮ ಕೃಷಿ ಚಟುವಟಿಕೆ ನಡೆಸಿರುವುದೆಂದು ಆರೋಪಿಸಿ ಕಾನೂನು ಬಾಹಿರವಾಗಿ ಕೃಷಿಯನ್ನು ಕಡಿದು ನಾಶಗೊಳಿಸಿ,ಕೃಷಿಕನಿಗೆ ಜೀವಬೆದರಿಕೆಯೊಡ್ಡಿದ ಆರೋಪದ ಮೇರೆಗೆ ಅರಣ್ಯಾಧಿಕಾರಿ ಸಹಿತ ನಾಲ್ವರ ವಿರುದ್ಧ ಪೊಲೀಸ್ ಕೇಸು ದಾಖಲಾದ ಘಟನೆ ಮಡಿಕೇರಿ ತಾಲೂಕಿನ ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆದಿದೆ.

ಸುಳ್ಯ ಫಾರೆಸ್ಟರ್ ಚಂದ್ರ ಶೇಖರ , ಹಾಗು ಅರಣ್ಯ ವೀಕ್ಷಕ ಸುಂದರ ಕೆ.,ಪಾರೆಸ್ಟ್ ಗಾರ್ಡ್ ಮನೋಜ್ ಹಾಗೂ ಇಲಾಖೆಯ ಸಿಬ್ಬಂದಿ ಚಿದಾನಂದ ಬಾಳೆಕಜೆ ಎಂಬವರ ವಿರುದ್ಧ ಮಡಿಕೇರಿ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ: ಕಳೆದೊಂದು ವರ್ಷದ ಹಿಂದೆ ಮಡಿಕೇರಿ ತಾಲೂಕು ಚೆಂಬು ಗ್ರಾಮದ ಮಾಪಳಕಜೆ ಸಿ.ಆರ್.ಪುರುಷೋತ್ತಮ ಎಂಬವರು ಸುಮಾರು 2.45 ಎಕ್ರೆ ಜಾಗದಲ್ಲಿ ಅಡಿಕೆ, ಕಾಫಿ, ಕರಿಮೆಣಸು, ಗೇರು ಕೃಷಿ ಕೈಗೊಂಡಿದ್ದರು.ಇದು ಮಡಿಕೇರಿ ತಾಲೂಕಿನ ಕಂದಾಯ ವ್ಯಾಪ್ತಿ ಯಾಗಿದ್ದು ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಲಾಗಿತ್ತು.

ಈ ಸ್ಥಳಕ್ಕೆ ಅಕ್ರಮ ಪ್ರವೇಶ ನಡೆಸಿದ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಅರಣ್ಯ ಇಲಾಖಾ ಜಾಗದಲ್ಲಿ ಕೃಷಿ ನಡೆಸಿರುವುದಾಗಿ ಆರೋಪಿಸಿ 2020 ಜುಲೈ 18 ರಂದು ಕೃಷಿ ನಾಶಗೊಳಿಸಿದ್ದಲ್ಲದೇ ಈ ಬಗ್ಗೆ ಪ್ರಶ್ನಿಸಿದ ಪುರುಷೋತ್ತಮ ಅವರ ಅಣ್ಣ ವಾಸುದೇವ ಅವರಿಗೆ ಅಧಿಕಾರಿಗಳು ಜೀವಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆ ಜಂಟಿ ಜಾಗ ಸರ್ವೇ ನಡೆಸಿದಾಗ ಸದ್ರಿ ಸ್ಥಳ ಅರಣ್ಯ ಅಧಿಕಾರಿಯ ಗಸ್ತು ವ್ಯಾಪ್ತಿಯಿಂದ ಹೊರಗಿದ್ದು ಸುಳ್ಯ ಬದಲಾಗಿ ಮಡಿಕೇರಿ ವ್ಯಾಪ್ತಿಯದ್ದೆಂದು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ನಿಯಮಬಾಹಿರ ನಡೆಯನ್ನು ಪುಷ್ಟಿಕರಿಸಿತ್ತು.

ಅದರಂತೆ ಮಡಿಕೇರಿ ಗ್ರಾಮಾಂತರ ಪೋಲೀಸರು ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಇದೀಗ ಕೊಲೆ ಬೆದರಿಕೆ, ಕೃಷಿನಾಶ ಮತ್ತಿತರ ಕಲಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.